ಸಚಿವರ ಕುಟುಂಬಕ್ಕೆ ಕೊರೋನಾ ಕಾಟ: ಕೌರವನಿಗೆ ಮತ್ತೆ ಸೋಂಕಿನ ಭೀತಿ..!

By Suvarna News  |  First Published Jul 31, 2020, 5:46 PM IST

ಕೌರವನ ಕುಟುಂಬಕ್ಕೆ ಕೊರೋನಾ ಕಾಟ ಬಿಡುತ್ತಿಲ್ಲ. ಮೊನ್ನೇ ಅಷ್ಟೇ ಕ್ವಾರಂಟೈನ್‌ಲ್ಲಿದ್ದ ಸಚಿವ ಬಿಸಿ ಪಾಟೀಲ್‌ಗೆ ಮತ್ತೆ ಸೋಂಕಿನ ಭೀತಿ ಎದುರಾಗಿದೆ.


ಹಾವೇರಿ, (ಜುಲೈ.31): ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿ ಸೇರಿ ಒಟ್ಟು ಐವರಿಗೆ ಕೊರೋನಾ ಪಾಸಿಟಿವ್‌ ದೃಡಪಟ್ಟಿದೆ.

ಟ್ವೀಟ್‌ ಮೂಲಕ ಈ ವಿಷಯ ತಿಳಿಸಿರುವ ಬಿ.ಸಿ ಪಾಟೀಲ್‌, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ ಎಂದಿದ್ದಾರೆ.

Tap to resize

Latest Videos

ಕರ್ನಾಟಕದ ಮತ್ತೋರ್ವ ಮಂತ್ರಿಗೆ ಕೊರೋನಾ ಭೀತಿ: ಇಡೀ ಕುಟುಂಬವೇ ಕ್ವಾರಂಟೈನ್

ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ.

ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದೆ. ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ.

— Kourava B.C.Patil (@bcpatilkourava)
 
ಕೆಲ ದಿನಗಳ ಹಿಂದೆ ಅಷ್ಟೇ ಕೊರೋನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ಬಿಸಿ ಪಾಟೀಲ್ ಸ್ವಯಂ ಕ್ವಾರಂಟೈನ್‌ ಆಗಿದ್ದರು. 

ಬೆಂಗಳೂರಿನ ಸಚಿವರ ಸರ್ಕಾರಿ ನಿವಾಸದಲ್ಲಿದ್ದ ಸಚಿವ ಬಿ.ಸಿ.ಪಾಟೀಲ್ ಸಂಬಂಧಿಕರೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಜತೆ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ತಾವು ಹಿರೇಕೆರೂರಿನ ಮನೆಯಲ್ಲಿ  ಕ್ವಾರಂಟೈನ್ ಆಗಿದ್ದರು. ಹಾಗು ಅವರ ಕುಂಟುಂಬ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಇದೀಗ ಅವರ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಮತ್ತೆ ಕೌರವನಿಗೆ ಕೊರೋನಾ ಭೀತಿ ಶುರುವಾಗಿದೆ. ಆದ್ರೆ, ಅವರು ಮತ್ತೆ ಕ್ವಾರಂಟೈನ್ ಆಗುತ್ತಾರೋ ಇಲ್ವೋ ಎನ್ನುವುದನ್ನು ತಿಳಿಸಿಲ್ಲ,

click me!