ಕೋಲಾರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸಚಿವ ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೆಟ್ ತಪ್ಪಿಸಿದ್ದ ರಮೇಶ್ ಕುಮಾರ್ ಟೀಂ,ಕಾಂಗ್ರೆಸ್ ಅಭ್ಯರ್ಥಿ ಗೌತಮ್ ರನ್ನು ಗೆಲ್ಲಿಸಿಕೊಂಡು ಬರೋದಕ್ಕೆ ಹಗಲಿರುಳು ಶ್ರಮಿಸಿದ್ರು.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಜೂ.04): ಕೋಲಾರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸಚಿವ ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೆಟ್ ತಪ್ಪಿಸಿದ್ದ ರಮೇಶ್ ಕುಮಾರ್ ಟೀಂ,ಕಾಂಗ್ರೆಸ್ ಅಭ್ಯರ್ಥಿ ಗೌತಮ್ ರನ್ನು ಗೆಲ್ಲಿಸಿಕೊಂಡು ಬರೋದಕ್ಕೆ ಹಗಲಿರುಳು ಶ್ರಮಿಸಿದ್ರು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಕೊನೆ ಕ್ಷಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಸೋಲುಂಡಿದ್ದು, ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಲ್ಲೇಶ್ ಬಾಬುಗೆ ಅವರಿಗೆ ಅದೃಷ್ಟ ಲಕ್ಷ್ಮೀ ದಕ್ಕಿದ್ದಾಳೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
undefined
ಹೌದು ಎಸ್ಸಿ ಮೀಸಲು ಕೋಲಾರ ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸತತ 28 ವರ್ಷಗಳ ಕಾಲ ಇಲ್ಲಿ ಸಂಸದರಾಗಿ,ಕೇಂದ್ರದ ಸಂಸದರು ಆಗಿ ಕೆಲಸ ಮಾಡಿದ್ದ ಈಗಿನ ರಾಜ್ಯ ಆಹಾರ ಸಚಿವ ಕೆ.ಎಚ್ ಮುನಿಯಪ್ಪ 2019 ರ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯುತು. ಕೋಲಾರ ಜಿಲ್ಲೆಯ ತಮ್ಮದೇ ಕಾಂಗ್ರೆಸ್ ಪಕ್ಷದಲ್ಲಿರುವ ಎದುರಾಳಿ ರಮೇಶ್ ಕುಮಾರ್ ಹಾಗೂ ತಂಡದವರಿಂದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಕೆ.ಎಚ್ ಮುನಿಯಪ್ಪ ಸೋಲು ಕಾಣಬೇಕಾಯ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕೆ.ಎಚ್ ಮುನಿಯಪ್ಪ ರಾಜ್ಯದ ಆಹಾರ ಸಚಿವರಾಗಿದ್ದಾರೆ.
ಮಂಡ್ಯದಲ್ಲಿ ಭರ್ಜರಿ ಗೆಲವು: ಪ್ರಮಾಣಪತ್ರ ಸ್ವೀಕರಿಸುವ ಮುನ್ನ ಜ್ಯೋತಿಷ್ಯದ ಮೊರೆ ಹೋದ ಎಚ್‌ಡಿಕೆ!
ಇನ್ನು ಮೊದಲಿನಿಂದಲೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ,ಕೆ.ಎಚ್ ಮುನಿಯಪ್ಪ ಈ ಬಾರಿ ತಮ್ಮ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೇಟ್ ಕೊಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು.ಇನ್ನೇನು ಚಿಕ್ಕಪೆದ್ದಣ್ಣಗೆ ಟಿಕೇಟ್ ಸಿಕ್ಕಿತ್ತು ಎನ್ನುವಷ್ಟರಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹಮದ್,ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಸ್ಪೀಕರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ಮುಂದಾಗುವ ರಾಜಕೀಯ ಹೈಡ್ರಾಮ ನಡೆಸಿದ್ರು.
ಒಂದು ವೇಳೆ ಕೆ.ಎಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ರೆ ನಾವು ರಾಜೀನಾಮೆ ಕೊಡುತ್ತೇವೆ, ಅವರನ್ನು ತಪ್ಪಿಸಿ ಯಾರಿಗೆ ಟಿಕೇಟ್ ಕೊಟ್ಟರು ನಾವು ಒಗ್ಗಟ್ಟಾಗಿ ಶ್ರಮಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಅಂತ ಮಾಡಿದ ಡಿಮ್ಯಾಂಡ್ ಗೆ ಒಪ್ಪಿ ಕೊನೆ ಕ್ಷಣದಲ್ಲಿ ಎರಡು ಬಣಗಳಲ್ಲಿ ಗುರುತಿಸಿಕೊಳ್ಳದ ತಟಸ್ಥ ಅಭ್ಯರ್ಥಿ ಗೌತಮ್ ರನ್ನು ಆಯ್ಕೆ ಮಾಡಿ ಬಿ.ಫಾರಂ ಕೊಟ್ಟು ಕಳುಹಿಸುತ್ತೆ.ಇನ್ನು ಅಳಿಯನಿಗೆ ಟಿಕೆಟ್ ಮಿಸ್ ಆಗಿದಕ್ಕೆ ಸಿಎಂ, ಡಿಸಿಎಂ ಅವರ ಕೋಲಾರದ ಕಾರ್ಯಕ್ರಮ ಸೇರಿದಂತೆ ಎಲ್ಲಿಯೂ ಗೌತಮ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಕೆ.ಎಚ್ ಮುನಿಯಪ್ಪ ಬಾರದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಮೂಲಕ ತಟಸ್ಥರಾಗಿದ್ದ ಪರಿಣಾಮ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೌತಮ್ ಸೋಲಿಗೆ ಕಾರಣವಾಯ್ತು ಅನ್ನೋ ಚರ್ಚೆ ಆರಂಭವಾಗಿದೆ.
