ಖರ್ಗೆಗೆ ಪುತ್ರನನ್ನು ಸಿಎಂ ಮಾಡುವ ಕನಸು: ಅಮಿತ್‌ ಶಾ

Published : Mar 04, 2023, 08:34 AM IST
ಖರ್ಗೆಗೆ ಪುತ್ರನನ್ನು ಸಿಎಂ ಮಾಡುವ ಕನಸು: ಅಮಿತ್‌ ಶಾ

ಸಾರಾಂಶ

ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ಮುಖ್ಯ​ಮಂತ್ರಿ ಗಾದಿಗೆ ಟವೆಲ್‌ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆ​ಸ್‌​ನಲ್ಲಿ ಆ ಸ್ಥಾನ​ಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದ​ರಲ್ಲೇ ತಲ್ಲೀ​ನ​ರಾ​ಗಿ​ದ್ದಾರೆ. ರಾಜ್ಯ​ದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್‌, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ: ಅಮಿತ್‌ ಶಾ 

ಬಸವಕಲ್ಯಾಣ/ಬೀದರ್‌(ಮಾ.04):  ಕಾಂಗ್ರೆಸ್‌ ಅಧ್ಯಕ್ಷರಿಗೀಗ ಮುಖ್ಯ​ಮಂತ್ರಿ ರೇಸ್‌ಗೆ ಬರಲಾಗಲ್ಲ, ಹೀಗಾಗಿ ಪುತ್ರನ ಮೇಲೆ ವ್ಯಾಮೋಹ ಬಂದಿದೆ. ಪುತ್ರ​ನಿಗೆ ಮುಖ್ಯ​ಮಂತ್ರಿ ಪಟ್ಟದ ಕನಸು ಕಾಣು​ತ್ತಿ​ದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಲ್ಲಿ​ಕಾರ್ಜುನ ಖರ್ಗೆ ವಿರುದ್ಧ ವ್ಯಂಗ್ಯ​ವಾ​ಡಿ​ದ​ರು.

ಇಲ್ಲಿನ ಥೇರ್‌ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವರು ಮುಖ್ಯ​ಮಂತ್ರಿ ಗಾದಿಗೆ ಟವೆಲ್‌ ಹಾಕಿದ್ದಷ್ಟೇ ಅಲ್ಲ, ಕಾಂಗ್ರೆ​ಸ್‌​ನಲ್ಲಿ ಆ ಸ್ಥಾನ​ಕ್ಕಾಗಿ ಇನ್ನೂ 10 ಮಂದಿ ಹಗಲುಗನಸು ಕಾಣುವುದ​ರಲ್ಲೇ ತಲ್ಲೀ​ನ​ರಾ​ಗಿ​ದ್ದಾರೆ. ರಾಜ್ಯ​ದಲ್ಲಿ ನಾವು ಸರ್ಕಾರ ಮಾಡುತ್ತೇವೆ ಎಂದು ಪದೇ ಪದೆ ಹೇಳುವ ಕಾಂಗ್ರೆಸ್‌, ಮೊದಲು ತನ್ನ ನಾಯಕ ಯಾರೆಂಬುದನ್ನು ತೀರ್ಮಾನಿಸಲಿ ಎಂದ​ರು.

ಮೋದಿ ಆಯ್ತು, ಈಗ ಅಮಿತ್‌ ಶಾ ಲಿಂಗಾಯತ ದಾಳ

ಕಾಂಗ್ರೆ​ಸ್‌ಗೆ ಜನಹಿತಕ್ಕಿಂತ ಅಧಿಕಾರ ಮುಖ್ಯ. ಆದರೆ, ಬಿಜೆಪಿಯ ಈ ವಿಜಯ ಸಂಕಲ್ಪ ಯಾತ್ರೆ ಅಧಿಕಾರ, ನಮ್ಮ ನಾಯಕನಿಗೆ ಮುಖ್ಯ​ಮಂತ್ರಿ ಖುರ್ಚಿಗಾಗಿ ಅಲ್ಲ. ರಾಜ್ಯದ ಬಡವರ ಕಲ್ಯಾಣದ, ಅಭಿವೃದ್ಧಿಯ ಗುರಿಯೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

ಮುಂಬರುವ ರಾಜ್ಯ ವಿಧಾ​ನ​ಸಭಾ ಚುನಾವಣೆ ನಂತರ ಕಾಂಗ್ರೆಸ್‌ನ ಅಂತಿಮ ಯಾತ್ರೆ ಆರಂಭ ಆಗುತ್ತದೆ ಎಂದು ಭವಿಷ್ಯ ನುಡಿದ ಶಾ, ಕರ್ನಾಟಕದಿಂದ ಸಾವಿರಾರು ಕಿ.ಮೀ. ದೂರದಲ್ಲಿರುವ, ಕಮಲ ಅರ​ಳಲೇ ಅಸಾ​ಧ್ಯ​ವಾ​ಗಿದ್ದ ಸ್ಥಳಗಳಾಗಿದ್ದ ತ್ರಿಪುರಾ, ನಾಗಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಬಿಜೆಪಿ ಇದೀಗ ಸರ್ಕಾರ ರಚಿಸುತ್ತಿದೆ. ಪರಿ​ಸ್ಥಿತಿ ಹೀಗಿ​ರು​ವಾಗ ಕರ್ನಾಟಕದಲ್ಲಿ ಸರ್ಕಾರ ರಚಿಸೋದು ಸಾಧ್ಯವೇ ಎಂದು ಶಾ ಪ್ರಶ್ನಿಸಿದರು.

