ಎನ್‌ಡಿಎ ಒಕ್ಕೂಟದಲ್ಲಿರೋ ಸುಮಲತಾ ಅವರಿಗೆ ಟಿಕೆಟ್ ಕೇಳೋಕೆ ಆಗುತ್ತಾ: ಪ್ರೀತಮ್ ಗೌಡ ಅಚ್ಚರಿಯ ನಡೆ

By Suvarna News  |  First Published Feb 4, 2024, 3:33 PM IST

ಮಂಡ್ಯ ಲೋಕ ಅಖಾಡ ರಂಗೇರಿದೆ.  ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದ್ದು,  ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳಲು ಒತ್ತಾಯ ಕೇಳಿಬಂದಿದೆ.


ಮಂಡ್ಯ (ಫೆ.4): ಮಂಡ್ಯ ಲೋಕ ಅಖಾಡ ರಂಗೇರಿದೆ. ಟಿಕೆಟ್ ಹಂಚಿಕೆ ಕುರಿತು ಬಿಜೆಪಿ ಮಹತ್ವದ ಸಭೆ ನಡೆಸಿದೆ. ಮಂಡ್ಯದ ಪಾಂಡವಪುರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದ್ದು, ಸಭೆಯಲ್ಲಿ ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳಲು ಒತ್ತಾಯ ಕೇಳಿಬಂದಿದೆ. ಬಿಜೆಪಿ ನಾಯಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡದಂತೆ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕ ಪ್ರೀತಂ ಗೌಡರಿಂದಲೂ ಒತ್ತಾಯ ಕೇಳಿ ಬಂದಿದೆ. ಎಲ್ಲರ ಅಭಿಪ್ರಾಯದಂತೆ ಕ್ಷೇತ್ರ ಉಳಿಸಿಕೊಳ್ಳುವಂತೆ ರಾಜ್ಯ ನಾಯಕರ ಗಮನಕ್ಕೆ ತರಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಮಾಜಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ.

Tap to resize

Latest Videos

ಅಂಬಾನಿ ಮಾಸ್ಟರ್‌ ಪ್ಲಾನ್‌, ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್‌ ಪ್ರೇಮ್‌ ಗೆ ದೊಡ್ಡ ಅಘಾತ

ಮಂಡ್ಯ‌ ಜಿಲ್ಲೆಯ ಪಾಂಡವಪುರದಲ್ಲಿ ಹೇಳಿಕೆ ನೀಡಿರುವ ಮಾಜಿ ಶಾಸಕ ಪ್ರೀತಂಗೌಡ ಹಾಸನ, ಮಂಡ್ಯದಲ್ಲೂ ಬಿಜೆಪಿಗೆಯೇ ಟಿಕೆಟ್ ನೀಡಬೇಕೆಂಬ ಅಪೇಕ್ಷೆ ಕಾರ್ಯಕರ್ತರಲ್ಲಿ ಇದೆ. ಬಿಜೆಪಿ 28 ರಲ್ಲಿ 28 ಕ್ಷೇತ್ರದಲ್ಲೋ ಅಥವಾ 27, 26 ಕ್ಷೇತ್ರಗಳಲ್ಲೋ‌ ಸ್ಪರ್ಧೆ ಮಾಡುತ್ತೋ ಎಂದು ತೀರ್ಮಾನ ಆಗಿಲ್ಲ. ಹಾಸನ , ಮಂಡ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು.

ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರೋದು ಒಂದು ಕ್ಷೇತ್ರದಲ್ಲಿ ಅಷ್ಟೇ, ಬಿಜೆಪಿ ಸಹ ಪ್ರಬಲ ಪೈಪೋಟಿ ನೀಡಿದೆ. ಹೀಗಾಗಿ ಕಾರ್ಯಕರ್ತರು ಮಂಡ್ಯ ಸೀಟ್ ಕೇಳ್ತಾ ಇದ್ದಾರೆ. ಸೀಟೇ ಕೇಳೋದು ತಪ್ಪು ಅಂದ್ರೆ ಅದು ಸರಿಯಲ್ಲ. ಮಂಡ್ಯದಲ್ಲಿ ಬಿಜೆಪಿಯ ಹಲವು ನಾಯಕರು ಇದ್ದಾರೆ, ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸದ್ಯ ಸುಮಲತಾ ಅವರು ಮಂಡ್ಯದ ಹಾಲಿ ಸಂಸದರು. ಅವರ ಅಭಿಪ್ರಾಯವನ್ನು ಸಂಗ್ರಹಿಸಿ ರಾಜ್ಯ ನಾಯಕರಿಗೆ ಮಾಹಿತಿ ನೀಡುತ್ತೇನೆ.

