ರಂಗೇರಿದ ಚಿಕ್ಕೋಡಿ ಲೋಕಸಭಾ ಎಲೆಕ್ಷನ್: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಕ್ಯೂ..

By Web DeskFirst Published Feb 3, 2019, 10:20 PM IST
Highlights

ಲೋಕ ಸಮರಕ್ಕೆ ದಿನಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ ರಾಜ್ಯ ಕೇಸರಿ ಪಡೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದ್ದು, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ಪ್ರಭಾವಿ ನಾಯಕ ಮಧ್ಯೆಯೇ  ಪೈಪೋಟಿ ಶುರುವಾಗಿದೆ. 

ಚಿಕ್ಕೋಡಿ, [ಫೆ.03] ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಸೃಷ್ಟಿಯಾಗುವ ಮತ್ತೊಂದು ಜಿಲ್ಲೆ ಅಂದ್ರೆ ಅದು ಚಿಕ್ಕೋಡಿ. ಸಕ್ಕರೆ ಲಾಬಿಯದ್ದೆ ಅಧಿಪತ್ಯ ಹೊಂದಿರುವ ಈ ಜಿಲ್ಲೆ ಒಂದು ಅವಧಿಯಲ್ಲಿ ಕಾಂಗ್ರೆಸ್ ನ ಭದ್ರಕೋಟೆ. 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಟಿಕೆಟ್ ಗಾಗಿ ಕೇಸರಿ ನಾಯಕರ ನಡುವೆ ಪೈಪೋಟಿ ನಡೆದಿದೆ.

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಚಿಕ್ಕೋಡಿ ಲೋಕಸಭಾ ಟಿಕೆಟ್ ಗಾಗಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ್ ಕತ್ತಿ, ಹಾಗೂ ಮಾಜಿ ಸಚಿವ ಲಕ್ಷಣ್ ಸವಧಿ ನಡುವೆ ಭರ್ಜರಿ ಲಾಬಿ ಶುರುವಾಗಿದೆ. 

ಇವರ ಜೊತೆಗೆ ಅಣ್ಣಾ ಸಾಹೇಬ ಜೊಲ್ಲೆ, ಮಹಾಂತೇಶ ಕವಟಗಿಮಠ, ಅಮರಸಿಂಹ ಪಾಟೀಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಈ ಬಗ್ಗೆ ಇಂದು [ಭಾನುವಾರ] ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ,  'ಪಕ್ಷದ ವರಿಷ್ಠರು ಸೂಚಿಸಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ' ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ಕರ್ನಾಟಕದಲ್ಲಿ ಮೋದಿ ದಂಡಯಾತ್ರೆಗೆ ಪ್ರತಿಯಾಗಿ 'ಕೈ' ಬ್ರಹ್ಮಾಸ್ತ್ರ..!

ನನಗೆ ಟಿಕೆಟ್ ಕೊಡಲು ಪಕ್ಷದ ವರಿಷ್ಠರ ಬಳಿ ಕೇಳಿದ್ದೇನೆ. ಅವರು ಯಾರಿಗೆ ಕೊಡುತ್ತಾರೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಒಂದು ವೇಳೆ ನನಗೆ ನೀಡಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಾಗಿದ್ದೇನೆ ಎಂದರು.

ಕ್ಷೇತ್ರದ ಅಧಿಪತ್ಯ ಸಾಧಿಸಲು ಬಿಜೆಪಿ ಹುರಿಯಾಳುಗಳ ನಡುವೆಯೇ ಟಿಕೆಟ್ ಪೈಪೋಟಿ ಶುರುವಾಗಿದ್ದು, ಕೇಸರಿ ನಾಯಕರು ಯಾರಿಗೆ ಮಣೆ ಹಾಕುತ್ತಾರೆ ಅನ್ನೋದೇ ಕುತೂಹಲವಾಗಿದೆ.

ಇನ್ನು ಕಾಂಗ್ರೆಸ್ ನಿಂದ ಕಳೆದ ಬಾರಿ ಒಲ್ಲದ ಮನಸ್ಸಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪ್ರಕಾಶ್ ಹುಕ್ಕೇರಿ, ಈ ಬಾರಿಯೂ ಹುಕ್ಕೇರಿ ಚಿಕ್ಕೋಡಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಒಟ್ಟಾರೆ ದಳತತಿಗಳಿಗೆ ನೆಲಯಿಲ್ಲದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೇ ನೇರ ಹಣಾಹಣಿ ಏರ್ಪಡಲಿದೆ. 

click me!