ಕಿತ್ತೂರು ಗ್ರಾಮದ ಅಭಿವೃದ್ದಿಗೆ ನಾನು ಸಾಕಷ್ಟು ಅನುದಾನ ನೀಡಿದ್ದು, ಈ ಹಿಂದೆ ಎರಡು ಚುನಾವಣೆಯಲ್ಲಿ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿದ್ದೀರಿ, ಈ ಬಾರಿಯು ಕೂಡ ನನ್ನ ಗೆಲುವಿಗೆ ಸಹಕಾರ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
ಕಿತ್ತೂರು (ಮಾ.07): ಕಿತ್ತೂರು ಗ್ರಾಮದ ಅಭಿವೃದ್ದಿಗೆ ನಾನು ಸಾಕಷ್ಟು ಅನುದಾನ ನೀಡಿದ್ದು, ಈ ಹಿಂದೆ ಎರಡು ಚುನಾವಣೆಯಲ್ಲಿ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿದ್ದೀರಿ, ಈ ಬಾರಿಯು ಕೂಡ ನನ್ನ ಗೆಲುವಿಗೆ ಸಹಕಾರ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಕಿತ್ತೂರು ಗ್ರಾಪಂ ಕಾರ್ಯಾಲಯ ಉದ್ಘಾಟಿಸಿದ ನಂತರ ಅವರು ಮಾತನಾಡಿ, 11 ಸಾವಿರ ಅನಧಿಕೃತ ತಂಬಾಕು ಬೆಳೆಗಾರರಿದ್ದು, ಅವರಿಗೆ ಸರಾಸರಿ ಒಂದು ಸಾವಿರ ಕೆ.ಜಿ.ಯಂತೆ ತಂಬಾಕು ಬಿಡಲು ಅನುಮತಿ ನೀಡಿ ಲೈಸೆನ್ಸ್ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದೇನೆ, ಈ ಬಾರಿ ತಂಬಾಕಿಗೆ ಸರಾಸರಿ 280 ರು. ಗಳಿಗೂ ಹೆಚ್ಚು ಬೆಲೆ ಸಿಕ್ಕಿದ್ದರಿಂದ ರೈತರಿಗೆ ಅನುಕೂಲವಾಗಿದೆ.
ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಶ್ರೀರಂಗಪಟ್ಟಣದ ಹೊರವಲಯದಿಂದ ಕುಶಾಲನಗರ ರಾಣಿ ಗೇಟ್ ವರೆಗೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯನ್ನು 4,130 ಕೋಟಿ ರು. ಗಳ ವೆಚ್ಚದಲ್ಲಿ, ನಿರ್ಮಾಣವಾಗಲಿದೆ, ಮುಂದಿನ 15 ತಿಂಗಳೊಳಗೆ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಿದ್ದೇವೆ, ಬೆಂಗಳೂರಿನಿಂದ ಪಿರಿಯಾಪಟ್ಟಣಕ್ಕೆ ಕೇವಲ ಎರಡುವರೆ ಗಂಟೆಗೆ ತಲುಪುವ ವ್ಯವಸ್ಥೆ ಇದಾಗಿದ್ದು, ಸಾರಿಗೆ ವ್ಯವಸ್ಥೆ ಉತ್ತಮವಾದ ನಂತರ ಕೈಗಾರಿಕೆಗಳು, ದೊಡ್ಡ ಉದ್ಯಮಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
undefined
ಬಾಂಬರ್ ಬಂಧನ ವಿಚಾರದಲ್ಲಿ ಕಾಂಗ್ರೆಸ್‌ನಿಂದ ರಾಜಕೀಯ ಹಸ್ತಕ್ಷೇಪ: ಗೋವಾ ಸಿಎಂ ಪ್ರಮೋದ್ ಸಾವಂತ್!
ಪಿರಿಯಾಪಟ್ಟಣ ಮಸಣಿಕಮ್ಮ ದೇವಸ್ಥಾನಕ್ಕೆ 9.20 ಕೋಟಿ ರು. ಗಳ ವೆಚ್ಚದಲ್ಲಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದೇನೆ, ಜಲಜೀವನ್ ಮಿಷನ್ ಯೋಜನೆಯಡಿ 303 ಗ್ರಾಮಗಳಿಗೂ ಕಾವೇರಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಜಿ ಶಾಸಕ ಕೆ. ಮಹದೇವ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದೇನೆ, ಅಮೃತ ಯೋಜನೆ ಅಡಿಯಲ್ಲಿ ಪಿರಿಯಾಪಟ್ಟಣಕ್ಕೆ ಕೊಪ್ಪದಿಂದ ನೀರು ಸರಬರಾಜು ಮಾಡಲು ಎಲ್ಲ ರೀತಿಯ ಕ್ರಮಗಳನ್ನು ವಹಿಸಿದ್ದೇನೆ, ಈ ಭಾಗವು ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ, ನಾನು ಸಂಸದನಾಗಿ ಹತ್ತು ವರ್ಷ ಕಾಲ ಕಳೆದಿದೆ, ನಾನು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಿಲ್ಲ, ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ಆದ್ದರಿಂದ ಇನ್ನು ಹೆಚ್ಚಿನ ಕೆಲಸ ಮಾಡಲು ಬೆಂಬಲ ನೀಡಿ ಎಂದು ಕೋರಿದರು.
ಮಂಡ್ಯದಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡೇ ಮಾಡ್ತೇನೆ: ಶಾಸಕ ಪಿ.ರವಿಕುಮಾರ್
ಸಚಿವ ಕೆ. ವೆಂಕಟೇಶ್ ಮಾತನಾಡಿ, ಗ್ರಾಮಕ್ಕೆ 80 ಲಕ್ಷ ರು. ಗಳ ಅನುದಾನ ನೀಡಿದ್ದು, ಎಲ್ಲ ಸಮುದಾಯದವರು ಆಯಾಯ ಬೀದಿಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುವಂತೆ ಹೇಳಿದರು. ಗ್ರಾಮದಲ್ಲಿ ಅಭಿವೃದ್ಧಿಯ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದು ಕೆಲಸ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಗ್ರಾಪಂ ಸಿಬ್ಬಂದಿ ಹಾಗೂ ಸದಸ್ಯರು ಮತ್ತು ಗುತ್ತಿಗೆದಾರರನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ಶೋಭಾ, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಉಪಾಧ್ಯಕ್ಷ ಪ್ರಭಾವತಿ, ಸದಸ್ಯರಾದ ದಿನೇಶ್, ಕಾವೇರಮ್ಮ, ದೀಪಕ್, ಬೇಲೂರಯ್ಯ, ರಾಜಮಣಿ, ಆರ್. ಎನ್. ಜಗದೀಶ್, ಜಯಶೀಲ, ರಂಜಿನಿ, ವಸಂತ್, ಬೋರೇಗೌಡ, ಗಿರಿಜಾ, ಮಹದೇವ, ನಟರಾಜು, ಮಂಜಪ್ಪ, ಗಣೇಶ್, ನಳಿನಿ, ಪಿಡಿಓ ರಾಜಶೇಖರ್, ಬಿಜೆಪಿ ಸಂಚಾಲಕ ರಾಜೇಗೌಡ, ಸತೀಶ್, ಜಗದೀಶ್, ಸಿಬ್ಬಂದಿ ಮಲ್ಲೇಶ್, ದೀಪು ಇದ್ದರು.