ಇನ್ನು ಚುನಾವಣಾ ಗೆಲುವು ಘೋಷಣೆಗೂ ಮುನ್ನವೇ ನಗರದ ಸರ್ಕಾರಿ ಬಾಲಕರ ಕಾಲೇಜಿನ ಮತ ಎಣಿಕೆ ಕೇಂದ್ರದಿಂದ ಗೌತಮ್ ಹೊರನಡೆದು ಮಾಧ್ಯಮಗಳ ಜೊತೆಗೆ ಮಾತನಾಡಿದ ಗೌತಮ್ ನಮ್ಮಲ್ಲಿ ಎಲ್ಲೂ ಒಳಜಗಳವೆ ಇಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ.ಕಾಲಾವಕಾಶ ಕಡಿಮೆ ಇದ್ದಿದ್ದರಿಂದ ನನ್ನ ಸೋಲಿಗೆ ಕಾರಣವಾಯ್ತು ಅಂತ ಬೇಸರು ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ವಿರುದ್ಧ ಮೈತ್ರಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಟಿಕೇಟ್ ಸಿಕ್ಕಿದೆ ರೋಚಕ ವಿಚಾರ.ಕೋಲಾರ ಜಿಲ್ಲೆಯ ಬಂಗಾರಪೇಟೆ ಮೀಸಲು ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೊತ್ತಿದ್ದ ಮಲ್ಲೇಶ್ ಬಾಬು ಅವರಿಗೆ ಕೊನೆ ಕ್ಷಣದಲ್ಲಿ ಟಿಕೇಟ್ ಸಿಕ್ಕಿದೆ.
ಬಿಜೆಪಿ ಸಂಸದರಾಗಿ ಮುನಿಸ್ವಾಮಿ ಇದ್ದರು ಸಹ ನಮಗೆ ಟಿಕೇಟ್ ಬೇಕೇಬೇಕು ಎಂದು ಪಟ್ಟು ಬಿಡದ ಜೆಡಿಎಸ್ ಕೊನೆಕ್ಷಣದಲ್ಲಿ ತಮ್ಮ ಪಕ್ಷಕ್ಕೆ ಒಲಿಸಿಕೊಂಡಿತ್ತು,ಮುನಿಸ್ವಾಮಿ ಅವರನ್ನು ಸಮಾಧಾನಪಡಿಸಿ ಬಿಜೆಪಿ ನಾಯಕರು ಜೆಡಿಎಸ್ ಬಿಟ್ಟು ಕೊಟ್ಟರು.ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಜೆಡಿಎಸ್ ಪಕ್ಷಕ್ಕೆ ವೋಟ್ ಶೇರಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಿದ್ದರಿಂದ ಸುಲಭವಾಗಿ ಬಿಜೆಪಿ ಮತಗಳ ಬೆಂಬಲಿದಿಂದ ಗೆಲ್ಲುತ್ತೇವೆ ಎಂದು ಮುಳಬಾಗಿಲು ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಮೇಲೆ ಸ್ಪರ್ಧೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಡ ಹಾಕುತ್ತಾರೆ.
