
ದೇಶ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗಿದೆ, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಕ್ರಮವಾಗಿ ಎರಡನೇ ಮತ್ತು ಮೂರನೇ ಹಂತಗಳಲ್ಲಿ 26 ಏಪ್ರಿಲ್ 2024 ಮತ್ತು ಮೇ 7ರಂದು ಮತದಾನ ನಡೆಯಲಿದೆ. ನಾಳೆ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬೆಂಗಳೂರು ಸೆಂಟ್ರಲ್ ಕೂಡಾ ಸೇರಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಪ್ರತಿ ಬಾರಿಯೂ ಕಡಿಮೆ ಮತದಾನ ದಾಖಲಾಗುತ್ತದೆ. ಹೀಗಾಗಿ ಮತದಾರರನ್ನು ಹುರಿದುಂಬಿಸಲು ಹಲವು ಹೊಟೇಲ್, ಟ್ಯಾಕ್ಸಿ ಸೇವೆಗಳು ಆಫರ್‌ನ್ನು ನೀಡಿವೆ. ಇದು ಉಚಿತ ಊಟ, ಬಿಯರ್ ಮತ್ತು ಮತಗಟ್ಟೆಗಳನ್ನು ತಲುಪಲು ಬೈಕ್ ಟ್ಯಾಕ್ಸಿಗಳ ಮೇಲಿನ ರಿಯಾಯಿತಿಗಳನ್ನು ಸಹ ಒಳಗೊಂಡಿದೆ.
ಎಲ್ಲೆಲ್ಲಿ ಏನೇನು ಆಫರ್ ಲಭ್ಯವಿದೆ?
ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ವೋಟ್ ಹಾಕಿದ ಜನರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಡ್ಡು ಮತ್ತು ಜ್ಯೂಸ್ ಅನ್ನು ಉಚಿತವಾಗಿ ಘೋಷಿಸಿದೆ. ಮತದಾನದ ಪುರಾವೆಯಾಗಿ ಶಾಯಿ ಹಾಕಿದ ಬೆರಳುಗಳನ್ನು ತೋರಿಸಬೇಕಷ್ಟೆ. ಮಾಲ್ಗುಡಿ ಮೈಲಾರಿ ಮನೆ, ಉಚಿತ ಮೈಲಾರಿ ದೋಸೆ ಮತ್ತು ಫಿಲ್ಟರ್ ಕಾಫಿ ಒದಗಿಸುತ್ತಿದೆ. ಕೆಫೆ ಉಡುಪಿ ರುಚಿ ಮತದಾರರಿಗೆ ಉಚಿತ ಮಾಕ್‌ಟೈಲ್ ಭರವಸೆ ನೀಡಿದೆ. ಓರಿಯನ್ ಮಾಲ್ ಮತ್ತು ಲುಲು ಮಾಲ್‌ನಲ್ಲಿರುವ ಅಯ್ಯಂಗಾರ್ ಓವನ್ ಫ್ರೆಶ್ ಬೇಕರಿ ಮತ್ತು ಕಾಮತ್ ಹೊಸರುಚಿ ಮತದಾರರಿಗೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ.
ಲೋಕಸಭಾ ಚುನಾವಣೆ 2024: ಕೊಡಗಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಶೇಷ ಮತಗಟ್ಟೆ
ಬರ್ಗರ್ ಮೇಲೆ ರಿಯಾಯಿತಿ, ಬಿಯರ್ ಉಚಿತ
ಮಿಸ್ಟರ್ ಫಿಲ್ಲಿಸ್ ಮತದಾನದ ದಿನದಂದು ಬರ್ಗರ್ ಮತ್ತು ಮಿಲ್ಕ್‌ಶೇಕ್‌ಗಳನ್ನು ಖರೀದಿಸಲು ಶೇಕಡಾ 30ರಷ್ಟು ರಿಯಾಯಿತಿಯನ್ನು ನೀಡಿದೆ. ವಂಡರ್ ಲಾ ಹಾಲಿಡೇಸ್ ಮೂರು ದಿನಗಳ ವರೆಗೆ ಮತದಾರರಿಗೆ ಶೇಕಡಾ 15ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಡೆಕ್ ಆಫ್ ಬ್ರೂಸ್, ನಗರದ ಪಬ್, ಮತದಾನದ ಒಂದು ದಿನದ ನಂತರ ಏಪ್ರಿಲ್ 27ರಂದು ಮೊದಲ 50 ಅತಿಥಿಗಳಿಗೆ ಉಚಿತ ಬಿಯರ್‌ನ್ನು ನೀಡಲಿದೆ.
ಉಚಿತ ಆಟೋ, ಬೈಕ್ ಸವಾರಿ
ಬೆಂಗಳೂರು ಮೂಲದ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್ ರಾಪಿಡೊ, ಮತದಾನದ ದಿನದಂದು ಬೆಂಗಳೂರಿನಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ಸವಾರಿಯನ್ನು ಘೋಷಿಸಿದೆ. ECI ಬೆಂಬಲದೊಂದಿಗೆ, Rapido ಕರ್ನಾಟಕದ ಮತದಾರರಿಗೆ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಾದ್ಯಂತ ಚುನಾವಣಾ ದಿನದಂದು ಉಚಿತ ಬೈಕ್ ಟ್ಯಾಕ್ಸಿ ಸವಾರಿಗಳನ್ನು ನೀಡುತ್ತದೆ.
Lok Sabha Elections 2024: ಮೊದಲ ಹಂತದ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.