ಖರ್ಗೆ, ಸಿದ್ದು, ಡಿಕೆಶಿ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ: ಸಿ.ಪುಟ್ಟರಂಗಶೆಟ್ಟಿ

By Kannadaprabha News  |  First Published May 12, 2023, 3:44 PM IST

ಕಳೆದ ಬಾರಿಗಿಂತ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ಮರು ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. 


ಯಳಂದೂರು (ಮೇ.12): ಕಳೆದ ಬಾರಿಗಿಂತ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ಮರು ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳಿಂದ ಚುನಾವಣೆ ಕ್ಷೇತ್ರದಲ್ಲಿ ಮತದಾರರ ಜತೆ ಮತಯಾಚನೆ, ಕಾರ್ಯಕರ್ತರ ಜತೆ ಸಭೆ ಸಮಾರಂಭ ಸೇರಿದಂತೆ ತುಂಬ ಬ್ಯುಸಿಯಾಗಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ಬೆಳಗ್ಗೆ ಎದ್ದು ತನ್ನ ಪತ್ನಿ ವೆಂಕಟಮ್ಮ ಜತೆ ಮಾತುಗಾರಿಕೆಗೆ ಇಳಿದು ಈ ಬಾರಿ ನಾನೇ ಗೆಲ್ಲುವುದು ಎಂದು ಪತ್ನಿ ಜತೆ ಖುಷಿ ಹಂಚಿಕೊಂಡರು.

ನಂತರ ಮಗಳ ಮಕ್ಕಳು ಮತ್ತು ಮಗನ ಮಕ್ಕಳ ಜತೆ ಆಟವಾಡಿದರು. ಚಾಮರಾಜನಗರ ಕ್ಷೇತ್ರದಿಂದ ಆಗಮಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗೆ ಟೀ ನೀಡಿ ಅವರ ಚುನಾವಣೆ ಲೆಕ್ಕಾಚಾರಕ್ಕೆ ಮುಂದಾದರು. ಕಾರ್ಯಕರ್ತರು ಹೆಚ್ಚು ವೋಟ್‌ ಆಗಿದೆ ಯಾವ ಊರಿನಲ್ಲಿ ನಮ್ಗೆ ವೋಟ್‌ ಕಡಿಮೆ ಬಂದಿರಬಹುದು ಎಂಬುವುದರ ಬಗ್ಗೆ ಮಾಹಿತಿ ಪಡೆದು ಒಂದಿಷ್ಟುಕಾರ್ಯಕರ್ತರ ಜತೆ ಪೋನ್‌ನಲ್ಲಿ ಮಾತನಾಡಿದರು. ಪಕ್ಷಕ್ಕೆ ವೋಟ್‌ ಮಾಡಿಸದ ಕಾರ್ಯಕರ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

undefined

Karnataka Election 2023: ರಾಜ್ಯದ ಇತಿಹಾಸದಲ್ಲೇ ಈ ಸಲ ದಾಖಲೆ 73.19% ಅತ್ಯಧಿಕ ಮತದಾನ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ: ಬಿಜೆಪಿ ಸರ್ಕಾರ ಡಬಲ್‌ಗೇಮ್‌ ನೋಡಿದ ಮತದಾರರು ಬೇಸತ್ತು ಈ ಬಾರಿ ಕಾಂಗ್ರೆಸ್‌ ಪಕ್ಷ ಅಧಿಕಾರ ತರುವ ನಿಟ್ಟಿನಲ್ಲಿ ಬೆಂಬಲಿಸಿದ್ದಾರೆ. ಸಂಪೂರ್ಣವಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿಯಲಿದ್ದು ಮೂರು ಜನ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಈ ಮೂರು ಜನ ನಾಯಕರಲ್ಲಿ ಯಾರಾದರು ಒಬ್ಬರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ವಿಶ್ವಾಸ ವ್ಯಕ್ತಪಸಿಡಿದರು.

ಸೋಮಣ್ಣನ ಆಟ ನಡೆಯಲ್ಲ: ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿಪಡಿಸಿದ್ದೇನೆ. ಕ್ಷೇತ್ರದ ಮತದಾರರಿಗೆ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇನೆ. ಹಾಗಾಗಿ, ಈ ಬಾರಿ ಮತದಾರ ನನಗೆ ಹೆಚ್ಚಿನ ಅವಕಾಶ ನೀಡಿದ್ದಾನೆ. ಆದರೆ, ಸಚಿವ ಸೋಮಣ್ಣ ಬೆಂಗಳೂರಿನಿಂದ ಜನ ಕರೆತಂದು ಮತದಾರರಿಗೆ ಹೆಚ್ಚಿನ ಹಣದ ಆಮಿಷ ನೀಡಿ ಮತ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಿಸಿದ್ದಾರೆ. ಆದರೆ, ಕ್ಷೇತ್ರದ ಮತದಾರರು ಭಾರಿ ಪ್ರಬುದ್ಧರಾಗಿರುವುದರಿಂದ ಸ್ಥಳೀಯ ನಾಯಕರಿಗೆ ಹೆಚ್ಚಿನ ಅವಕಾಶ ನೀಡಿದ್ದು, ಈ ಬಾರಿ ಸೋಮಣ್ಣರನ್ನು ಗಂಟುಮೂಟೆ ಕಟ್ಟಿಸಿ ಚಾಮರಾಜನಗರದಿಂದ ಓಡಿಸುತ್ತಾರೆ ಎಂದರು.

ಜೆಡಿಎಸ್‌ ಕುಟುಂಬವೇ ಬಂದರೂ ಗೆಲುವು ನನ್ನದೇ: ಪ್ರೀತಂ ಗೌಡ

ತೋಟ, ಜಮೀನಿಗೆ ತೆರಳಿ ಸುತ್ತಾಡಿ ಒಂದು ತಿಂಗಳು ಕಳೆದಿತ್ತು. ತೆಂಗಿನ ಮರದಿಂದ ಉದುರಿದ ಗರಿಗಳನ್ನು ಒಂದು ಕಡೆ ಎತ್ತಿ ಹಾಕಿ ಅಕ್ಕ ಪಕ್ಕದ ರೈತರ ಜತೆ ಮಾತನಾಡಿ, ರಾಜಕೀಯ ವಿಶೇಷತೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!