ಸ್ಪರ್ಧೆಗೆ ಒಪ್ಪದೆ ಇರೋದ್ರಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಲ್ಲಿ ಸೋತು ಅನುಕಂಪದಲ್ಲಿದ್ದ ಮಲ್ಲೇಶ್ ಬಾಬು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ವಿರುದ್ಧ ಬರೋಬರಿ 71 ಸಾವಿರದ 388 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.6 ಲಕ್ಷ 91 ಸಾವಿರದ 481 ಮತಗಳನ್ನು ಮಲ್ಲೇಶ್ ಬಾಬು ಪಡೆದುಕೊಂಡರೆ,6 ಲಕ್ಷದ 20 ಸಾವಿರದ 93 ಮತಗಳನ್ನು ಗೌತಮ್ ಪಡೆದುಕೊಂಡಿದ್ದಾರೆ.ಇನ್ನು ಕಾಂಗ್ರೇಸ್ ನಲ್ಲಿ ಟಿಕೆಟ್ ಹಂಟಿಕೆಗಿಂತ ಮೊದಲೇ ಕೋಲಾರದಲ್ಲಿನ ಕಾಂಗ್ರೆಸ್ ನಾಯಕರಾದ ಕೆ.ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ಒಳಜಗಳದಿಂದಾಗಿ ಈ ಬಾರಿ ಕೋಲಾರ ಕ್ಷೇತ್ರವನ್ನ ಕಾಂಗ್ರೆಸ್ ಕಳೆದುಕೊಳ್ಳುತ್ತ ಅನ್ನೋ ಚರ್ಚೆ ಜೋರಾಗಿತ್ತು,ಯಾರಿಗೆ ಟಿಕೇಟ್ ಕೊಟ್ಟರು ಒಂದು ಬಣದವರು ಕೈಕೊಡೋದು ಪಕ್ಕ ಅನ್ನೋ ಲೆಕ್ಕಾಚಾರ ಮತ್ತೊಮ್ಮೆ ನಿಜವಾದಂತೆ ಕಾಣುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಪ್ರತಿ ಕ್ಷೇತ್ರದಲ್ಲೂ ಕೆ.ಎಚ್ ಮುನಿಯಪ್ಪ ಬೆಂಬಲಿತ ತಲಾ 10 ಸಾವಿರ ಮತದಾರರು ಇದ್ದಾರೆ ಅವರೆಲ್ಲ ಚುನಾವಣೆಯಲ್ಲಿ ತಟಸ್ಥರಾಗಿದಕ್ಕೆ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಗೆಲುವಿಗೆ ದೊಡ್ಡ ಮಟ್ಟದ ಸಹಕಾರ ಆಗಿದೆ.ಇದರ ಜೊತೆ ಸೀಟು ಬಿಟ್ಟು ಕೊಟ್ಟಿದ್ದ ಬಿಜೆಪಿಯ ಮುನಿಸ್ವಾಮಿ ಎಲ್ಲಿಯೂ ವಿರೋಧ ಮಾಡದೆ ಜೆಡಿಎಸ್ ಶಾಸಕರ ಜೊತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಬಿಜೆಪಿಯ ಮತಗಳನ್ನು ಜೆಡಿಎಸ್ ಪಕ್ಷಕ್ಕೆ ಹಾಕಿಸುವ ಮೂಲಕ ಎಲ್ಲಾ ಮಾಜಿ ಹಾಗೂ ಹಾಲಿ ಜೆಡಿಎಸ್ ಬಿಜೆಪಿ ಪಕ್ಷಗಳ ಶಾಸಕರು ಕೆಲಸ ಮಾಡಿರುವ ಪರಿಣಾಮ ಮಲ್ಲೇಶ ಬಾಬು ಅವರ ಗೆಲುವಿಗೆ ದೊಡ್ಡ ಅಸ್ತ್ರ ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ನು ಚುನಾವಣಾ ಫಲಿತಾಂಶ ಹೊರ ಬರುತ್ತಿದಂತೆ ಮಲ್ಲೇಶ್ ಬಾಬು ಅವರ ಗೆಲುವನ್ನು ಪಟಾಕಿ ಸಿಡಿಸುವ ಮೂಲಕ ಎರಡು ಪಕ್ಷಗಳ ಕಾರ್ಯಕರ್ತರು ಸಂಭ್ರಮಿಸಿದರು.
ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್
ಇನ್ನು ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ನೂತನ ಸಂಸದ ಮಲ್ಲೇಶ್ ಬಾಬು ಬಿಜೆಪಿ - ಜೆಡಿಎಸ್ ಪಕ್ಷದವರು ಒಟ್ಟಾಗಿ ಕೆಲಸ ಮಾಡಿರೋದ್ರಿಂದ ಗೆಲುವು ಸಿಕ್ಕಿದೆ ಅಂತ ಸಂತಸ ವ್ಯಕ್ತಪಡಿಸಿದರು. ಒಟ್ಟಾರೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಕಾಂಗ್ರೆಸ್ ಪಕ್ಷದ ಬಣ ರಾಜಕೀಯದ ಲಾಭವನ್ನು ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಕೋಲಾರ ಕ್ಷೇತ್ರವನ್ನು ಕಳೆದ ಎರಡು ಚುನಾವಣೆಯಲ್ಲಿ ತಮ್ಮ ಬಣ ಜಗಳಗಳಿಂದ ಕಾಂಗ್ರೆಸ್ ಕಳೆದುಕೊಂಡಿರೋದಂತೂ ಸುಳ್ಳಲ್ಲ.ರಮೇಶ್ ಕುಮಾರ್ ಹಾಗೂ ಕೆ.ಎಚ್ ಮುನಿಯಪ್ಪ ಬಣದವರು ಇನ್ನಾದ್ರೂ ಒಂದಾಗ್ತಾರ ಅಥವಾ ಬಣ ಜಗಳ ಮುಂದುವರೆಸುತ್ತಾರ ಕಾದು ನೋಡಬೇಕಿದೆ.