ರಾಘವೇಂದ್ರಗೆ ಕಾರ್ಯಕರ್ತರಿಲ್ಲ, ನನ್ನನ್ನು ಗೆಲ್ಲಿಸಬೇಕೆಂದು ಜನರೇ ನಿರ್ಧರಿಸಿದ್ದಾರೆ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Apr 22, 2024, 11:18 AM IST

ಕಾಂಗ್ರೆಸ್ ಹಾಗೂ ಬಿಜೆಪಿ ಸೋಲಿಸಬೇಕು. ಹಿಂದೂ ಪರ ಹೋರಾಟ ಮಾಡುತ್ತಿರುವ ಈಶ್ವರಪ್ಪ ಗೆಲ್ಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ.


 ಶಿವಮೊಗ್ಗ (ಏ.22): ಕಾಂಗ್ರೆಸ್ ಹಾಗೂ ಬಿಜೆಪಿ ಸೋಲಿಸಬೇಕು. ಹಿಂದೂ ಪರ ಹೋರಾಟ ಮಾಡುತ್ತಿರುವ ಈಶ್ವರಪ್ಪ ಗೆಲ್ಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಪ್ರಭು ಶ್ರೀರಾಮನ ರಕ್ಷಣೆಯಲ್ಲಿ ನಾನು ಎಂಪಿ ಆಗುತ್ತೇನೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ,ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಲ್ಲ, ಬಿಜೆಪಿಯಲ್ಲಿ ಇದ್ದವರು ನನ್ನ ಜೊತೆ ಬಂದಿದ್ದಾರೆ. ಕಾಂಗ್ರೆಸ್ ಹಾಗೂ ರಾಘವೇಂದ್ರ ಅವರಿಗೆ ಕಾರ್ಯಕರ್ತರಿಲ್ಲ. ಇಡೀ ಜಿಲ್ಲೆಯ ಜನ ನನ್ನ ಪರವಾಗಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಮಹಾ ಸಂಪರ್ಕ ಅಭಿಯಾನ ಆರಂಭಿಸಿದ್ದೇವೆ. ನೂರಾರು ಕಾರ್ಯಕರ್ತರು ಮನೆ, ಮನೆಗೆ ಹೋಗಿ ಮತಯಾಚಿಸುತ್ತಿದ್ದಾರೆ. ನಾಡಿದ್ದು ಚಿಹ್ನೆ ಸಿಗುತ್ತೆ ನಂತರ ಮತ್ತೆ ಮನೆಗಳಿಗೆ ಪ್ರಚಾರ ಮಾಡ್ತಾರೆ. ನನ್ನನ್ನು ಗೆಲ್ಲಿಸಲು ಎಲ್ಲಾ ವರ್ಗದ ಜನ ತಿರ್ಮಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ. ಗೆದ್ದು ಮೋದಿನಾ ಪ್ರಧಾನಿ ಮಾಡುತ್ತೇನೆ ಎಂದರು.

Tap to resize

Latest Videos

undefined

ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಭೇಟಿ ಮಾಡಿದ ಉಮೇಶ್ ಜಾಧವ

ಮೊದಲು ಈಶ್ವರಪ್ಪ ಸ್ಪರ್ಧೆ ಮಾಡಲ್ಲ ಎಂದರು, ಅಮೇಲೆ ನಾಮಪತ್ರ ಸಲ್ಲಿಸಲ್ಲ ಅಂತ ಅಪಪ್ರಚಾರ ಮಾಡಿದರು. ಈಗ ನಾಮಪತ್ರ ವಾಪಸ್ಸು ಪಡೆಯುತ್ತಾರೆ ಅಂತ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯಲ್ಲ ಎಂದು ಹೇಳಿದರು,

ನೇಹಾ ಹತ್ಯೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಸಲ್ಮಾನ್ ಗೂಂಡ ಹಿಂದೂ ಯುವತಿಯನ್ನ ಹತ್ಯೆ ಮಾಡಿದ್ದಾನೆ. ರಾಜ್ಯ ಸರ್ಕಾರ ಹಿಂದೂಗಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮುಸಲ್ಮಾನರನ್ನು ಮಾತ್ರ ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ಕೊಲೆ ಮಾಡಿದ ಗೂಂಡಾನನ್ನು ಗುಂಡು ಹೊಡೆದು ಸಾಯಿಸಬೇಕಿತ್ತು. ಅದನ್ನು ಬಿಟ್ಟು ವೈಯಕ್ತಿಕ ದ್ವೇಷ ಅನ್ನುತ್ತಿದ್ದಾರೆ. ಇದು ಇಡೀ ದೇಶದ ರಾಜ್ಯದ ಹಿಂದುಗಳಿಗೆ ಮಾಡುತ್ತಿರುವ ಅಪಮಾನ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಇದನ್ನು ಅನುಭವಿಸುತ್ತಾರೆ ಎಂದು ತಿರಗೇಟು ನೀಡಿದರು.

ಮೋದಿ ದೇಶಕ್ಕೆ ಹಿಡಿದಿರುವ ಶನಿ; ಜೂ.4ರ ಬಳಿಕ ಬಿಟ್ಟು ಹೋಗಲಿದೆ; ಪ್ರಧಾನಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ!

ಸುರ್ಜೇವಾಲ ಕೊಲೆ ಮಾಡಿದವನನ್ನು ಅರೆಸ್ಟ್ ಮಾಡಿದ್ದೇವೆ ಎಂದಿದ್ದಾರೆ. ಅವರ ಮಗಳಿಗೆ ಹೀಗಾಗಿದ್ದರೆ ಇದೇ ರೀತಿ ಹೇಳುತ್ತಿದ್ರಾ? ಬೆಂಗಳೂರು ಕೊಲೆಗಡುಕರ ತಾಣವಾಗಿದೆ. ಹಿಂದುಗಳು ಜಾಗೃತರಾಗುತ್ತಿದ್ದಾರೆ. ಕಾಂಗ್ರೆಸ್‌ನನ್ನು ದ್ವಂಸ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇಲ್ಲ. ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ ಸತ್ತು ಹೋಗಿದೆಯೋ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನವರಿಗೆ ಚೊಂಬೇ ಗತಿ!: ಕಾಂಗ್ರೆಸ್ ಚೊಂಬು ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೋದಿಗೆ ಚೊಂಬು ಕೊಡುತ್ತಿರೋದು ಅಲ್ಲ ಇದು. ಕಾಂಗ್ರೆಸ್ ನವರು ಚೊಂಬು ಹಿಡಿದು ಕೊಂಡು ಹೊರಟಿದ್ದಾರೆ. ಕಾಂಗ್ರೆಸ್‌ನವರಿಗೆ ಬೇರೆ ಗತಿ ಇಲ್ಲ. ಅವರೇ ಚೊಂಬೇ ಪೈನಲ್. ಅವರಿಗೆ ಜೂನ್ 4ರಂದು ಇಡೀ ದೇಶದಲ್ಲಿ ಕಾಂಗ್ರೆಸ್ ಕೈಗೆ ಚೊಂಬು ಸಿಗುತ್ತೆ ಎಂದು ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

click me!