ತುಮಕೂರಿನಲ್ಲಿ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ, 2023ರ ಚುನಾವಣೆಯಿಂದ ಹಿಂದೆ ಸರಿದ ಶಾಸಕ

By Suvarna News  |  First Published Oct 6, 2022, 5:45 PM IST

ತುಮಕೂರು ಜಿಲ್ಲೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ವಿ ವೀರಭದ್ರಯ್ಯ ಮುಂದಿನ 2023ರ ವಿಧಾನಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದ್ದಾರೆ.


ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು. 

ತುಮಕೂರು (ಸೆ.6) : ಜೆಡಿಎಸ್‌ ಭದ್ರ ಕೋಟೆ ಅಂತಿದ್ದ ತುಮಕೂರು ಜಿಲ್ಲೆಯಲ್ಲಿ ಒಂದೊಂದೆ ಜೆಡಿಎಸ್‌ ಶಾಸಕರು ಪಕ್ಷ ಹಾಗೂ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದೀಗ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನವಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಂ.ವಿ ವೀರಭದ್ರಯ್ಯ ಮುಂದಿನ 2023ರ ವಿಧಾನಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದ್ದಾರೆ.  ಈ ಕುರಿತು ಬೆಂಗಳೂರಿನಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಗರೊಂದಿಗೆ ಭೇಟಿ ಮಾಡಿದ ವೀರಭದ್ರಯ್ಯ, ನನಗೆ ಆರೋಗ್ಯ ಸಮಸ್ಯೆಯಿಂದಾಗಿ ಚುನಾವಣೆಗೆ ಸ್ಪರ್ಧೆ ಮಾಡಲು ಆಗುತ್ತಿಲ್ಲ, ನೀವು ಯಾರನ್ನು ಅಭ್ಯರ್ಥಿಯನ್ನು ಮಧುಗಿರಿಗೆ ನಿಲ್ಲಿಸಿದ್ರೆ, ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಕೆ.ಎ.ಎಸ್‌ ಅಧಿಕಾರಿ ಎಲ್.ಸಿ ನಾಗರಾಜು ಅವರನ್ನು ರಾಜೀನಾಮೆ ಕೊಡಿಸಿ ಅಭ್ಯರ್ಥಿ ಮಾಡಿದ್ರೆ, ಅವರಿಗೆ ಬೆಂಬಲ ನೀಡುವುದಾಗಿ ಕುಮಾರಸ್ವಾಮಿ ಮುಂದೆ ಎಂ.ವಿ ವೀರಭದ್ರಯ್ಯ ವಾಗ್ದಾನ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ತಮ್ಮ ನಿರ್ಧಾರ ತಿಳಿಸಿದ ಬಳಿಕ ಮಧುಗಿರಿಯಲ್ಲೂ ಬೆಂಬಲಿಗರೊಂದಿಗೆ ವೀರಭದ್ರಯ್ಯ ಮಾತನಾಡಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಇದ್ದೀನಿ. ಸಂಘಟನೆ ಇರಲಿಲ್ಲ, ಕೆ,ಎನ್‌ ರಾಜಣ್ಣರಿಗೆ ಎದುರಾಗಿ ನಿಲ್ಲಲ್ಲ ಅನ್ನೋ ವಿಚಾರಕ್ಕೆ ನಾನು ಅಧೀರನಾಗಿಲ್ಲ,  ಮಾಜಿ ಶಾಸಕ ಕೆ.ಎನ್‌ ರಾಜಣ್ಣ ನನ್ನ ವಿರುದ್ಧ ಏನು ಟೀಕೆ ಮಾಡಿಲ್ಲ, ಯಾವುದೇ ಸನ್ನಿವೇಶದಲ್ಲಿ ಪಕ್ಷದ ಬಗ್ಗೆಯಾಗಲಿ, ನನ್ನ ವಿರುದ್ಧವಾಗಲಿ ದ್ವೇಷ ಸಾಧಿಸಲಿಲ್ಲ. 

