ಪರೇಶ್ ಮೇಸ್ತಾ ಹತ್ಯೆ ಪ್ರಕರಣದಿಂದಲೂ ಬಿಜೆಪಿ ಹೆಣದ ರಾಜಕೀಯ ಮಾಡ್ತಾ ಬಂದಿದೆ. ತಪ್ಪು ಮಾಡಿದವನು ಯಾವ ಧರ್ಮದವನು ಅಂತಾ ನೋಡಬಾರದು. ಆದರೆ ಬಿಜೆಪಿ ಯಾವಾಗಲೂ ಧರ್ಮ, ಹೆಣದ ರಾಜಕಾರಣ ಮಾಡ್ತಾನೆ ಬಂದಿದೆ ಎಂದು ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.
ಬೆಂಗಳೂರು (ಏ.27): ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ಪ್ರಕಾಶ್ ರಾಜ್ ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಗಳು ಒಬ್ಬ ದೊಣ್ಣೆ ನಾಯಕನ ತರ ಆಡ್ತಿದ್ದಾರೆ. ಅದ್ಯಾವ ಸೀಮೆ ದೊಣ್ಣೆ ನಾಯಕನೋ ಗೊತ್ತಿಲ್ಲ. ತಮ್ಮ ಪ್ರಣಾಳಿಕೆ ಬಗ್ಗೆ ಮಾತಾಡಲ್ಲ ಆದರೆ ಕಾಂಗ್ರೆಸ್ ಪ್ರಣಾಳಿಕೆಯನ್ನ ಮೆನುಗೆ ಹೋಲಿಸ್ತಾರೆ. ಕಾಂಗ್ರೆಸ್ನದ್ದು ಮುಸ್ಲಿಂ ಪ್ರಣಾಳಿಕೆ ಅಂತಾರೆ. ಇವರ ಪ್ರಣಾಳಿಕೆಯಲ್ಲಿ ನಾವು ಏನು ತಿನ್ನಬೇಕು? ಎಂದು ಪ್ರಶ್ನಿಸಿದ್ದಾರೆ.
undefined
ಪಿಎಂ ಕೇರ್ ಅಕೌಂಟ್ ನಲ್ಲಿ ಸಾವಿರಾರು ಕೋಟಿ ಹಣ ಇದೆ. ಆದರೆ ಅದು ಎಲ್ಲಿಂದ ಬಂತು, ಯಾಕೆ ಬಂತು, ಯಾವುದಕ್ಕೆ ಖರ್ಚು ಮಾಡಿದ್ರಿ, ವಿದೇಶದಿಂದ ಎಷ್ಟು ಹಣ ಬಂತು, ಯಾಕೆ ತಗೊಂಡ್ರಿ ಇದ್ಯಾವುದಕ್ಕೂ ಪ್ರಧಾನಿಯಿಂದ ಉತ್ತರ ಇಲ್ಲ. ಚಾಲಕರು ಹಾಗೂ ವಾಹನ ಮಾಲೀಕರ ಬಳಿ ಪ್ರತಿದಿನ ಬಿಜೆಪಿಯವರು ಸುಲಿಗೆ ಮಾಡ್ತಿದ್ದಾರೆ. ಪಾಸ್ಟ್ ಟ್ಯಾಗ್ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡ್ತಿದ್ದಾರೆ. ಪಾಸ್ಟ್ ಟ್ಯಾಗ್ ನಲ್ಲಿ 400 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕಂತೆ. ಯಾಕೆ ಇಡಬೇಕು ಅದು ಎಲ್ಲಿ ಹೋಗುತ್ತೆ ಯಾರು ಖರ್ಚು ಮಾಡ್ತಾರೆ? ಆ ದುಡ್ಡು ಏನಾಗುತ್ತೆ? ನಾವ್ಯಾಕೆ 400 ರೂಪಾಯಿ ಇಡಬೇಕು ಎಂದು ಪ್ರಶ್ನಿಸಿದರು.