ಜೆಡಿಎಸ್‌ ಅವರು ಮಂಡ್ಯ, ಹಾಸನ ಕೇಳ್ತಾ ಇರೋದು ಸತ್ಯ. ಆದ್ರೆ ಇನ್ನೂ ತೀರ್ಮಾನ ಆಗಿಲ್ಲ. ಹಾಸನದಲ್ಲಿ ಸದ್ಯ ಜೆಡಿಎಸ್ ಎಂಪಿ ಇದ್ದಾರೆ ಎಂದು ಟಿಕೆಟ್ ಕೇಳಬಾರದಾ? ಸದ್ಯ ಸುಮಲತಾ ಅವರು‌ ಮಂಡ್ಯ ಎಂಪಿ ಅವರು ಎನ್‌ಡಿಎ ಒಕ್ಕೂಟದಲ್ಲಿ ಇದ್ದಾರೆ. ಈಗ ನಾವು ಸುಮಲತಾ ಅವರಿಗೆ ಟಿಕೆಟ್ ಎಂದು‌ ಕೇಳೋಕೆ ಆಗುತ್ತಾ. ಹಾಸನದಲ್ಲಿ ಹಾಲಿ ಸಂಸದರು ಇದ್ದಾರೆ ಅವರಿಗೆ ಕೊಡಬೇಕು ಅಂದ್ರೆ, ಮಂಡ್ಯದಲ್ಲಿ ಸುಮಲತಾ ಅವರಿಗೆ ಕೊಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಮಾರ್ಚ್ ಅಂತ್ಯಕ್ಕೆ 5 ಸಾವಿರ ಬಸ್ ಸಾರ್ವಜನಿಕ ಸೇವೆಗೆ: ಸಚಿವ ರಾಮಲಿಂಗಾರೆಡ್ಡಿ

ಕಳೆದ ಚುನಾವಣೆಯ ಗೆಲುವು ಒಂದೇ ಮಾನದಂಡ ಅಲ್ಲ. ಈಗಿನ ಶಕ್ತಿ‌ ಹಾಗೂ ಗೆಲುವಿನ ಬಗ್ಗೆ ನೋಡಬೇಕಾಗುತ್ತದೆ. ಎರಡು ಪಕ್ಷದ ಕಾರ್ಯಕರ್ತರ ಒಪ್ಪಿಗೆಯಿಂದ ಅಭ್ಯರ್ಥಿ ಆಗಬೇಕು. ನಾನು ಸೋತಿರಬಹದು, ಆದರೆ ಅದರಿಂದ ಹೊರಬಂದು ಕೆಲಸ ಮಾಡ್ತಾ ಇದೀನಿ. ನಾನು ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ನಿಲ್ಲಲ್ಲ ಎಂದು ನಮ್ಮ ನಾಯಕರಿಗೂ ಹೇಳಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಎಲ್ಲಿ‌ ಕಳೆದುಕೊಂಡೋ‌ ಅಲ್ಲಿಯೇ ಹುಡುಕುತ್ತೇನೆ. ನನಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಇಲ್ಲಿ‌ ಜೆಡಿಎಸ್ ಜೊತೆ ಮನಸ್ತಾಪ ಎಲ್ಲಾ ಬೇರೆಯವರ ಅನಿಸಿಕೆ ಅಷ್ಟೇ.

ಮಂಡ್ಯ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಅವರು ಬಂದಾಗ ಹೋಗಿಲ್ಲ. ನನ್ನ ಪಾತ್ರ ಏನು ಅಷ್ಟು ಮಾಡಿದ್ದೇನೆ. ನಮಗೆ ಎಂಪಿ ಚುನಾವಣೆ ಗೆಲುವು ಮಾನದಂಡ ಅಷ್ಟೇ. ಸರ್ವೇ ರಿಪೋರ್ಟ್ ಯಾರಿಗೆ ಬರುತ್ತೆ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಮುಂದೆ ಪಕ್ಷ ಬೆಳೆಯಬೇಕು ಅಂದ್ರೆ ದಿಟ್ಟ ನಿರ್ಧಾರ ತೆಗೆದುಕೊಳ್ಳಿ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅದನ್ನು ನಮ್ಮ ನಾಯಕರಿಗೆ ಹೇಳ್ತೀನಿ ಎಂದಿದ್ದಾರೆ.

click me!