ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ನಗರಕ್ಕೆ ಆಗಮಿಸಲಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸಲಿದ್ದಾರೆ.
ಬೆಂಗಳೂರು (ಏ.23): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ನಗರಕ್ಕೆ ಆಗಮಿಸಲಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸಲಿದ್ದಾರೆ. ವಿಶೇಷ ವಿಮಾನದಲ್ಲಿ ರಾತ್ರಿ 7.35ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಅಲ್ಲಿಂದ ರಸ್ತೆ ಮಾರ್ಗವಾಗಿ ರೋಡ್ ಶೋಗೆ ತೆರಳಲಿದ್ದಾರೆ. 7.50ಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿ ಸರ್ಕಲ್ ಬಳಿಯ ವಿವೇಕಾನಂದ ವೃತ್ತದಿಂದ ಆರಂಭವಾಗಲಿರುವ ರೋಡ್ ಶೋ 8.45ಕ್ಕೆ ಸೇಂಟ್ ಫ್ರಾನ್ಸಿಸ್ ಸ್ಕೂಲ್ ಬಳಿ ಅಂತ್ಯವಾಗಲಿದೆ. ಈ ರೋಡ್ ಶೋ ಮುಗಿದ ಬಳಿಕ ಅಮಿತ್ ಶಾ ಅವರು ಕೇರಳ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಚುನಾವಣಾ ಬಾಂಡ್ ಪಡೆದದ್ದು ಸುಲಿಗೆ ಅಲ್ಲವೇ?: ಚುನಾವಣಾ ಬಾಂಡ್ ವಿಷಯದಲ್ಲಿ ಬಿಜೆಪಿಯವರು ಸುಲಿಗೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುವುದಾದರೆ ಅವರ ಕಾಂಗ್ರೆಸ್ ಪಕ್ಷವೂ ಸುಲಿಗೆ ಮಾಡಿ ಚುನಾವಣಾ ಬಾಂಡ್ ಮೂಲಕ ಹಣ ಪಡೆದಿರಬೇಕಲ್ಲವೇ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ‘ಕಾಂಗ್ರೆಸ್ ನಾಯಕರು ಬಿಜೆಪಿಯು ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿ ಹಣ ಪಡೆದಿದೆ ಎಂದು ಆರೋಪಿಸಿದ್ದಾರೆ.
ಪಿಕ್ ಪಾಕೆಟ್ ಕಲೆ ಕಾಂಗ್ರೆಸ್‌ಗೆ ಮಾತ್ರ ಗೊತ್ತು: ಸಿ.ಟಿ.ರವಿ ವ್ಯಂಗ್ಯ
ಆದರೆ ಅವರು ನಮಗಿಂತ ಕಡಿಮೆ ಸಂಸದರನ್ನೂ ಹೊಂದಿದ್ದರೂ ಪ್ರಮಾಣದಲ್ಲಿ ನಮಗಿಂತ ಹೆಚ್ಚಿನ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದಿದ್ದಾರೆ. ಹಾಗಾದರೆ ಅವರು ಮಾಡಿರುವುದೂ ಸುಲಿಗೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಎಸ್‌ಬಿಐ ಸಲ್ಲಿಸಿರುವ ಮಾಹಿತಿಯಂತೆ ಬಿಜೆಪಿಯು 303 ಸಂಸದರಿದ್ದಾಗ್ಯೂ 6,986.5 ಕೋಟಿ ರು. ಚುನಾವಣಾ ಬಾಂಡ್ ದೇಣಿಗೆ ಪಡೆದಿದೆ. ಆದರೆ ಕಾಂಗ್ರೆಸ್‌ನಲ್ಲಿ ಕೇವಲ 44 ಸಂಸದರಿದ್ದಾಗ್ಯೂ ಬರೋಬ್ಬರಿ 1334 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ದೇಣಿಗೆಯನ್ನು ಪಡೆದಿದೆ.