ಖರ್ಗೆ ರೋಮ್‌ಗೆ ಹೋಗುವ ಸೋನಿಯಾ ಗಾಂಧಿ ಪ್ರಶ್ನಿಸಲಿ: ಅರವಿಂದ ಬೆಲ್ಲದ

ಖರ್ಗೆ ಹೇಳಿಕೆ ಸಮರ್ಥಿಸಿಕೊಂಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಮರಾಠ ಸಮಾಜದ ನಾಯಕರು, ಶಿವಾಜಿ ವಂಶಸ್ಥರು. ಮುಸ್ಲಿಮರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ಖರ್ಗೆ ಅವರನ್ನು ಓಲೈಸಲು ಹೀಗೆ ಮಾಡುವುದು ಸರಿಯಲ್ಲ ಎಂದ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ 

Mallikarjun Kharge should ask Sonia Gandhi going to Rome Says BJP MLA Aravind Bellad

ಹುಬ್ಬಳ್ಳಿ(ಜ.29):  ಪುಣ್ಯ ಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ? ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ರೋಮ್‌ಗೆ ತೆರಳುವ ಸೋನಿಯಾ ಗಾಂಧಿ ಅವರಿಗೆ ಏಕೆ ಈ ರೀತಿಯ ಪ್ರಶ್ನೆ ಕೇಳುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂ ದು 144 ವರ್ಷಗಳ ನಂತರ ಬರುವ ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತ 40 ಕೋಟಿಗೂ ಹೆಚ್ಚು ಜನರು ಶ್ರದ್ಧಾ-ಭಕ್ತಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆ. ಸನಾತನ ಧರ್ಮದ ಪ್ರಕಾರ ಇದು ದೊಡ್ಡ ಅವಕಾಶ ಎಂದರು.

Latest Videos

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ: ಗುಣಧರ ನಂದಿ ಮಹಾರಾಜರು

ಮುಸ್ಲಿಮರಿಗೆ ಕೇಳುವ ಧೈರ್ಯವಿದೆಯೇ?:

ರಾಜ್ಯ ಸರ್ಕಾರ ಮೆಕ್ಕಾಗೆ ತೆರಳುವವರಿಗೆ ವಿಶೇಷ ಅನುದಾನ ಕೊಡುತ್ತದೆ. ಅಲ್ಲಿಗೆ ಹೋಗಿ ಬಂದರೆ ಬಡತನ ನಿಲ್ಲುವುದಾದರೆ ಅವರಿಗೆ ಕೊಡುವ ಅನುದಾನ ಸ್ಥಗಿತಗೊಳಿಸುವುದೇ? ಇದೇ ಪ್ರಶ್ನೆ ಮುಸ್ಲಿಮರಿಗೆ ಕೇಳುವ ಧೈರ್ಯ ಖರ್ಗೆ ಅವರಿಗೆ ಇದೆಯೇ?. ಅದೇ ರೀತಿ ಸೋ ನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾ ದ್ರಾ ಅವರಿಗೆ ರೋಮ್‌ಗೆ ಹೋಗಿ ಪೋಪ್ ಕೈ ಹಿಡಿದು ಪ್ರಾರ್ಥಿಸಬೇಡಿ. ಚರ್ಚ್‌ಗೆ ನಡೆದುಕೊಳ್ಳಬೇಡಿ ಎಂದು ಹೇಳುವ ತಾಕತ್ ಇದೆಯೇ?. ಕೂಡಲೇ ಅವರುಹಿಂ ದೂಗಳ ಕಮೆ ಕೇಳಬೇಕು ಎಂದು ಆಗ್ರಹಿಸಿದರು. 

ಓಲೈಕೆಯ ಹೇಳಿಕೆ ಸರಿಯಲ್ಲ: 

ಖರ್ಗೆ ಹೇಳಿಕೆ ಸಮರ್ಥಿಸಿಕೊಂಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಮರಾಠ ಸಮಾಜದ ನಾಯಕರು, ಶಿವಾಜಿ ವಂಶಸ್ಥರು. ಮುಸ್ಲಿಮರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ಖರ್ಗೆ ಅವರನ್ನು ಓಲೈಸಲು ಹೀಗೆ ಮಾಡುವುದು ಸರಿಯಲ್ಲ ಎಂದರು.

