Loksabha Elections 2024: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹೆಚ್ಚು ಸ್ಥಾನ: ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ

Published : Mar 16, 2024, 01:59 PM IST
Loksabha Elections 2024: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಹೆಚ್ಚು ಸ್ಥಾನ: ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ

ಸಾರಾಂಶ

ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 23 ರಿಂದ 24ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ದೇಶವನ್ನು ಮುನ್ನೆಡಸಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. 

ಬೀರೂರು (ಮಾ.16): ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 23 ರಿಂದ 24ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ದೇಶವನ್ನು ಮುನ್ನೆಡಸಲಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ಬೀರೂರಿನ ಮಾಜಿ ಸಚಿವ ದಿ. ಕೆ.ಎಸ್.ಮಲ್ಲಿಕಾರ್ಜುನ ಪುತ್ರ ಕೆ.ಎಂ.ವಿನಾಯಕ್ ಮನೆಗೆ ಭೇಟಿ ನೀಡಿ ಸುದ್ದಿ ಗಾರರೊಂದಿಗೆ ಮಾತನಾಡಿದರು. ಮೈತ್ರಿ ಸೀಟು ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಒಂದು ಸ್ಥಾನ ಸಿಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕರ್ನಾಟಕದಲ್ಲಿ ಕಾರ್ಯಕರ್ತರಿದ್ದಾರೆ. 

ಆದರೆ ನಾಯಕರ ಕೊರತೆ ಇದೆ. ಮೈಸೂರು ಪ್ರಾಂತ್ಯದಲ್ಲಿ ನಾಯಕರೊಂದಿಗೆ ಕಾರ್ಯಕರ್ತರ ಬಲವೂ ಇದೆ. ಮೈತ್ರಿಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಮುಖ್ಯ. ಹೀಗಾಗಿ ಉತ್ತರ ಕರ್ನಾಟಕ ಅಥವಾ ಇನ್ನಿತರ ಭಾಗ ಎಂಬ ತಾರತಮ್ಯವಿಲ್ಲ ಎಂದರು. ರಾಜ್ಯದಲ್ಲಿ ಜೆಡಿಎಸ್ ಗೆ 3 ಸ್ಥಾನ ದೊರಕಿದ್ದು ಅಮಿತ್ ಷಾ ಹಾಗೂ ಮೋದಿಯವರ ಒತ್ತಾಸೆ ಮೇರೆಗೆ ಅಳಿಯ ಡಾ. ಮಂಜುನಾಥ್ ರಾಜ್ಯದ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಸೇವೆ ಗಮನಿಸಿ ಅವರ ಸೇವೆ ದೇಶಕ್ಕೆ ಬೇಕೆಂಬ ಆಶಯದಿಂದ ಅವರಿಗೆ ಮನಸ್ಸಿಲ್ಲದಿದ್ದರೂ ಒಪ್ಪಿಸಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. 

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ 800 ಡಯಾಲಿಸಿಸ್ ಯಂತ್ರ: ಸಚಿವ ದಿನೇಶ ಗುಂಡೂರಾವ್

