ಸಿಎಂ, ಪಿಎಂ ಆಗೋ ಯೋಗ್ಯತೆ ಮಲ್ಲಿಕಾರ್ಜುನ ಖರ್ಗೆಗಿದೆ: ಸಚಿವ ಶರಣಬಸಪ್ಪ ದರ್ಶನಾಪುರ

By Kannadaprabha NewsFirst Published Dec 29, 2023, 9:23 PM IST
Highlights

ಸಿಎಂ, ಪಿಎಂ ಆಗುವ ಎಲ್ಲ ಯೋಗ್ಯತೆಯೂ ಖರ್ಗೆಯವರಿಗೆ ಇದೆ. ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗಲು ನಮ್ಮ ಪಕ್ಷ ಕೂಡ ಒಪ್ಪಿದೆ. ಒಕ್ಕೂಟದ ಪಿಎಂ ಅಂದಾಗ ರಾಹುಲ್ ಗಾಂಧಿ ಅವರೇ ಒಪ್ಪಿದ್ದಾರೆ. 

ಬಾಗಲಕೋಟೆ (ಡಿ.29): ಸಿಎಂ, ಪಿಎಂ ಆಗುವ ಎಲ್ಲ ಯೋಗ್ಯತೆಯೂ ಖರ್ಗೆಯವರಿಗೆ ಇದೆ. ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗಲು ನಮ್ಮ ಪಕ್ಷ ಕೂಡ ಒಪ್ಪಿದೆ. ಒಕ್ಕೂಟದ ಪಿಎಂ ಅಂದಾಗ ರಾಹುಲ್ ಗಾಂಧಿ ಅವರೇ ಒಪ್ಪಿದ್ದಾರೆ. ಇನ್ಯಾರು ಒಪ್ಪಬೇಕು, ಸುಮ್ಮನೆ ಕಡ್ಡಿ ಯಾಕೆ ಗುಡ್ಡ ಮಾಡ್ತೀರಾ? ಇಂಡಿಯಾ ಒಕ್ಕೂಟದ ತೀರ್ಮಾನದ ಪ್ರಕಾರವೇ ನಾವು ಹೋಗುತ್ತಿದ್ದೇವೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರು ರಾಮ ಮಂದಿರವನ್ನು ರಾಜಕೀಯವಾಗಿ ಪ್ರೊಜೆಕ್ಟ್ ಮಾಡುತ್ತಾರಾ ಎಂಬ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮ ಮಂದಿರಕ್ಕೆ ಯಾರಾದರೂ ವಿರೋಧ ಇದೆಯಾ. ಬಿಜೆಪಿಯವರು ಹತ್ತು ವರ್ಷ ಭಾವನಾತ್ಮಕ ವಿಷಯ ಕೆರಳಿಸಿ, ಜನರಿಗೆ ಹುಚ್ಚು ಮಾಡುವ ಕೆಲಸ ಮಾಡಿದ್ದಾರೆ. ಅವರು ಜನಸಾಮಾನ್ಯರ ಕೆಲಸವನ್ನು ಯಾವುತ್ತಾದರೂ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

Latest Videos

ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು: ಸಚಿವ ಮಹದೇವಪ್ಪ

ರೈತರ ಸಾಲ ಮನ್ನಾ ಮಾಡಿದ್ದಾರಾ? ಯಾವುದಾದ್ರೂ ಸಬ್ಸಿಡಿ ಕೊಟ್ಟಿದ್ದಾರಾ? ಗೊಬ್ಬರ, ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಿದ್ದಾರಾ? ಯಾವುದು ಇಲ್ಲ. ಭಾವನಾತ್ಮಕವಾಗಿ, ಜನಕ್ಕೆ ಜಾತಿ ಮಧ್ಯ ಜಗಳ ಹಚ್ಚಿದ್ದಾರೆ. ಹಿಂದೂ-ಮುಸ್ಲಿಂ ಇರಬಹುದು. ನಾಳೆ ಮೇಲ್ವರ್ಗ-ಕೆಳ ವರ್ಗ ಅಂತ ಇದೆ ಕೆಲಸ ಇವರದೇ. ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುವುದು ಜನರಿಗೆ ಗೊತ್ತಿದೆ. ಇರುವುದನ್ನೆಲ್ಲ ಮಾರಾಟ ಮಾಡುತ್ತಿದ್ದಾರೆ. ಪ್ರೈವೇಟೈಸ್ ಮಾಡುತ್ತಿದ್ದಾರೆ. ಅವರ ಪಕ್ಷ ರಾಜಕೀಯ ಮಾಡೋಕೆ ಇದೆ. ತೀರ್ಪು ಕೊಡೋರು ಜನರು. ಹೀಗಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹಮತವನ್ನು ಜನ ಕೊಟ್ಟರು ಎಂದು ತಿಳಿಸಿದರು.

