ಲೋಕಸಭಾ ಚುನಾವಣೆಗೆ ಬಿಜೆಪಿ ಮೂರನೇ ಲಿಸ್ಟ್ ನಾಳೆ ಘೋಷಣೆ ಆಗಬಹುದು. ನಾಳೆ ಘೋಷಣೆಯಾಗಲಿರುವ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಹುಬ್ಬಳ್ಳಿ (ಮಾ.16): ಲೋಕಸಭಾ ಚುನಾವಣೆಗೆ ಬಿಜೆಪಿ ಮೂರನೇ ಲಿಸ್ಟ್ ನಾಳೆ ಘೋಷಣೆ ಆಗಬಹುದು. ನಾಳೆ ಘೋಷಣೆಯಾಗಲಿರುವ ಪಟ್ಟಿಯಲ್ಲಿ ನನ್ನ ಹೆಸರು ಇರಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರ ಸಂಬಂಧ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ನಾನು ಸ್ಪರ್ಧೆ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ. ಈಗಾಗಲೇ ನಾನು ಪ್ರಭಾಕರ ಕೋರೆ ಅವರ ಜೊತೆ ಮಾತಾಡಿದ್ದೇನೆ ಎಂದರು.
ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಈಶ್ವರಪ್ಪ ಬಂಡಾಯ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?
ಇನ್ನು ಪ್ರಭಾಕರ ಕೋರೆ ಅವರ ಮನೆಯಲ್ಲಿ ಮೀಟಿಂಗ್ ಮಾಡಿರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಶೆಟ್ಟರ್, ಅವರು ಮನೆಗೆ ಬಂದ್ರೆ ಹೇಗೆ ಬೇಡಾ ಅನ್ನೋಕೆ ಆಗತ್ತಾ ಅಂತಾ ಹೇಳಿದರು. ಪ್ರಭಾಕರ ಕೋರೆ ಅವರು ನೇರವಾಗಿ ಎಲ್ಲೂ ಮಾತಾಡಿಲ್ಲ.ಅಲ್ಲಿ ಏಳೆಂಟು ಜನ ಹೋಗಿದ್ದಾರೆ. 17 ಲಕ್ಷ ಮತದಾರರಿದ್ದಾರೆ. ನಾನು ಮೂರು ದಿನಗಳಿಂದ ಎಲ್ಲರ ಜೊತೆ ಮಾತಾಡಿದ್ದೇನೆ. ಹಿರಿಯರು, ಕಿರಿಯರು,ರಾಜಕೀಯ ಹೊರತುಪಡಿಸಿ ನಾಯಕರ ಜೊತೆ ಮಾತಾಡಿದ್ದೇನೆ. ಬೆಳಗಾವಿ ನಮಗೆ ಮೊದಲಿನಿಂದಲೂ ಟಚ್ ಇದೆ. ವಿರೋಧ ಪಕ್ಷದ ನಾಯಕನಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದ್ದೇನೆ. ಯಾವ ಭಿನ್ನಮತ ಇಲ್ಲ ಏನಿಲ್ಲ. ಯಾರೂ ನೇರವಾಗಿ ಮಾತಾಡಿಲ್ಲ. ಯಾರಾದರೂ ನೇರವಾಗಿ ಮಾತಾಡಿದ್ರೆ ನಾನು ಅದಕ್ಕೆ ಪ್ರತಿಕ್ರಿಯಿಸಬಹುದು. ಆದರೆ ಯಾರೂ ಮಾತಾಡಿಲ್ಲ ಎಂದರು.
ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ: ರಮೇಶ್ ಜಾರಕಿಹೊಳಿ