ಚಿಕ್ಕಮಗಳೂರು ನಗರದ ಬಾಲಕೃಷ್ಣ ಎಂಬ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಸಿದ್ದರಾಮಯ್ಯ ಶಾಸಕ ಸಿ.ಟಿ. ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಎಕರೆ ತೋಟವನ್ನ ಮಾರಿ ಒಂದು ಕೋಟಿ ಕೊಡೋದಾಗಿ ಸಿದ್ದರಾಮಯ್ಯ ಅವರಿಗೆ ಆಫರ್ ನೀಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.2): ರಾಜ್ಯದಲ್ಲಿ ಮುಂದಿನ ವಿಧಾನಸಭಾ ಎಲ್ ಕ್ಷನ್ ಗೆ ಕೆಲ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. ದಿನದಿಂದ ದಿನಕ್ಕೆ ಚುನಾವಣಾ ಅಖಾಡ ರಂಗೇರಿತ್ತಿದ್ದು ಆಕ್ಷಾಂಕಿಗಳು ಟಿಕೆಟ್ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟವನ್ನ ನಡೆಸಿ ಕೊನೆಗೆ ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರಿಗೆ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಸಾಲು ಸಾಲು ಆಹ್ವಾನಗಳು ಬರಲು ಶುರುವಾಗಿದೆ.
undefined
ಒಂದು ಕೋಟಿ ಆಫರ್ ನೀಡಿದ ಅಭಿಮಾನಿ:
ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಕೋಲಾರದಿಂದಲೇ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು. ಆದ್ರೆ ಸಿದ್ದು ಅಭಿಮಾನಿಗಳು ಮಾತ್ರ ಗೆಲುವಿನ ಕ್ಷೇತ್ರಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜ್ಯಾದ್ಯಂತ ಸಿದ್ದರಾಮಯ್ಯ ಅಭಿಮಾನಿಗಳು ಆಫರ್ ಮೇಲೆ ಆಫರ್ ನೀಡಿ ಸಿದ್ದರಾಮಯ್ಯ ಅವರನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸುತ್ತಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ನಗರದ ಬಾಲಕೃಷ್ಣ ಎಂಬ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಸಿದ್ದರಾಮಯ್ಯ ಶಾಸಕ ಸಿ.ಟಿ. ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಎಕರೆ ತೋಟವನ್ನ ಮಾರಿ ಒಂದು ಕೋಟಿ ಕೊಡೋದಾಗಿ ಸಿದ್ದರಾಮಯ್ಯ ಅವರಿಗೆ ಆಫರ್ ನೀಡಿದ್ದಾರೆ. ಸಿದ್ದರಾಮಯ್ಯನವರು ಚಿಕ್ಕಮಗಳೂರಿನಿಂದಲೇ ಸ್ಪರ್ಧಿಸಬೇಕೆಂದು ಆಹ್ವಾನ ಕೂಡ ಮಾಡಿದ್ದಾರೆ.
ಕಟೀಲ್ ವಿದೂಷಕ, ಆತಗೆ ರಾಜಕೀಯ ಜ್ಞಾನ ಇಲ್ಲ: ಸಿದ್ದರಾಮಯ್ಯ
ಸಿದ್ದು ಅಪ್ಪಟ ಅಭಿಮಾನಿ ಬಾಲಕೃಷ್ಣ:
ಚಿಕ್ಕಮಗಳೂರು ನಗರದ ನಿವಾಸಿ ಬಾಲಕೃಷ್ಣ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ. ಕಾಂಗ್ರೇಸ್ ಪಕ್ಷದ ನಿಷ್ಟವಂತಕಾರ್ಯ, ಅವರ ಮನೆಯಲ್ಲಿ ಕಾಂಗ್ರೇಸ್ ಮುಖಂಡರು, ಸಿದ್ದರಾಮಯ್ಯನವರ ಪೋಟೋವನ್ನು ಎಲ್ಲಾಕಡೆ ಕಾಣ್ಣುಬಹುದಾಗಿದೆ. ಸಿದ್ದು ಮೇಲೆ ಅತೀಯಾದ ಅಭಿಮಾನದಿಂದ ಬಾಲಕೃಷ್ಣ ಸಿದ್ದರಾಮಯ್ಯನವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ತಾಲೂಕಿನಿಂದ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಎಕರೆ ತೋಟವನ್ನು ಮಾರಿ ಸಿದ್ದರಾಮಯ್ಯನವರಿಗೆ ಒಂದು ಕೋಟಿ ಹಣ ನೀಡುತ್ತೇನೆ. ಅಷ್ಟೆ ಅಲ್ಲ, ಹಗಲಿರಲು ಕಷ್ಟಪಟ್ಟು ಪ್ರಚಾರ ಮಾಡಿ ಅವರನ್ನು ಗೆದ್ದೆ ಗೆಲ್ಲಿಸುತ್ತೇವೆ ಎಂದು ಪಣ ತೊಟ್ಟಿದ್ದಾರೆ.
ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಶಾಸಕ ಯತೀಂದ್ರ
ಸಿದ್ದು ಅಭಿಮಾನಿ ಬಾಲಕೃಷ್ಣ ಅವರ ಈ ನಡೆಗೆ ಅವರ ಕುಟುಂಬದ ಸದಸ್ಯರು ಕೂಡ ಸಂಪೂರ್ಣವಾಗಿ ಒಪ್ಪಿಗೆ ನೀಡಿದ್ದಾರೆ. ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಲ್ಲಿ ಇದ್ದಾಗಿನಿಂದಲೂ ನಾನು ಅವರ ಅಭಿಮಾನಿ. ಅವರ ಮೇಲಿನ ಅಭಿಮಾನಕ್ಕೆ ಈ ತೀರ್ಮಾನ ಮಾಡಿದ್ದೇನೆ ಅಂತಾರೆ ಬಾಲಕೃಷ್ಣ. ಒಟ್ಟಾರೆ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ 1 ಕೋಟಿ ರೂ, ಬಾದಾಮಿಯಲ್ಲಿ ಹೆಲಿಕಾಫ್ಟರ್ ಕೊಡುತ್ತೇನೆ ಎಂದು ಅಭಿಮಾನಿಗಳು ಹೇಳಿದರು. ಇದಾದ ಬಳಿಕ ಈಗ ಚಿಕ್ಕಮಗಳೂರು ಜಿಲ್ಲೆಯಿಂದ ಮತ್ತೊಮ್ಮೆ ಸಿದ್ದರಾಮಯ್ಯ ಅವರಿಗೆ ಆಫರ್ ಬಂದಿದೆ. ಸಿದ್ದರಾಮಯ್ಯ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ ಅದೆಷ್ಟು ಆಫರ್ ಬರಲಿದೆ ಎನ್ನುವುದನ್ನು ನೋಡಬೇಕಾಗಿದೆ.