Tap to resize

Latest Videos

ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷ ‘BRS’ ಉದಯ: ತೆಲಂಗಾಣ ಸಿಎಂ KCR ಜತೆ ಮಾಜಿ ಸಿಎಂ ಎಚ್‌ಡಿಕೆ ಭಾಗಿ..!

ಈ ಹಿಂದಿನ ಚುನಾವಣೆಯಲ್ಲಿ ದ್ವೇಷ ಸಾಧಿಸಿ ಅದರ ಫಲ ಅನುಭವಿಸಿದ್ರು. ಅವರು ನೆಗೆಟಿವ್‌ ಆಗಿ ಮಾತನಾಡಿದ್ರು ಅಂತ ಅಧೀರನಾಗಿಲ್ಲ, ನಿಮ್ಮ ಶಕ್ತಿ ಬಗ್ಗೆ ನನಗೆ ಭರವಸೆಯಿದೆ. ನನಗೆ ವೈಯಕ್ತಿಕವಾಗಿ ಆರೋಗ್ಯ ಸರಿಯಿಲ್ಲ, ನನ್ನದೇ ಆದಂತಹ ಸಮಸ್ಯೆಯಿದೆ. ಮನೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಷ್ಟ ಪಡುತ್ತಿಲ್ಲ, ರಾಜಕೀಯಕ್ಕಾಗಿ ಮನೆಯನ್ನು ಎರಡು ಭಾಗ ಮಾಡಿಕೊಳ್ಳಲು ಇಷ್ಟವಿಲ್ಲ,  ಈಗಾಗ್ಲೇ ಕುಮಾರಸ್ವಾಮಿ ಮುಂದೆ, ಹೈ ಕಮಾಂಡ್‌ ಮುಂದೆ ಮಾತನಾಡಿದ್ದೇನೆ. ಈಗ ಮಾತನ್ನು ವಾಪಸ್‌ ತೆಗೆದುಕೊಳ್ಳಲ್ಲ, ನಾನು ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ, ರಾಜಕೀಯ ಹೊರತಾಗಿ ನಿಮ್ಮ ಜೊತೆಗಿರುತ್ತೇನೆ ಎಂದು ಮಧುಗಿರಿಯಲ್ಲಿ ಜೆಡಿಎಸ್‌ ಶಾಸಕ ಎಂ.ವಿ ವೀರಭದ್ರಯ್ಯ ಹೇಳಿದ್ದಾರೆ. 

ಬಿಆರ್‌ಎಸ್‌ ಜತೆ ಸೇರಿ ಮುಂದಿನ ಚುನಾವಣೆ ಎದುರಿಸ್ತೇವೆ: ಕುಮಾರಸ್ವಾಮಿ

ಈ ಹಿಂದೆ ವಿಧಾನ ಪರಿಷತ್‌ ಮಾಜಿ ಸದಸ್ಯ ಬೆಮಲ್‌ ಕಾಂತರಾಜು ಜೆಡಿಎಸ್‌ ಗೆ ಗುಡ್‌ ಬಾಯ್‌ ಹೇಳಿದ್ರೆ, ಇನ್ನು ಕೆಲವೇ ತಿಂಗಳಲ್ಲಿ ಗುಬ್ಬಿ ಶಾಸಕ ಎಸ್.ಆರ್‌ ಶ್ರೀನಿವಾಸ್ ಜೆಡಿಎಸ್‌ ಪಕ್ಷ ತೊರೆಯುಲು ಸನ್ನದ್ಧರಾಗಿದ್ದಾರೆ. ಇದೀಗ ಮತ್ತೊಂದು ವಿಕೆಟ್‌ ಪತನವಾಗಿದೆ. ಅಲ್ಲದೆ ಕಳೆದ ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರವನ್ನು ಜೆಡಿಎಸ್‌ ಕಳೆದುಕೊಂಡಿದೆ. ಹೀಗಾಗಿ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ ದಿನೇ ದಿನೇ ತಮ್ಮ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ.

click me!