ಕೇಂದ್ರದಲ್ಲಿ ನಮ್ಮದೇ ಸರ್ಕಾರ ಬರಲಿದೆ, ಕಾಂಗ್ರೆಸ್ ಯತ್ನ ಫಲಿಸಲ್ಲ: ನೂತನ ಸಂಸದ ಕಾರಜೋಳ

By Girish Goudar  |  First Published Jun 4, 2024, 4:59 PM IST

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ನೂತನ ಸಂಸದ ಗೋವಿಂದ ಕಾರಜೋಳ ಅವರು, ಮಂತ್ರಿ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದ ನೂತನ ಸಂಸದ ಗೋವಿಂದ ಕಾರಜೋಳ


ಚಿತ್ರದುರ್ಗ(ಜೂ.4):  ಈ ಗೆಲುವಿನ ಶ್ರೇಯಸ್ಸು ಮೋದಿಜಿ ಹಾಗೂ ನನ್ನ ಮತದಾರರಿಗೆ ಅರ್ಪಿಸುತ್ತೇನೆ.  ಹೊರಗಿನವರು ಎಂಬ ಹಣೆಪಟ್ಟಿ ಕಟ್ಟಲು ಕೆಲವರು ಪ್ರಯತ್ನಸಿದ್ರು. ಅದನ್ನು ಅಳಿಸಿ ಜನರ ವಿಶ್ವಾಸ ಗಳಿಸಲು ನಮ್ಮ ನಾಯಕರು ಪ್ರಯತ್ನ ಹೆಚ್ಚಿದೆ. ಕೆಲವರು ಅವರ ಸ್ವಾರ್ಥಕ್ಕೋಸ್ಕರ ಟಿಕೆಟ್ ಘೋಷಣೆ ಆದಾಗ ಗಲಾಟೆ ಮಾಡಿದ್ರು. ಅಂತವರಿಗೆ ಈ ಫಲಿತಾಂಶವೇ ಉತ್ತರ ಎಂದು ನೂತನ ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ನೂತನ ಸಂಸದ ಗೋವಿಂದ ಕಾರಜೋಳ ಅವರು, ಮಂತ್ರಿ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್

ಏನೇ ಜವಾಬ್ದಾರಿ ಕೊಟ್ಟರೂ ಖಂಡತವಾಗಿ ನಿಭಾಯಿಸುತ್ತೇನೆ. ಯಾವ ಯಾವುದೋ ಕಾರಣಕ್ಕೆ ನಮ್ಮ ಲೆಕ್ಕಾಚಾರ ಫಲಿತಾಂಶ ಕಡಿಮೆ ಆಗಿದೆ/ ಆ ಬಗ್ಗೆ ಇವಾಗ ನಾವು ಲೆಕ್ಕ ಹಾಕುವುದು ಬೇಡ. ಕಾಂಗ್ರೆಸ್ ನವರು ಯಾವಾಗಲೂ ಜನರಿಗೆ ಮೋಸ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಬರಲಿದೆ. ಹಿಂಬಾಗಿಲಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಫಲಿಸಲ್ಲ. ಈ ಕ್ಷೇತ್ರದ ನೀರಾವರಿಗೆ ನನ್ನ ಮೊದಲ ಆದ್ಯತೆಯಾಗಿದೆ. . ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ನಾನು ಪಣ ತೊಡುತ್ತೇನೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. 

click me!