ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವ ಯುವ ಪಡೆಗೆ ಕಪಾಳ ಮೋಕ್ಷ ಮಾಡುವ ಶಕ್ತಿ ತಮ್ಮ ಕೈ ಗೆ ಇದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿ (ಮಾ.25): ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವ ಯುವ ಪಡೆಗೆ ಕಪಾಳ ಮೋಕ್ಷ ಮಾಡುವ ಶಕ್ತಿ ತಮ್ಮ ಕೈ ಗೆ ಇದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಕಿಡಿ ಕಾರಿದ್ದಾರೆ.
'ಮೋದಿ ಮೋದಿ ಎಂದು ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ' ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು,
ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳ ಆರಕ್ಷಕರು. ಅದಕ್ಕಾಗಿ ಜನರೇ ಮೋದಿಯವರಿಗೆ ಜೈಕಾರ ಕೂಗುತ್ತಿದ್ದಾರೆ. ಹೀಗಿರುವಾಗ ಅವರೆಲ್ಲರ ಕಪಾಳಕ್ಕೆ ಹೊಡೆಯುವ ಶಕ್ತಿ ನಿಮ್ಮ 'ಕೈ'ಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೋದಿಯವರಿಗೆ ಜೈಕಾರ ಹಾಕುವವರ ಕಪಾಳಕ್ಕೆ ಹೊಡೆಯಬೇಕೆ? ಯಾವ ಕಾರಣಕ್ಕೆ? ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿಯೇ? ಅಥವಾ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಕ್ಕಾಗಿಯೇ? ಎಂದು ಸಚಿವ ಶಿವರಾಜ ತಂಗಡಿಗಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದ ಪ್ರಧಾನ ಮಂತ್ರಿಯನ್ನು ಹೇಗೆ ಗೌರವಿಸಬೇಕು ಎಂಬ ಕಿಂಚಿತ್ತು ಆಲೋಚನೆ, ಸೌಜನ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ತೀರಾ ಉಡಾಫೇ ಮಾತನಾಡುತ್ತಾರೆ. ಇವರ ಅಸಹನೀಯ ಪದ ಬಳಕೆಗೆ ಯುವ ಪಡೆಯೇ ಉತ್ತರ ಕೊಡುವ ಕಾಲ ದೂರವಿಲ್ಲ ಎಂದು ಪ್ರಹ್ಲಾದ ಜೋಶಿ ಎಚ್ಚರಿಸಿದ್ದಾರೆ.
'ನನಗೆ ಕ್ಷೇತ್ರ ಪರಿಚಯ ಇಲ್ಲದಿರಬಹುದು, ಆದರೆ ಜನ ಪರಿಚಯ ಇದ್ದಾರೆ': ಕಾಂಗ್ರೆಸ್ ಟೀಕೆಗೆ ಡಾ ಮಂಜುನಾಥ ತಿರುಗೇಟು
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಿವರಾಜ್ ತಂಗಡಗಿ ಓರ್ವ ಮಂತ್ರಿಯಾಗಿದ್ದುಕೊಂಡು ಪ್ರಧಾನಿ ಬಗ್ಗೆ, ದೇಶದ ಭವಿಷ್ಯದ ಆಸ್ತಿಯಾಗಿರುವ ಯುವ ಪಡೆ ಬಗ್ಗೆ ಹೀಗೆ ಕಪಾಳ ಮೋಕ್ಷದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.