ಈ ವಾರದಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಕೆ ಮಾಡುವ ಸಾಧ್ಯತೆ ಇದೆಯಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್ ಇದೆ ಕಡಿಮೆ ಮಾಡುತ್ತಾರೆ. ಎಲೆಕ್ಷನ್ ಇರದ ವೇಳೆಯೂ ಕಡಿಮೆ ಮಾಡುತ್ತಾ ಹೋಗಬೇಕು. ಒನ್ ನೇಷನ್, ಒನ್ ಟ್ಯಾಕ್ಸ್ ಅಂದ್ರಲ್ಲಾ, ಪೆಟ್ರೋಲ್, ಡಿಸೇಲ್ ಸಹ ಜಿಎಸ್ಟಿ ಒಳಗಡೆಯೇ ತರಬೇಕು. ಜನರಿಗೆ ಒಳ್ಳೆಯದಾಗುತ್ತೆ, ಜನರಿಗೆ ಒಳ್ಳೆದಾದ್ರೆ ನಾವು ಒಳ್ಳೆದು ಮಾಡಿದರು ಅಂತ ಹೇಳ್ತಿವಿ ಎಂದರು.

ಯತ್ನಾಳ ಅವರು ಹೇಳಿದ್ದು ಸತ್ಯವಿದೆ: ಬಿಜೆಪಿಯಲ್ಲಿ ಸಿಎಂ ಕುರ್ಚಿಗೆ ಎರಡೂವರೆ ಸಾವಿರ ಕೋಟಿ ಕೊಡಬೇಕು ಎಂಬ ಶಾಸಕ ಯತ್ನಾಳ ಅವರು ಹೇಳಿದ್ದು ಸತ್ಯವಿದೆ. ಇದ್ದದ್ದನ್ನು ಅವರು ಹೇಳಿದ್ದಾರೆ. ಅವರ ಪಕ್ಷದ ಬಗ್ಗೆ ಮೊದಲು ಕೂಡ ಹೇಳಿದ್ದಾರೆ. ನಾನು ಸಿಎಂ ಆಗಲು ಎರಡೂವರೆ ಸಾವಿರ ಕೋಟಿ ಕೇಳಿದ್ರು ಎಂದು ಸತ್ಯ ಹೇಳಿದ್ದಾರೆ. ಅದಕ್ಕೆ ನನಗೆ ಕೊಡಲು ಸಾಧ್ಯವಾಗಲಿಲ್ಲ ಅಂತಾ ಯತ್ನಾಳ ಅವರೇ ಹೇಳಿದ್ದಾರೆ. ₹100 ಕೋಟಿ ಕೇಳಿದ್ರು ಅಂತಾ ಇದೇ ರೇಣುಕಾಚಾರ್ಯ ಬಿಎಸ್‌ವೈ ಮೇಲೆ ಸಿಟ್ಟಾಗಿದ್ದರು ಎಂದರು.

ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಸ್ಮರಣೀಯ: ಶಾಸಕ ಕೆ.ವೈ.ನಂಜೇಗೌಡ

ಯತ್ನಾಳ ಅವರು ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪದ ಕುರಿತು ಮಾತನಾಡಿ, ಸ್ವ ಇಚ್ಚೆಯಿಂದ ಕೇಸ್ ದಾಖಲು ಮಾಡಿ ಸಿಐಡಿ ಆಗ್ಲಿ, ಸಿಬಿಐ ತನಿಖೆಗೆ ದಾಖಲೆ ಕೇಳಬೇಕಾಗುತ್ತೆ. ಅವರ ಬಳಿ ದಾಖಲೆ ಇದೆ, ಆ ದಾಖಲೆಗಳನ್ನ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

click me!