Lok Sabha Election 2024: ಶಿವಮೊಗ್ಗದಲ್ಲಿ ಸ್ವತಂತ್ರ ಸ್ಪರ್ಧೆ ಖಚಿತ: ಕೆ.ಎಸ್.ಈಶ್ವರಪ್ಪ

By Govindaraj S  |  First Published Mar 18, 2024, 5:43 AM IST

ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. 


ಶಿವಮೊಗ್ಗ (ಮಾ.18): ಪುತ್ರ ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್‌ವಾಲ್‌ ಹಾಗೂ ರಾಜ್ಯ ನಾಯಕರು ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ, ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್‌ ತೆರಳಿದರು.

ಭಾನುವಾರ ಬೆಳಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ತು ಸದಸ್ಯ ರವಿಕುಮಾರ್, ಡಿ.ಎಸ್.ಅರಣ್ ಹಾಗೂ ಇತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ಮನೆಗೆ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸೋಮವಾರ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಆದರೆ, ತಾವು ಬಂಡಾಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಖಡಕ್‌ ಸಂದೇಶ ರವಾನಿಸಿದರು.

Tap to resize

Latest Videos

undefined

ರಾಜ್ಯ ನಾಯಕರ ಮಾತುಕತೆ ವಿಫಲವಾದ ಬಳಿಕ, ಮಧ್ಯಾಹ್ನ ಸ್ವತಃ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್‌ವಾಲ್‌ ಅವರು ಈಶ್ವರಪ್ಪ ಮನೆಗೆ ಭೇಟಿ ನೀಡಿದರು. ಆದರೆ, ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತುಕತೆಯ ಮಧ್ಯದಲ್ಲಿಯೇ ಈಶ್ವರಪ್ಪ ಸಭೆಯಿಂದ ಹೊರಹೋದ ಕಾರಣ ಸಂಧಾನ ಫಲಪ್ರದವಾಗಲಿಲ್ಲ. ಬಳಿಕ ಮಧ್ಯಾಹ್ನ 1.30 ರವರೆಗೆ ಈಶ್ವರಪ್ಪ ಅವರಿಗಾಗಿ ಕಾದು ಕುಳಿತ ಕೇಂದ್ರ ನಾಯಕರ ನಿಯೋಗ, ಬಳಿಕ ಮನೆಯಿಂದ ವಾಪಸ್ಸಾಯಿತು.

ಕಾಂಗ್ರೆಸ್‌ ಸರ್ಕಾರದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಪ್ರಲ್ಹಾದ್ ಜೋಶಿ

ಈಶ್ವರಪ್ಪ ಮನೆಗೆ ಆನಂದ ಗುರೂಜಿ ಭೇಟಿ: ಈ ಮಧ್ಯೆ, ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿದ ಆಧ್ಯಾತ್ಮ ಚಿಂತಕ ಆನಂದ ಗುರೂಜಿ, ಈಶ್ವರಪ್ಪ ಜೊತೆ ಮಾತುಕತೆ ನಡೆಸಿದರು. ಅವರ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿ, ಶುಭ ಕೋರಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಈಶ್ವರಪ್ಪ ಅವರು ಪ್ರಖರ ಹಿಂದುತ್ವವಾದಿ. ಇಂತವರ ನಾಯಕತ್ವದ ಅಗತ್ಯವಿದೆ. ಅವರಿಗೆ ಎಲ್ಲ ಮಠಾಧೀಶರು ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.

click me!