ಮಂಡ್ಯ: ಇಂದಿನಿಂದಲೇ ಸೇವೆ ಶುರು ಎಂದ HDK ‘ಕುಮಾರ’

Published : Mar 03, 2019, 07:16 PM ISTUpdated : Mar 03, 2019, 07:25 PM IST
ಮಂಡ್ಯ: ಇಂದಿನಿಂದಲೇ ಸೇವೆ ಶುರು ಎಂದ HDK ‘ಕುಮಾರ’

ಸಾರಾಂಶ

ದೋಸ್ತಿಗಳ ನಡುವೆ ಕಿತ್ತಾಟ ಎಬ್ಬಿಸಿದ್ದ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು  ಪಕ್ಕಾ ಆಗಿದೆ. ಈ ಬಗ್ಗೆ ನಿಖಿಲ್ ಅವರೇ ಮಂಡ್ಯದಲ್ಲಿ ಮಾತನಾಡಿದ್ದಾರೆ.

ಮಂಡ್ಯ[ಮಾ.03]  ಮಂಡ್ಯದ ಲೋಕಸಭಾ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಫಿಕ್ಸ್ ಆಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತ ಎಂಬುದನ್ನು ಅವರೇ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ  ಮಂಡ್ಯದಲ್ಲಿ ಇಂದಿನಿಂದ ನನ್ನ‌ ಸೇವೆ ಆರಂಭವಾಗಲಿದೆ‌‌. ನಮ್ಮ ಪಕ್ಷದ ವರಿಷ್ಠರು ನನ್ನ‌ ಹೆಸರು ಘೋಷಿಸಿದ್ದಕ್ಕೆ ಅಭಾರಿಯಾಗಿದ್ದೀನಿ.  ಮಂಡ್ಯ ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ನನ್ನ‌ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇಂದಿನಿಂದ ಇನ್ನ ಮುಂದೆ ಮಂಡ್ಯದಲ್ಲಿ ನನ್ನ ಸೇವೆ ಶುರು ಎಂದು ಹೇಳಿದರು.

ಸುಮಲತಾ ಪರ ಎಂಬಿಪಿ ಬ್ಯಾಟ್.. ಬದಲಾಗುತ್ತಾ ಟಿಕೆಟ್  ಫೈಟ್!

ಸುಮಲತಾ ಅಕ್ಕ ಸ್ಪರ್ಧೆ ಬಗೆಗೆ ನಾನು ಏನೂ ಹೇಳಲ್ಲ.  ಚುನಾವಣೆಗೆ ನಿಲ್ಲುವ ಬಗ್ಗೆ  ಅವರು ಸ್ವತಂತ್ರರು. ಅಂಬರೀಶಣ್ಣನ ಬಗೆಗೆ ನನಗೆ ಗೌರವವಿದೆ. ಅಭಿ ನನ್ನ ತಮ್ಮ ಇದ್ದಹಾಗೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಮಾತಾಡ್ತಿನಿ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲೇ ಮನೆ ಮಾಡ್ತಿನಿ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್