ಕಾಂಗ್ರೆಸ್‌ ತೆಗಳುವುದೇ ಮೋದಿ ಸಾಧನೆ, ಅವರು ಸುಳ್ಳಿನ ಸರದಾರ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Apr 18, 2024, 6:03 AM IST

ಕಾಂಗ್ರೆಸ್‌ ಅನ್ನು ತೆಗಳುವುದೇ ಮೋದಿ ಅವರ 10 ವರ್ಷದ ಸಾಧನೆಯಾಗಿದೆ. ಪ್ರತಿ ಭಾಷಣದಲ್ಲೂ 20 ನಿಮಿಷ ಅವರು ಕಾಂಗ್ರೆಸ್ ಅನ್ನು ತೆಗಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. 


ಮಾಲೂರು (ಏ.18): ಕಾಂಗ್ರೆಸ್‌ ಅನ್ನು ತೆಗಳುವುದೇ ಮೋದಿ ಅವರ 10 ವರ್ಷದ ಸಾಧನೆಯಾಗಿದೆ. ಪ್ರತಿ ಭಾಷಣದಲ್ಲೂ 20 ನಿಮಿಷ ಅವರು ಕಾಂಗ್ರೆಸ್ ಅನ್ನು ತೆಗಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಮಂಡ್ಯ ಹಾಗೂ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಬಗ್ಗೆ ಪ್ರಸ್ತಾಪಿಸಬೇಡಿ, ಟೀಕಿಸಬೇಡಿ ಎಂದು ನಮ್ಮ ಪಕ್ಷದವರೇ ನನಗೆ ಸಲಹೆ ನೀಡುತ್ತಾರೆ. ಮೋದಿ ಅವರು ಸುಳ್ಳಿನ ಸರದಾರ, ಅವರಿಗೆ ಸುಳ್ಳು ಹೇಳುವುದೇ ಕಸುಬು.

ಈಗ ಅವರು ಮೋದೀಕಿ ಗ್ಯಾರಂಟಿ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ನಾವಾದರೂ ಕಾಂಗ್ರೆಸ್ ಹೆಸರು ಹೇಳುವ ಮೂಲಕ ನಮ್ಮ ಪ್ರಗತಿ ಪಟ್ಟಿ ತಿಳಿಸುತ್ತೇವೆ. ಆದರೆ ಮೋದಿ ಎಲ್ಲ ನಾನೇ ಅನ್ನುತ್ತಾರೆ, ಅಲ್ಲದೆ ಗ್ಯಾರಂಟಿ ಸ್ಲೋಗನ್‌ ಅನ್ನೂ ಅವರು ನಮ್ಮಿಂದ ಕದ್ದಿದ್ದಾರೆ ಎಂದು ಆರೋಪಿಸಿದರು. ಮೋದಿ ನಡುವಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕ. ನಿಮ್ಮ ಬಳಿ ಬಿಜೆಪಿಯವರು ಮತ ಕೇಳಲು ಬಂದರೆ ಬರಗಾಲಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ತರಿಸಿದ್ದೀರಿ ಎಂದು ಕೇಳಿ, ಜಿಎಸ್ಟಿ ಎಷ್ಟು ಹಣ ವಾಪಸ್‌ ನೀಡಿದ್ದೀರಿ ಎಂದು ಪ್ರಶ್ನಿಸಿ ಎಂದು ಮತದಾರರಿಗೆ ಕರೆ ನೀಡಿದರು.

Tap to resize

Latest Videos

KCET Exam 2024: ಇಂದು, ನಾಳೆ ಸಿಇಟಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಕಡ್ಡಾಯ ಮಾರ್ಗಸೂಚಿ

ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೊದಿಯವರು ಕಳೆದ ಹತ್ತು ವರ್ಷಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೊಜನೆಗಳನ್ನು ರೂಪಿಸದೇ ಮನ್‌ಕೀ ಬಾತ್ ಕಾರ್ಯಕ್ರಮದ ಮೂಲಕ ದೂರದರ್ಶನ ಹಾಗೂ ರೇಡಿಯೊದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ನಾವು ವಿಧಾನಸಭೆ ಚುನಾವಣೆಯಲ್ಲಿ ನೀಡಿದ ೫ ಗ್ಯಾರಂಟಿಗಳನ್ನು ಕೇವಲ ೮ ತಿಂಗಳಲ್ಲಿ ಜಾರಿಗೊಳಿಸಿ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ. 

ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಇರುವ ವ್ಯತ್ಯಾಸದ ಗ್ಯಾರಂಟಿಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ವಿಧಾನಸಭೆ ವ್ಯಾಪ್ತಿಯ ಭಂಕೂರ ಮತ್ತು ರಾವೂರ ಜಿಪಂ ವ್ಯಾಪ್ತಿಯಲ್ಲಿ ಲೊಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಅಚ್ಛೆದಿನ್‌ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದ್ದು ಅಚ್ಛೆದಿನ್‌ ಬದಲಾಗಿ ಬೆಲೆ ಏರಿಕೆ, ಸಿಲಿಂಡರ್ ಬೆಲೆ, ಪೆಟ್ರೋಲ್, ಡಿಜಲ್, ನಿರುದ್ಯೊಗ, ರೈತರ ಆತ್ಮಹತ್ಯೆ, ಕನಿಷ್ಟ ಬೆಂಬಲ ಬೆಲೆ ಹಾಗೂ ರೈತರ ಆದಾಯ ದ್ವೀಗುಣಗೊಳಿಸುವ ಯಾವ ಅಶ್ವಾಸನೆಗಳು ಈಡೇರಿಲ್ಲಾ. 

ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ

ಅವರಿಂದ ದೊಡ್ಡ ಉದ್ದಿಮೆದಾರರಿಗೆ ಅನುಕೂಲವಾಗಿದೆಯೇ ಹೊರತು ಸಾಮಾನ್ಯ ಜನರ ಸಮಸ್ಯೆಗಳಲ್ಲಾ ಎಂದರು. ಈಗ ನಮ್ಮ ಗ್ಯಾರಂಟಿಗಳನ್ನು ಕಾಫಿ ಮಾಡಿರುವ ಪ್ರಧಾನಿ ಮೊದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅವುಗಳಿಗೆ ವಾರಂಟಿ ಇಲ್ಲಾ ಅವರದ್ದು ಏನಿದ್ದರೂ ಪೇಪರ ಮೇಲಿನ ಗ್ಯಾರಂಟಿಗಳು ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದು ಟೀಕಿಸಿದರು.

click me!