ವಿಶ್ವಾಸಮತ ಯಾಚನೆ ಪ್ರಶ್ನಿಸಿದ ಉದ್ಧವ್ ಠಾಕ್ರೆ, ರಾತ್ರಿ 9 ಗಂಟೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್!

Published : Jun 29, 2022, 08:42 PM ISTUpdated : Jun 29, 2022, 08:51 PM IST
ವಿಶ್ವಾಸಮತ ಯಾಚನೆ ಪ್ರಶ್ನಿಸಿದ ಉದ್ಧವ್ ಠಾಕ್ರೆ, ರಾತ್ರಿ 9 ಗಂಟೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್!

ಸಾರಾಂಶ

ಗುರುವಾರ ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಆದೇಶ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಿಎಂ ಉದ್ಧವ್ ವಿಶ್ವಾಸಮತ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಮುಂಬೈ(ಜೂ.29): ಮಹಾರಾಷ್ಟ್ರ ರಾಜಕೀಯ ಮತ್ತೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಗುರುವಾರ ವಿಶ್ವಾಸಮತ ಯಾಚನೆ ಮಾಡಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆದೇಶಿಸಿದ್ದರು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಉದ್ಧವ್ ಠಾಕ್ರೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ತೀರ್ಪನ್ನು ಇಂದು ರಾತ್ರಿ 9 ಗಂಟೆಗೆ ಕಾಯ್ದಿರಿಸಿದೆ.

ಶಿವಸೇನೆ ಮುಖಂಡ ಏಕನಾಥ ಶಿಂಧೆ ಬಂಡಾಯದಿಂದ ಕಂಗೆಟ್ಟರುವ ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದ ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಸರ್ಕಾರ ಇದೀಗ ಸುಪ್ರೀಂ ಕೋರ್ಟ್ ತೀರ್ಪಿನತ್ತ ಚಿತ್ತ ಹರಿಸಿದೆ. ಈ ತೀರ್ಪು ಉದ್ದವ್ ಠಾಕ್ರೆ ಭವಿಷ್ಯ ನಿರ್ಧರಿಸಲಿದೆ. ಕಾರಣ ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೋರ್ಟ್ ತಡೆ ನೀಡದರೆ ಉದ್ಧವ್ ಠಾಕ್ರೆ ತಮ್ಮ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡಲಿದ್ದಾರೆ. ತಡೆ ನೀಡದೇ ಇದ್ದರೆ, ಇಂದೇ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. 

 

ಜೂನ್ 30ಕ್ಕೆ ಉದ್ಧವ್ ಠಾಕ್ರೆ ಸರ್ಕಾರದ ಭವಿಷ್ಯ ನಿರ್ಧಾರ, 11 ಗಂಟೆಗೆ ವಿಶ್ವಾಸ ಮತ ಯಾಚನೆ?

ಏಕನಾಥ್ ಶಿಂದೆ ಬಣ ಬಂಡಾಯದ ಬಾವುಟ ಪ್ರದರ್ಶಿಸಿದ ಬಳಿಕ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಬಳಿ ವಿಶ್ವಾಸಮತ ಯಾಚನೆಗೆ ಮನವಿ ಮಾಡಿದ್ದರು. ಇತ್ತ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸ ಮತ್ತಕ್ಕೆ ಮನವಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಎಂದು ರಾಜ್ಯಪಾಲರು ಗುರುವಾರ ವಿಶ್ವಾಸ ಮತ ಯಾಚನೆಗೆ ಸೂಚಿಸಿದ್ದರು. 

ರಾಜ್ಯಪಾಲರ ನಡೆ ಅಸಂವಿಧಾನಿಕ ಎಂದು ಸಿಎಂ ಉದ್ಧವ್ ಠಾಕ್ರೆ ಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ವಿಚಾರಣೆಗೆ ಆಗ್ರಹಿಸಿದ್ದರು. ಹೀಗಾಗಿ  ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು 9 ಗಂಟೆಗೆ ಕಾಯ್ದಿರಿಸಿದೆ. ಇದೀಗ ಗುವಾಹಾಟಿಯಿಂದ ಗೋವಾ ತಲುಪಿರುವ ಶಿಂದೆ ಬಣ ಈ ತೀರ್ಪಿನ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!

ಉದ್ಧವ್‌ಗೇ ನಮ್ಮ ಬೆಂಬಲ-ಎನ್‌ಸಿಪಿ:
‘ಉದ್ಧವ್‌ ಸರ್ಕಾರಕ್ಕೆ ನಮ್ಮ ಬೆಂಬಲ ಮುಂದುವರಿಯಲಿದೆ. ಆದರೆ ಬರೀ ಫೋಟೋ, ವಿಡಿಯೋ ಬಿಡುಗಡೆ ಮಾಡಿದರೆ ಸಾಲದು. ವಿಧಾನಸಭೆಯಲ್ಲೇ ಬಹುಮತ ಸಾಬೀತಾಗಬೇಕು. ಸರ್ಕಾರ ಬಹುಮತ ಸಾಬೀತು ಮಾಡಲಿದೆ’ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

ಎನ್‌ಸಿಪಿ ಸಭೆ ಬಳಿಕ ಮಾತನಾಡಿದ ಅವರು, ‘ಬಂಡಾಯ ಶಾಸಕರನ್ನು ಮೊದಲು ಗುಜರಾತ್‌ಗೆ, ನಂತರ ಅಸ್ಸಾಂಗೆ ಒಯ್ಯಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತು. ಏಕನಾಥ ಶಿಂಧೆ ಬಣ ವಿಧಾನಸಭೆಗೆ ಬರಬೇಕು. ಅವರು ಬಂದರæ ಪರಿಸ್ಥಿತಿಯೇ ಬದಲಾಗಲಿದೆ’ ಎಂದರು. ಈ ಮೂಲಕ ಶಾಸಕರ ಬಂಡಾಯದ ಹಿಂದೆ ಬಿಜೆಪಿ ಒತ್ತಡವಿದೆ. ವಾಸ್ತವಿಕವಾಗಿ ಶಾಸಕರಿಗೆ ಬಂಡೇಳಲು ಮನಸ್ಸಿಲ್ಲ ಎಂದು ಪರೋಕ್ಷವಾಗಿ ನುಡಿದರು.

ಬಾಹ್ಯ ಬೆಂಬಲಕ್ಕೂ ಸಿದ್ಧ:
‘ಉದ್ಧವ್‌ ಠಾಕ್ರೆ ಅವರೇ ಮುಂದುವರಿಯಬೇಕು ಎಂಬುದು ನಮ್ಮ ಇಚ್ಛೆ. ಇದಕ್ಕಾಗಿ ಸರ್ಕಾರದಿಂದ ಹೊರಹೋಗಿ ಬಾಹ್ಯಬೆಂಬಲ ನೀಡಲೂ ನಾವು ಸಿದ್ಧರಿದ್ದೇವೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಹರಿಹಾಯುತ್ತಿರುವ ಬಂಡಾಯ ಶಿವಸೇನಾ ಶಾಸಕರ ಸಿಟ್ಟು ತಣಿಸುವ ಯತ್ನ ಮಾಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿದ್ಯಮಾನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಹರಿಹಾಯ್ದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