ಕೈ, ಜೆಡಿ​ಎಸ್‌ ಪರಿ​ವಾ​ರದ ಪಕ್ಷ​ಗ​ಳು: 

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇವೆರಡೂ ಒಂದೊಂದು ಪರಿವಾರದ ಪಕ್ಷವಾಗಿದ್ದು, ಇಂಥ ಪಕ್ಷ​ಗ​ಳಿಂದ ಕರ್ನಾಟಕದ ಕಲ್ಯಾಣ ಅಸಾಧ್ಯ ಎಂದು ಅಮಿತ್‌ ಶಾ ಭವಿಷ್ಯ ನುಡಿದರು. ಇದೇ ವೇಳೆ ಜೆಡಿ​ಎ​ಸ್‌ಗೆ ಮತ ಹಾಕಿ​ದರೆ ಅದು ಕಾಂಗ್ರೆಸ್‌ಗೆ ಹಾಕಿ​ದಂತೆ ಎಂದು ಪುನ​ರು​ಚ್ಚ​ರಿ​ಸಿ​ದ​ರು.

ಜೆಡಿಎಸ್‌ ತನಗೆ ಸಿಗುವ 25-30 ಸೀಟುಗಳನ್ನು ತೆಗೆ​ದು​ಕೊಂಡು ನೇರವಾಗಿ ಕಾಂಗ್ರೆಸ್‌ ಉಡಿಯಲ್ಲಿ ಹಾಕಿಬಿಡುತ್ತದೆ. ಆಗ ನಿಮ್ಮ ಮತ ಅನುಪಯುಕ್ತ ಆಗುತ್ತದೆ. ಹೀಗಾಗಿ ಬಿಜೆಪಿಗೆ ಸಂಪೂರ್ಣ ಬಹುಮತದ ಸರ್ಕಾರ ರಚಿಸಲು ಭರ್ಜರಿ ಜಯ ತಂದುಕೊಡಿ ಎಂದರು.

ರೈಲ್ವೆಗೆ ಕಾಂಗ್ರೆಸ್‌ನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ನೀಡಿದ್ದ ಅನುದಾನಕ್ಕಿಂತ ಕೇವಲ 8 ವರ್ಷಗಳಲ್ಲಿ 9 ಪಟ್ಟು ಹೆಚ್ಚು ಅಂದರೆ .30 ಸಾವಿರ ಕೋಟಿಗಳನ್ನು ನೀಡಿದ್ದೇವೆ. ಹೀಗಾಗಿ ಸಿದ್ದರಾಮಯ್ಯ ಅವರು ಇಲ್ಲಿಗೆ ಪ್ರಚಾರಕ್ಕಾಗಿ ಬಂದಾಗ ಲೆಕ್ಕ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.

Karnataka election 2023: ಅಮಿತ್‌ ಶಾಗೆ 5 ಕೆ.ಜಿ ಬೆಳ್ಳಿಯ ವಿಶೇಷ ಕಿರೀಟ, ಗಧೆ

ಕಾಶ್ಮೀ​ರ​ದಲ್ಲಿ ರಕ್ತ​ಪಾತ ನಿಲ್ಲಿ​ಸಿದ ಮೋದಿ: ಶಾ

ದೇಶಾದ್ಯಂತ ಪಿಎಫ್‌ಐ ಸಂಘಟನೆ ನಿಷೇಧಿಸಿ ಉಗ್ರವಾದಿಗಳು ಮಂಡಿಯೂರುವಂತೆ ಮಾಡಿದ್ದಲ್ಲದೆ ಕಲಂ 370 ತೆಗೆದು ಕಾಶ್ಮೀರದಲ್ಲಿ ಉಗ್ರರಿಂದ ಆಗು​ತ್ತಿದ್ದ ರಕ್ತಪಾತ ಬಿಡಿ, ಒಂದು ಕಲ್ಲೆಸೆ​ಯೋ ತಾಕತ್ತೂ ಇಲ್ಲದಂತೆ ಮಾಡಿದ ಪ್ರಧಾನಿ ಮೋದಿ ಆಡಳಿತ ವಿಶ್ವದೆಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ ಎಂದು ಅಮಿತ್‌ ಶಾ ನುಡಿದರು.

ಬಿಜೆಪಿಯ ಮೋದಿ ಸರ್ಕಾರ 80 ಕೋಟಿ ಬಡವರ ಏಳ್ಗೆಗಾಗಿ ಶ್ರಮಿಸಿದ್ದಲ್ಲದೆ, 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಮಾನ ಉಳಿಸುವ ಪ್ರಯತ್ನ ಮಾಡಿದೆ. 8 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುವ ಕಾರ್ಯ ಮಾಡಿದೆ. 3 ಕೋಟಿಗೂ ಹೆಚ್ಚು ಮನೆಗಳಿಗೆ ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ ವಿದ್ಯುತ್‌ ಪೂರೈಸುವಂಥ ಕಾರ್ಯಕ್ರಮ ಮೋದಿ ಜಾರಿಗೆ ತಂದಿದ್ದಾರೆ ಎಂದು ಯೋಜನೆಗಳ ಪಟ್ಟಿಮಾಡಿ, ಮೋದಿಗಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಮತ ನೀಡಿ ಎಂದು ಅಮಿತ್‌ ಶಾ ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