ಸಂವಿಧಾನ ಬದಲಾವಣೆ ಹೇಳಿಕೆ; ಅನಂತಕುಮಾರ ಹೆಗ್ಡೆಗೆ ಟಿಕೆಟ್ ನೀಡಬೇಡಿ; ಛಲವಾದಿ ನಾರಾಯಣಸ್ವಾಮಿ ಆಗ್ರಹ

By Ravi Janekal  |  First Published Mar 16, 2024, 3:49 PM IST

ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತಾಡುವ ಸಂಸದ ಅನಂತಕುಮಾರ ಹೆಗ್ಡೆಗೆ ಲೋಕಸಭಾ  ಟಿಕೆಟ್ ನೀಡಬಾರದು. ಬದಲಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.


ವಿಜಯಪುರ (ಮಾ.16): ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಇದರ ಬಗ್ಗೆ ಯಾವುದೇ ಸಂಘಟನೆಗಳು ಮಾತನಾಡುತ್ತಿಲ್ಲ. ಎಲ್ಲದಕ್ಕೂ ಹೋರಾಟ ಮಾಡುವ ಸಂಘಟನೆಗಳು ಈ ವಿಚಾರಕ್ಕೆ ಯಾಕೆ ಸುಮ್ಮನಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಏನೇ ನಡೆದರೂ ಹೋರಾಟಕ್ಕಿಳಿಯುವ ಸಂಘಟನೆಗಳು ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗಪಡಿಸಿಕೊಂಡರು ಯಾವುದೇ ಹೋರಾಟ ಬಿಡಿ ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಕೂಡ ಮಾಡುತ್ತಿಲ್ಲ. ದಲಿತ ಸಂಘಟನೆಗಳು ಎಲ್ಲಿವೆ ಹುಡುಕಿಕೊಡಿ ಎಂದರು.

Tap to resize

Latest Videos

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ: ಆರ್‌ ಅಶೋಕ್ ವಾಗ್ದಾಳಿ

ಇನ್ನು ಸಂವಿಧಾನ ಬದಲಾವಣೆ ಎಂಬ ಅನಂತಕುಮಾರ ಹೆಗ್ಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ನಾರಾಯಣಸ್ವಾಮಿ, ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತಾಡುವ ಇಂಥವರಿಗೆ ಟಿಕೆಟ್ ನೀಡಬಾರದು. ಬದಲಾಗಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರಲ್ಲದೇ, ಸಂವಿಧಾನದ ವಿಚಾರದಲ್ಲಿ ನಮ್ಮದು ಯಾರ ಜೊತೆಗೂ ಹೊಂದಾಣಿಕೆ ಇಲ್ಲ. ನಮ್ಮ ಪಕ್ಷವೇ ಇರಲಿ, ಬೇರೆ ಪಕ್ಷವೇ ಇರಲಿ, ಸಂವಿಧಾನದ ವಿಚಾರದಲ್ಲಿ ನಮ್ಮದು ಹೊಂದಾಣಿಕೆ ಇಲ್ಲ ಎಂದರು.

ಸಂವಿಧಾನ ತಿದ್ದುಪಡಿ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂಬುದಕ್ಕೆ ನನ್ನ ಆಕ್ಷೇಪವಿದೆ. ಸಂವಿಧಾನ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿ ಸಂಸದ ಅನಂತಕುಮಾರ ಹೆಗ್ಡೆ ಸಚಿವ ಸ್ಥಾನ ಕಳೆದುಕೊಂಡರು. ನಾವೂ ಹಿಂದೆಯೂ ಅವರ ಹೇಳಿಕೆಗೆ ವಿರೋಧಿಸಿ ಕೇಂದ್ರ ನಾಯಕರಿಗೆ ದೂರು ನೀಡಿದ್ದೆವು ಎಂದರು.

ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಈಶ್ವರಪ್ಪ ಬಂಡಾಯ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಚೆಲುವಾದಿ ನಾರಾಯಣಸ್ವಾಮಿ vs ಮಹಾದೇವಪ್ಪ. 

ಮಹಾದೇವಪ್ಪನವರಿಗೆ ಹಾಗೂ ಸಿದ್ದರಾಮಯ್ಯನವರಿಗೆ ಗೆಳೆತನ ಕೆಟ್ಟು ಹೋಗಿದೆ. ಮತ ನಮ್ಮದು ನಾಯಕತ್ವ ಬೇರೆಯವರದ್ದು ಎಂದು ಹೇಳುತ್ತಿದ್ದಾರೆ. ನಾನು ಕಾಂಗ್ರೆಸ್ ನಲ್ಲಿದ್ದಾಗ ಎರಡೂವರೇ ವರ್ಷ ದಲಿತರಿಗೆ ಬಿಟ್ಟುಕೊಡಿ ಎಂದು ಹೇಳಿದ್ದೆ. ಆಗ ಇದೇ ಮಹಾದೇವಪ್ಪ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಹೇಳಿದ್ದರು. ಅವತ್ತು ಮಾತಾಡೋಕೆ ಏನಾಗಿತ್ತು ಕಡಬು ತಿಂತಾ ಇದ್ದೀರಾ. ದಲಿತರಿಗಿಂತ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಮಾಡಿದ್ದು ಒಳ್ಳೆಯದು. ಅವರಿಗಿಂತ ದಲಿತ ನಾಯಕ ಯಾರೂ ಇಲ್ಲ ಎಂದು ಹೇಳಿದ್ದೀರಿ. ನಿಮಗೆ ಇವತ್ತು ದಲಿತರು ಕಾಣ್ತಿದ್ದಾರಾ? 25 ಸಾವಿರ ಕೋಟಿ ರೂಪಾಯಿ ದಲಿತರಿಗೆ ಮೀಸಲಿಟ್ಟ ಹಣ ನಿಮ್ಮನ್ನ ಮುಂದೆ ಇಟ್ಟುಕೊಂಡು ಲೂಟಿ ಮಾಡಿದಾರೆ. ಅಂಬೇಡ್ಕರ್ ರಕ್ತ ಮಹದೇವಪ್ಪನವರಲ್ಲಿ ಹರೀತಾ ಇದ್ರೆ ಮೊದಲು ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಸವಾಲು ಹಾಕಿದರು.

click me!