ಕುಂಭಮೇಳಕ್ಕೆ ಹೋಗಲ್ಲ ಎನ್ನಲಿ:

ಕಾಂಗ್ರೆಸ್ಸಿನವರಿಗೆ ಹಿಂದೂಗಳ ಭಾವನೆಗೆ ಬೆಲೆಯಿಲ್ಲವಾಗಿದೆಯೇ? ಆ ಪಕ್ಷದ ಯಾರೂ ಮಾಹಾಕುಂಭಮೇಳಕ್ಕೆ ಹೋಗಲ್ಲ ಎಂ ದು ಆದೇಶ ಹೊರಡಿಸಲಿ ಎಂದು ಬೆಲ್ಲದ ಸವಾಲು ಹಾಕಿ ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದ ಗೆಟ್ಟಿದೆ. ಕೇಂದ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕಾಂ ಗ್ರೆಸ್‌ನವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡು ವುದನ್ನು ನಿಲ್ಲಿಸಲಿ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗೆ ಉಳಿಗಾಲವಿಲ್ಲ. ಇದರಲ್ಲಿ ಯಾರು ಶಾಮೀಲಾಗಿದ್ದಾರೆಯೋ ಅವರೆಲ್ಲರ ಮೇಲೆಯೂ ಕ್ರಮವಾಗಲಿ ಎಂದರು.

ಜೋಶಿಗೂ ಡೋಂಟ್‌ಕೇರ್, ನಾವು ಬಹಿರಂಗವಾಗಿಯೇ ಮಾತನಾಡುತ್ತೇವೆ: ಯತ್ನಾಳ್

ಹೂಡಿಕೆದಾರರನ್ನು ಇಲ್ಲಿಗೆ ಕರೆತರಲಿ

ಮುಂದಿನ ತಿಂಗಳು ಬೆಂಗಳೂರಿನಲ್ಲಿ ವಿಶ್ವ ಹೂಡಿಕೆ ದಾರರ ಸಮ್ಮೇಳನ ನಡೆಯಲಿದ್ದು, ಈ ವೇಳೆ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಹೆಚ್ಚಿಸಬೇಕು. ಶೇ. 75ರಷ್ಟು ಹೂಡಿಕೆದಾರರನ್ನು ಈ ಭಾಗಕ್ಕೆ ಕರೆತರಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆ ಜವಾಬ್ದಾರಿ ಮುಖ್ಯಮಂತ್ರಿ ಮತ್ತು ಬೃಹತ್ ಕೈಗಾರಿಕಾ ಸಚಿವರ ಮೇಲಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ಅರವಿಂದ ಬೆಲ್ಲದ ತಿಳಿಸಿದರು.

ಖರ್ಗೆ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆ

ಹುಬ್ಬಳ್ಳಿ: ಗಂಗಾ ಸ್ನಾನ ಮಾಡುವುದರಿಂದ ಮಾಡಿದ ಪಾಪ ಹೋಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಸನಾತನ ಧರ್ಮದ ಕುರಿತು ಅವಹೇಳನ ಮಾಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು. ಈ ಕುರಿತು ಪ್ರಕಟಣೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಹಾಸ್ಯಾಸ್ಪದ ಎಂದಿದ್ದಾರೆ. 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪ್ರತಿದಿನ ಕೋಟ್ಯಂತರ ಜನರು ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಕುಂಭಮೇಳ ನಡೆಯುವುದರಿಂದ ಇಲ್ಲಿನ ಸಣ್ಣಪುಟ್ಟ ವ್ಯಾಪಾರ ವಹಿವಾಟು ವೃದ್ಧಿಸಲು ಕಾರಣವಾಗಿದೆ. ಆದರೆ, ಇದನ್ನೆಲ್ಲ ನೋಡುತ್ತಿರುವ ಕಾಂಗ್ರೆಸ್ಸಿಗರಿಗೆ ಏಕೆ ಹೊಟ್ಟೆಕಿಚ್ಚು ಎಂದು ಪ್ರಶ್ನಿಸಿದ್ದಾರೆ. ಮುಂಬರುವ ದಿನಗಳಲ್ಲಿ ದೇಶದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

vuukle one pixel image
click me!
vuukle one pixel image vuukle one pixel image