'ಮಹಾಪ್ರಭುಗಳು ಫಕೀರರು, ನಾನು ಜಂಗಮ..' ಪ್ರಧಾನಿ ಮೋದಿ ಹೆಸರೇಳದೇ ನಟ ಪ್ರಕಾಶ್ ರಾಜ್ ವಾಗ್ದಾಳಿ
ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ:
ದೇಶದಲ್ಲಿ ಚುನಾವಣಾ ಆಯೋಗ ಕೂಡ ಒಂದು ಪಕ್ಷದ ಪರ ಕೆಲಸ ಮಾಡ್ತಾ ಇದೆ ಎಂದು ಪ್ರಕಾಶ್ ರಾಜ್ ಚುನಾವಣಾ ಆಯೋಗದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗಕ್ಕೆ ದೂರುಗಳು ಬರದೇ ಯಾವುದೇ ಕ್ರಮ ತೆಗೆದುಕೊಳ್ತಿಲ್ಲ. ಎಲ್ಲವನ್ನೂ ನೋಡಿಕೊಂಡು ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನ ಮುಸ್ಲಿಂ ಮ್ಯಾನಿಫೆಸ್ಟ್ ಆಂತ ಹೇಳಿದ್ರೂ ಕ್ರಮ ಜರುಗಿಸುತ್ತಿಲ್ಲ. ವಿರೋಧ ಪಕ್ಷದ ನಾಯಕ ಅಧಿಕಾರಕ್ಕೆ ಬರಬಾರದು ಎಂಬ ಪ್ರಯತ್ನ ನಡೀತಾ ಇದೆ ಎಂದು ಆರೋಪಿಸಿದರು.
ಧಾರವಾಡದಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಪರೇಶ್ ಮೇಸ್ತಾ ಪ್ರಕರಣದಿಂದ ಬಿಜೆಪಿ ಹೆಣದ ರಾಜಕೀಯ ಮಾಡ್ತಾ ಬಂದಿದೆ. ತಪ್ಪು ಮಾಡಿದವನು ಯಾವ ಧರ್ಮದವನು ಅಂತಾ ನೋಡಬಾರದು. ಆದರೆ ಬಿಜೆಪಿ ಯಾವಾಗಲೂ ಧರ್ಮ, ಹೆಣದ ರಾಜಕಾರಣ ಮಾಡ್ತಾನೆ ಬಂದಿದೆ. ಬಜರಂಗಬಲಿ ಅಂದತಕ್ಷಣ ಓಟು ಹಾಕಬೇಕಂತೆ. ಇವತ್ತು ಕೇಸರಿ, ಕಾವಿಯನ್ನ ನೋಡಿ ಹೆದರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಸೇರ್ಪಡೆ ಸುದ್ದಿ: ನನ್ನನ್ನು ಖರೀದಿಸುವಷ್ಟು ಅವರು ಶ್ರೀಮಂತರೇ? ಪ್ರಕಾಶ್ ರಾಜ್ ಪ್ರಶ್ನೆ
ದೇವೇಗೌಡ ವಿರುದ್ಧ ಪ್ರಕಾಶ್ ಕಿಡಿ:
ಮೋದಿಯವರು ನಮ್ಮ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ. ಆದರೆ ಮಾಜಿ ಪ್ರಧಾನಿ ದೇವೇಗೌಡ ಅದನ್ನ ಅಕ್ಷಯ ಪಾತ್ರೆ ಅಂತಾರೆ. ಅದು ಅವರಿಗೆ ಈಗ ಗೊತ್ತಾಗಲ್ಲ ಇನ್ನ ಕೆಲವೇ ದಿನಗಳಲ್ಲಿ ಅವರು ಮತ್ತು ಅವರ ಮಗ ಚೊಂಬು ಎತ್ತಿಕೊಂಡು ಹೊಲದಕಡೆ ಹೋಗೋ ಪರಿಸ್ಥಿತಿ ಬಂದಾಗ ಗೊತ್ತಾಗುತ್ತೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.