
ನವದೆಹಲಿ: ಚುನಾವಣಾ ಬಾಂಡ್ ರಹಸ್ಯ ಬಯಲಾಗುತ್ತಿದ್ದಂತೆಯೇ ಕೋವಿಡ್ ವೇಳೆ ಪ್ರಧಾನಿ ನರೇಂದ್ರ ಮೋದಿ ಸ್ಥಾಪಿಸಿದ್ದ ಪಿಎಂ ಕೇರ್ಸ್ ಫಂಡ್ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿದೆ. ಈ ಫಂಡ್ ಅನ್ನು ಸ್ಥಾಪಿಸಿದ್ದು ಏಕೆ? ಇದಕ್ಕೆ ದೇಣಿಗೆದಾರರು ಯಾರು? ಈ ಫಂಡ್ ಎಲ್ಲಿ ಬಳಕೆ ಆಗಿದೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕೇಳಿದ್ದಾರೆ ಹಾಗೂ ಫಂಡ್‌ನ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಎಲೆಕ್ಟೋರಲ್ ಬಾಂಡ್ ರೀತಿ ಇದೂ ಸಂಭಾವ್ಯ ಹಗರಣ ಆಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ರಮೇಶ್, ‘ಫಂಡ್ ದೇಣಿಗೆದಾರರ ಹೆಸರನ್ನು ಈವರೆಗೂ ಬಹಿರಂಗಪಡಿಸಿಲ್ಲ. ಮಾಧ್ಯಮ ವರದಿಗಳು ಹೇಳುವಂತೆ 12 ಸಾವಿರ ಕೋಟಿ ರು. ಫಂಡ್ ಇದಕ್ಕೆ ಹರಿದು ಬಂದಿದೆಯಂತೆ. ದೊಡ್ಡ ಉದ್ದಿಮೆದಾರರೂ ಫಂಡ್ ನೀಡಿದ್ದಾರಂತೆ. ರಿಲಯನ್ಸ್ 500 ಕೋಟಿ ರು., ಅದಾನಿ 100 ಕೋಟಿ ರು., ಪೇಟಿಎಂ 500 ಕೋಟಿ ರು. ಹಾಗೂ ಜಿಂದಾಲ್ ಸ್ಟೀಲ್ಸ್ 100 ಕೋಟಿ ರು. ನೀಡುವುದಾಗಿ ಈ ಹಿಂದೆ ಹೇಳಿದ್ದವು ಎಂದಿದ್ದಾರೆ.
ಅಮೃತ್ ಕಾಲ ವರ್ಸಸ್ ಅನ್ಯಾಯ ಕಾಲ: 2024ರ ಲೋಕಸಭಾ ಚುನಾವಣೆಯ ಪ್ರಮುಖ ಚುನಾವಣಾ ಅಜೆಂಡಾಗಳಿವು
ಆದರೆ ಪಿಎಂ ಕೇರ್ಸ್ ಆರ್‌ಟಿಐ ಹಾಗೂ ಸಿಎಜಿ ವ್ಯಾಪ್ತಿಯಿಂದ ಹೊರಗಿದೆ. ಏಕೆಂದರೆ ಇದಕ್ಕೆ ಸರ್ಕಾರದ ಹಣ ಹರಿದುಬಂದಿಲ್ಲವಂತೆ. ಆದರೆ ಸರ್ಕಾರಿ ಸ್ವಾಮ್ಯದ 38 ಕಂಪನಿಗಳು ಇದಕ್ಕೆ ಹಣ ನೀಡಿವೆ. ಇದು ಅಂದಾಜು 2105 ಕೋಟಿ ರು. ಇದೆ. ಪಿಎಸ್‌ಯು ನೌಕರರು 150 ಕೋಟಿ ರು. ನೀಡಿದ್ದಾರೆ. ಚೀನಾದ ಟಿಕ್‌ಟಾಕ್ ಕೂಡ 30 ಕೋಟಿ. ಹುವೈ 7 ಕೋಟಿ, ಒನ್‌ಪ್ಲಸ್ 1 ಕೋಟಿ, ಶವೋಮಿ 10 ಕೋಟಿ ರು. ನೀಡಿವೆಯಂತೆ. ಆದರೆ ಒಟ್ಟು ಹಣ ಎಷ್ಟಿದೆ? ಎಷ್ಟು ಖರ್ಚಾಗಿದೆ ಎಂಬ ಯಾವ ಮಾಹಿತಿಯೂ ಇಲ್ಲ ಎಂದು ಕಿಡಿಕಾರಿದ್ದಾರೆ.
ಇಂದೇ ಚುನಾವಣಾ ಬಾಂಡ್ ವಿವರ ಸಲ್ಲಿಸಿ: ಎಸ್‌ಬಿಐಗೆ ಸುಪ್ರೀಂ ತಾಕೀತು
2024ರ ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್ನಲ್ಲಿ ಮೊದಲ ಹಂತದಲ್ಲಿ ಮತದಾನವಾಗಲಿದೆ. 2ನೇ ಹಂತದ ಚುನಾವಣೆ ಮೇ 7 ರಂದು ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು ಬೀದರ್ ಕ್ಷೇತ್ರಗಳಲ್ಲಿ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.