ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದರೂ ಹಾಸನದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
ಹಾಸನ (ಮೇ.12): ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದರೂ ಹಾಸನದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಸಾಧ್ಯವಾದಷ್ಟುಅಭಿವೃದ್ಧಿ ಕೆಲಸ ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿಗೆ ಪ್ರೀತಂ ಗೌಡ ನನ್ನು ಆಯ್ಕೆ ಮಾಡಬೇಕೆಂದು ಬಹುತೇಕ ಮತದಾರರು ತೀರ್ಮಾನ ಮಾಡಿದ್ದು, ಮತ್ತೊಮ್ಮೆ ಗೆದ್ದು ಬರುತ್ತೇನೆ ಎಂದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟೀಮ್ ಬೇರೆ ಬೇರೆ ಆಗಿದ್ದು, ಚುನಾವಣೆ ವೇಳೆ ಎಲ್ಲಾ ಒಂದಾಗಿ ಅಭ್ಯರ್ಥಿ ಪರ ಎಲ್ಲಾ ನಾಯಕರು ಬಂದು ಪ್ರಚಾರದಲ್ಲಿ ಕೈಗೊಂಡಿದ್ದರು. ಬಹುಶಃ ದೇಣಿಗೆ ತುಂಬ ಹೆಚ್ಚಾಗಿ ಜೆಡಿಎಸ್ ನೋಟು ಬಿಜೆಪಿಗೆ ಓಟು ಎನ್ನುವಂತೆ ಪರಿವರ್ತನೆ ಆಗಿದೆ ಎಂದು ಹೇಳಿದರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
Chikkaballapur: ಟೊಮೆಟೊ ಬೆಲೆ ಕುಸಿತದಿಂದ ಕಂಗಾಲಾದ ಬೆಳೆಗಾರರು
ರೇವಣ್ಣ, ಪ್ರೀತಂ ಮಧ್ಯೆ ಏಕವಚನದಲ್ಲಿ ವಾಗ್ವಾದ: ಶಾಸಕರಾದ ಎಚ್.ಡಿ ರೇವಣ್ಣ ಹಾಗೂ ಪ್ರೀತಂ ಗೌಡರ ನಡುವಿನ ರಾಜಕೀಯ ವಿರಸ ಬುಧವಾರ ನಡೆದ ತ್ರೈಮಾಸಿಕ ಸಭೆಯಲ್ಲೂ ಸ್ಪೋಟಗೊಂಡಿದೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಅನುದಾನದ ವಿಚಾರವಾಗಿ ಇಬ್ಬರ ನಡುವೆ ಏಕವಚನದಲ್ಲೇ ಮಾತಿನ ಚಕಮಕಿಗಳು ನಡೆದವು. ಚನ್ನಪಟ್ಟಣದ ಕೆರೆಗೆ ಬಿಡುಗಡೆಯಾಗಿದ್ದ 144 ಕೋಟಿ ವಿಚಾರವಾಗಿ ಮಾತು ಪ್ರಾರಂಭವಾಗಿ, ಏಕವಚನದಲ್ಲೆ ವಾಕ್ ಸಮರ ನಡೆಯಿತು. ಇದನ್ನು ಗಮನಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿವಿಧ ಇಲಾಖೆಯ ಅಧಿಕಾರಿ ವರ್ಗವೂ ಮೂಕ ಪ್ರೇಕ್ಷಕರಂತೆ ಕುಳಿತುಕೊಂಡು ಆಲಿಸಿದರು.
ಶಾಸಕ ಪ್ರೀತಮ್ ಗೌಡರ ಮಾತಿಗೆ ಸಿಟ್ಟಿಗೆದ್ದ ರೇವಣ್ಣ, ನಮ್ಮ ಸರ್ಕಾರದ ಅವಧಿಯಲ್ಲಿ ತರಲಾದ 144 ಕೋಟಿ ರೂಗಳ ಅನುದಾನವನ್ನು ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಈಗ ಆ ಯೋಜನೆ ಹಣವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಸಲಾಗಿದೆ. ಆದರೆ ಆ ಕಾಮಗಾರಿಯೂ ಕೂಡ ಸರಿಯಾದ ರೀತಿ ಆಗುತ್ತಿಲ್ಲ. ಎಲ್ಲಾ ಕಾಮಗಾರಿಗಳ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಪ್ರೀತಂ ಗೌಡ, ಯಾವ ತನಿಖೆ ಬೇಕಾದರೂ ಮಾಡಿಸಲಿ ನಾನು ಹೆದರಲ್ಲ. ಕ್ಯಾಬಿನೆಟ್ ನಿರ್ಧಾರವನ್ನು ಇಲ್ಲಿ ಚರ್ಚೆ ಮಾಡುವುದಾದರೆ ಕ್ಯಾಬಿನೆಟನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ ಎಂದು ರೇವಣ್ಣನವರ ಆರೋಪಕ್ಕೆ ಸ್ಥಳದಲ್ಲೆ ತಿರುಗೇಟು ನೀಡಿದರು. ಇಬ್ಬರು ಶಾಸಕರ ನಡುವೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾ ಮಂತ್ರಿ ಗೋಪಾಲಯ್ಯ ವಿರುದ್ಧವು ರೇವಣ್ಣ ಅಸಮಧಾನ ವ್ಯಕ್ತಪಡಿಸಿದರು.