150 ಹಾಸಿಗೆಯಿಂದ ಆರಂಭವಾದ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 2000 ಹಾಸಿಗೆಗಳಿಗೆ ವಿಸ್ತರಿಸಿ ಲಕ್ಷಾಂತರ ಹೃದ್ರೋಗಿಗಳಿಗೆ ಆಶಾಕಿರಣವಾಗಿದ್ದಾರೆ. ಯಾವುದೇ ಕಾರ್ಪೊರೇಟ್ ಸಂಸ್ಥೆ ಮಾಡದ ಸಾಧನೆ ಅವರಿಗೆ ಅವಕಾಶ ನೀಡಿದ್ದಾರೆ. ಅವರು ಜಯ ದಾಖಲಿಸಿದಲ್ಲಿ ಮುಂದೆ ಕೇಂದ್ರದಲ್ಲಿ ಆರೋಗ್ಯ ಮಂತ್ರಿಯಾದರೂ ಆಗ ಬಹುದೇನೋ? ಎಂಬ ಆಶಯ ವ್ಯಕ್ತಪಡಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕೆ.ಎಂ.ವಿನಾಯಕ್ ವೈಎಸ್‌ವಿ ದತ್ತ ಕಾರ್ಯಕರ್ತರ ಪಡೆಯೊಂದಿಗೆ ಈ ಬಾರಿ ತಾಲೂಕಿನಲ್ಲಿ ಹೆಚ್ಚಿನ ಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿ ಜಯಗಳಿಸಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಬಾವಿ ಮನೆ ಮಧು, ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಚೇತನ್ ಕೆಂಪರಾಜು, ಪ್ರೇಮ ಮಲ್ಲಿಕಾರ್ಜುನ್, ಪುರಸಭೆ ಸದಸ್ಯರಾದ ಲಕ್ಷ್ಮಣ್, ಬಿ.ಆರ್.ಮೋಹನ್ ಕುಮಾರ್, ರವಿ, ಕೆ.ಎಂ.ಶಿವಕುಮಾರ್, ಕೆ.ವಿ.ವಿವೇಕ್, ಹೇಮಂತ್ ಕುಮಾರ್, ಅಯೂಬ್ ಅಹಮದ್, ರಾಜಣ್ಣ, ಕಲ್ಲೇಶ್, ಹಾಗೂ ಕಾರ್ಯಕರ್ತರು ಇದ್ದರು.

ನನ್ನ ಅಭಿಮಾನಿ ಕೃಷ್ಣಮೂರ್ತಿಯನ್ನ ಮಂತ್ರಿ ಮಾಡಲಿಲ್ಲ: ಸಿದ್ದರಾಮಯ್ಯ ಯಾರ್ ಯಾರನ್ನ ಮಂತ್ರಿ ಮಾಡಿದ್ದ, ನನ್ನ ಅಭಿಮಾನಿ ದಿ.ಕೃಷ್ಣಮೂರ್ತಿಯನ್ನು ಅಷ್ಟು ಬಾರಿ ಗೆದ್ದರೂ ಸಹ ಮಂತ್ರಿ ಮಾಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಬೆಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸ್ವಜಾತಿಯವರನ್ನೇ ಬೆಳೆಯಲು ಬಿಡಲಿಲ್ಲ.ನನ್ನ ಒಡನಾಡಿಗಳನ್ನ ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ. ಇವತ್ತು ಹೇಳ್ತೀನಿ ನಾಳೇನೂ ಹೇಳ್ತೀನಿ, ಸಿದ್ದರಾಮಯ್ಯ ಬದುಕಿದ್ದಾನೆ ನಿವೇ ಕೇಳಿ. ಸಿದ್ದರಾಮಯ್ಯ ಬಗ್ಗೆ ಹೆಗರೆಯವರು ಹಿಂದೆಯೇ ಹೇಳಿದ್ದರು.

ಬಿಎಸ್‌ವೈ ವಿರುದ್ಧ ಆಡಳಿತ ಪಕ್ಷದ ಷಡ್ಯಂತ್ರ: ಪ್ರಲ್ಹಾದ್‌ ಜೋಶಿ ಆಕ್ರೋಶ

ಸಿದ್ದರಾಮಯ್ಯ ವಿಚಾರಕ್ಕೆ ಹೆಗಡೆ ಮತ್ತು ನನಗು ಹೋರಾಟ ಆಯ್ತು, ಸಿದ್ದರಾಮಯ್ಯ ಮೋಸ ಮಾಡ್ತಾರೆ ಅವನಿಗೆ ಮಾಡಬೇಡ ಅಂದ್ರು, ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಾಡು ಎಂದು ಹೆಗಡೆ ಹೇಳಿದ್ರು, ಹಿಂದುಳಿದ ವರ್ಗದವರನ್ನೆ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು. ಸಿದ್ದರಾಮಯ್ಯನವರನ್ನು ಮಾಡಬೇಡ ಅಂದಿದ್ರು. ನಾನು ಸುಳ್ಳುನ್ನ ಹೇಳಿ ಪಾಪದ ಕೆಲಸ ಮಾಡಲ್ಲ. ನನಗೆ ಮಂಡಿ ನೋವಿದೆ ಆದರೆ ಜ್ಞಾಪಕ ಶಕ್ತಿ ಹಾಗೆ ಉಳಿದಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