ಭಾರತ್ ಜೋಡೋ ಪಾದಯಾತ್ರೆಗೂ ಮುನ್ನ ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದರು. ಈ ವೇಳೆ, ನಾನು ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡಿದ್ದೇನೆ, ನನ್ನ ಪ್ರೀತಿಯ ದೇಶವನ್ನೂ ಕಳೆದುಕೊಳ್ಳಲ್ಲ ಎಂದೂ ಹೇಳಿದ್ದಾರೆ.
ಕಾಂಗ್ರೆಸ್‌ನ (Congress) ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಪ್ರಾರಂಭಿಸುವ ಮೊದಲು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಭಾವನಾತ್ಮಕ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ, "ದ್ವೇಷದ ರಾಜಕೀಯ" (Politics of Hate) ದಿಂದ ತಂದೆಯನ್ನು ಕಳೆದುಕೊಂಡಿದ್ದೇನೆ ಮತ್ತು "ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳಲು" ಸಿದ್ಧವಾಗಿಲ್ಲ ಎಂದು ಹೇಳಿದರು. ಸೆಪ್ಟೆಂಬರ್ 7, 2022ರ ಬೆಳಗ್ಗೆ ಕನ್ಯಾಕುಮಾರಿಯಿಂದ ಬೃಹತ್ ಯಾತ್ರೆಗೆ ಚಾಲನೆ ನೀಡುವ ಮೊದಲು ರಾಹುಲ್ ಗಾಂಧಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿದರು. ಮೇ 21, 1991 ರಂದು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಎಲಂನ (Liberation Tigers of Tamil Eelam) (LTTE) ಭಯೋತ್ಪಾದಕರಿಂದ ಆತ್ಮಾಹುತಿ ದಾಳಿಯಲ್ಲಿ (Suicide Attack) ರಾಜೀವ್ ಗಾಂಧಿ ಹತ್ಯೆಯಾದ ಸ್ಥಳ ಶ್ರೀಪೆರಂಬದೂರು.
ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿ ಆ ಫೋಟೋದೊಂದಿಗೆ ಈ ಸಂಬಂಧ ಟ್ವೀಟ್ (Tweet) ಮಾಡಿದ್ದಾರೆ. "ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪ್ರೀತಿಯ ದೇಶವನ್ನೂ ನಾನು ಕಳೆದುಕೊಳ್ಳುವುದಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ. ಭರವಸೆ ಭಯವನ್ನು ಸೋಲಿಸುತ್ತದೆ. ಒಟ್ಟಿಗೆ, ನಾವು ಜಯಿಸುತ್ತೇವೆ" ಎಂದು ತನ್ನ ತಂದೆಯ ಸ್ಮಾರಕಕ್ಕೆ ನಮನ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿಕೊಂಡಿದ್ದಾರೆ. ಇನ್ನು, ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ, ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಗೆ ಮಹಾತ್ಮ ಗಾಂಧಿ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಾಹುಲ್ ಗಾಂಧಿ ಅವರಿಗೆ ಯಾತ್ರೆಯ ಪ್ರಾರಂಭಕ್ಕಾಗಿ ರಾಷ್ಟ್ರಧ್ವಜವನ್ನು (National Flag) ಹಸ್ತಾಂತರಿಸಲಿದ್ದಾರೆ.
ಇದನ್ನು ಓದಿ: Rahul Gandhi ಪಾಕಿಸ್ತಾನಕ್ಕೆ ಹೋಗಿ ಭಾರತ್ ಜೋಡೋ ಯಾತ್ರೆ ಮಾಡಲಿ: ಅಸ್ಸಾಂ ಸಿಎಂ
ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಇದುವರೆಗೆ ಆಯೋಜಿಸಲಾದ "ದೀರ್ಘ ರಾಜಕೀಯ ಯಾತ್ರೆ" ಎಂದು ಕಾಂಗ್ರೆಸ್ ಹೇಳಿದೆ. ಇಂದು ಸಂಜೆ ನಡೆಯುವ ಸಮಾರಂಭದಲ್ಲಿ ಯಾತ್ರೆಗೆ ಚಾಲನೆ ಸಿಕ್ಕಿದ್ದು ನಾಳೆ ಬೆಳಗ್ಗೆ ಕನ್ಯಾಕುಮಾರಿಯಿಂದ (Kanyakumari) ಕಾಶ್ಮೀರದವರೆಗೆ (Kashmir) 3,500 ಕಿ.ಮೀಗೂ ಹೆಚ್ಚು ದೂರದ ಪಾದಯಾತ್ರೆ (Padayatra) ಆರಂಭವಾಗಲಿದೆ. ಇನ್ನು, ರಾಹುಲ್ ಗಾಂಧಿ ಅವರೊಡನೆ 118 'ಭಾರತ ಯಾತ್ರಿಗಳು' ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ನ ಈ ಪಾದಯಾತ್ರೆ 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮತದಾರರ ಬೆಂಬಲವನ್ನು ಗಳಿಸುವ ಹತಾಶ ಪ್ರಯತ್ನವಾಗಿದೆ. ಅನುಭವಿ ನಾಯಕರ ನಿರ್ಗಮನದ ಅಡಿಯಲ್ಲಿ ಪಕ್ಷವು ತತ್ತರಿಸುತ್ತಿರುವ ಸಮಯದಲ್ಲಿ ಈ ಮೆರವಣಿಗೆ ಆರಂಭವಾಗುತ್ತಿದೆ. ಇತ್ತೀಚಿಗೆ ಮತ್ತು ಪ್ರಮುಖವಾಗಿ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಈ ಮಧ್ಯೆ, ನಿರುದ್ಯೋಗ (Unemployment), ಬೆಲೆ ಏರಿಕೆ (Price Rise) ಮತ್ತು ಹಣದುಬ್ಬರದಂತಹ (Inflation) ವಿವಿಧ ವಿಷಯಗಳ ಕುರಿತು ದೇಶವನ್ನು ಒಂದುಗೂಡಿಸುವುದು ಮತ್ತು ಸಾಮಾನ್ಯ ಜನರೊಂದಿಗೆ ಸಂಪರ್ಕ ಸಾಧಿಸುವುದು ಈ ಯಾತ್ರೆಯ ಗುರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
I lost my father to the politics of hate and division. I will not lose my beloved country to it too.
Love will conquer hate. Hope will defeat fear. Together, we will overcome. pic.twitter.com/ODTmwirBHR
ಇದನ್ನೂ ಓದಿ: Bharat Jodo Yatra: ಇಂದಿನಿಂದ ರಾಹುಲ್ ಗಾಂಧಿ ಪಾದಯಾತ್ರೆ