ನೀರಾವರಿಯಲ್ಲಿ ಅನುಧಾನ ಕೊಡಿಸುತ್ತೇನೆ ಎಂದಿದ್ದಿರಿ ಎಂಬ ರೇವಣ್ಣನ ಮಾತಿಗೆ ಪ್ರೀತಂ ಮಧ್ಯ ಪ್ರವೇಶಿಸಿ ಹಳೇಬೀಡು ಕೆರೆಗೆ ಅನುದಾನ ಕೊಟ್ಟಿಲ್ವಾ ಎಂದರು. ಮಾತಿನ ನಡುವೆ ನಿಮಗೆ ನಾಚಿಕೆ ಆಗಬೇಕು ಎಂದು ರೇವಣ್ಣ ಕಿಡಿಕಾರಿದಾಗ ಶಾಸಕ ಪ್ರೀತಂ ಅವರು ಮಾತನಾಡಿ, ನಾಚಿಕೆ ಯಾರಿಗೆ ಆಗಬೇಕೋ ಅವರಿಗೆ ಆಗಲಿ ಎಂದರು. ಮತ್ತೆ ಪ್ರೀತಂ ವಿರುದ್ಧ ಕೆಂಡಾಮಂಡಲವಾದ ರೇವಣ್ಣನವರು, ಹಳೇಬೀಡಿನ ಕೆರೆ ಅಭಿವೃದ್ಧಿಗೆ ಕುಮಾರಸ್ವಾಮಿ ಅನುದಾನ ನೀಡಿದ್ದು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕ ಪ್ರೀತಮ್ ಅವರು, ನೀವು ಬಜೆಟ್‌ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ, ಕೆಲಸ ಮಾಡಿಸಬೇಕು ಎಂದು ಟಾಂಗ್ ಕೊಟ್ಟರು.
Karnataka Election 2023: ರಾಜ್ಯದ ಇತಿಹಾಸದಲ್ಲೇ ಈ ಸಲ ದಾಖಲೆ 73.19% ಅತ್ಯಧಿಕ ಮತದಾನ
ಇದಾದ ಮೇಲೆ ರಾಜಕೀಯವನ್ನು ಹೊರಗೆ ಮಾತನಾಡೋಣ. ನಾವೇನು ಹೆದರಿಕೊಂಡು ಓಡಿಹೋಗುವುದಿಲ್ಲ ಎಂದರು. 2023 ಕ್ಕೆ ನೀವು ಬನ್ನಿ ಎಂದು ಕರೆಯುತ್ತಲೇ ಇದ್ದೇನೆ ಎಂದು ಛೇಡಿಸಿದರು. ಜಲಜೀವನ್ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಆದರೆ ನೀನೆ ಮಾಡಿದ್ದೀನಿ ಅಂದೀದಿಯಾ ಎಂದು ಇದೆ ವೇಳೆ ರೇವಣ್ಣನವರನ್ನು ಏಕ ವಚನದಲ್ಲೆ ವಾಗ್ದಾಳಿ ನಡೆಸಿದರು. ಎಲ್ಲರೂ ತೆರಿಗೆ ಹಣದಿಂದಲೇ ಮಾಡಿರುವುದು. ಆದರೆ ರೇವಣ್ಣ ಅವರು ನಾನು ಮಾಡಿದೆ ಅಂತಿದ್ದಾರೆ ಎಂದು ಇಬ್ಬರ ನಡುವೇ ಏಕವಚನದಲ್ಲೆ ಮಾತಿನ ಚಕಮಕಿ ನಡೆಯಿತು.