ಕರ್ನಾಟಕ ಬಿಜೆಪಿ ಹೊಸ ಪದಾಧಿಕಾರಿಗಳ ನೇಮಕ: ವಿಜಯೇಂದ್ರಗೆ ಬಂಪರ್

By Suvarna NewsFirst Published Jul 31, 2020, 8:47 PM IST
Highlights

ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು, (ಜುಲೈ.31): ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ನೇಮಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

ರಾಜ್ಯ ಪ್ರಧಾನ  ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿಗಳುಮ ಕಾರ್ಯಾಯಲದ ಕಾರ್ಯದರ್ಶಿಗಳು, ರಾಜ್ಯ ವಕ್ತಾರಾರು, ರಾಜ್ಯ ಉಪಾಧ್ಯಕ್ಷಕರು ಸೇರಿದಂತೆ ರಾಜ್ಯ ಬಿಜೆಪಿ ಘಟನದ ವಿವಿಧ ವಿಭಾಗಳಿಗೆ ನೂತನದ ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ. 

ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

ರಾಜ್ಯ ಉಪಾಧ್ಯಕ್ಷಕರು:
ರಾಜ್ಯ ಉಪಾಧ್ಯಕ್ಷರಾಗಿ ಅರವಿಂದ ಲಿಂಬಾವಳಿ, ನಿರ್ಮಲ್ ಕುಮರ್ ಸುರಾನಾ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್, ತೇಜಸ್ವಿನಿ ಅನಂತಕುಮಾರ್, ಪ್ರತಾಪ ಸಿಂಹ, ಎಂ.ಬಿ. ನಂದೀಶ್, ಬಿ.ವೈ. ವಿಜಯೇಂದ್ರ, ಎಂ. ಶಂಕರಪ್ಪ, ಎಂ. ರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು:
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ, ಮಹೇಶ್ ತೆಂಗಿನಕಾಯಿ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಕಾರ್ಯದರ್ಶಿಗಳು:
ರಾಜ್ಯ ಕಾರ್ಯದರ್ಶಿಗಳಾಗಿ ಸತೀಶ್ ರೆಡ್ಡಿ, ತುಳಸಿ ಮುನಿರಾಜು ಗೌಡ, ಎಸ್. ಕೇಶವಪ್ರಸಾದ್, ಜಗದೀಶ್ ಹಿರೇಮನಿ, ಸುಧಾ ಜಯರುದ್ರೇಶ್, ಭಾರತಿ ಮಗ್ದುಮ್, ಹೇಮಾವತಿ ನಾಯಕ್, ಉಜ್ವಲಾ ಬಡವಣ್ಣಾಜೆ, ಕೆ.ಎಸ್. ನವೀನ್, ವಿನಯ್ ಬಿದರೆ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಖಜಾಂಚಿಗಳು:
ರಾಜ್ಯ ಖಜಾಂಚಿಗಳಾಗಿ ಸುಬ್ಬ ನರಸಿಂಹ, ಲೆಹರ್ ಸಿಂಗ್ ಸಿರೋಯಾ ಅವರನ್ನು ನೇಮಕ ಮಾಡಲಾಗಿದೆ.

ಮೋರ್ಚಾ ರಾಜ್ಯ ಅಧ್ಯಕ್ಷರು:
ಯುವ ಮೋರ್ಚಾ ಅಧ್ಯಕ್ಷರಾಗಿ ಡಾ. ಸಂದೀಪ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗೀತಾ ವಿವೇಕಾನಂದ, ರೈತ ಮೋರ್ಚಾ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಶೋಕ ಗಸ್ತಿ, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಚಲವಾದಿ ನಾರಾಯಣಸ್ವಾಮಿ, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ತಿಪ್ಪರಾಜು ಹವಾಲ್ದಾರ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮುಜಮಿಲ್ ಬಾಬು ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೇಕಲ್ಲು, ರಾಜ್ಯ ವಕ್ತಾರರಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ನೇಮಕ ಮಾಡಲಾಗಿದೆ. ಪ್ರಕೋಷ್ಟಗಳ ಸಂಯೋಜಕರಾಗಿ ಎಂ.ಬಿ. ಭಾನುಪ್ರಕಾಶ್, ಡಾ.ಎ.ಹೆಚ್. ಶಿವಯೋಗಿಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ.

ಭಾರತೀಯ ಜನತಾ ಪಾರ್ಟಿ, ಕರ್ನಾಟಕ - ನೂತನ ರಾಜ್ಯ ಪದಾಧಿಕಾರಿಗಳ ಪಟ್ಟಿ. pic.twitter.com/b0Haw9utaw

— BJP Karnataka (@BJP4Karnataka)
click me!