ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ: ಸಚಿವ ಡಿ ಸುಧಾಕರ್

By Ravi Janekal  |  First Published May 17, 2024, 3:08 PM IST

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ಶೆಟ್ಟರ್ ಹೇಳಿದ್ದಾರೆ. ಅವರು ಪಾಪ ಮಾಜಿ ಸಿಎಂ ಆಗಿದ್ದವರು. ಅವರ ಸರ್ಕಾರದಲ್ಲಿ ನಾನು ಇದ್ದವನು, ಅವರ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ನೋಡಿದ್ದೇನೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿರುಗೇಟು ನೀಡಿದರು.


ಚಿತ್ರದುರ್ಗ (ಮೇ.17): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ ಎಂದು ಶೆಟ್ಟರ್ ಹೇಳಿದ್ದಾರೆ. ಅವರು ಪಾಪ ಮಾಜಿ ಸಿಎಂ ಆಗಿದ್ದವರು. ಅವರ ಸರ್ಕಾರದಲ್ಲಿ ನಾನು ಇದ್ದವನು, ಅವರ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ನೋಡಿದ್ದೇನೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿರುಗೇಟು ನೀಡಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ದಕ್ಷವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಅಂಜಲಿ ಹತ್ಯೆ ಕೇಸ್ ಗೆ ನಮ್ಮ ನಾಯಕರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. SIT ಸ್ವತಂತ್ರ ತನಿಖಾ ಸಂಸ್ಥೆ ಅದಕ್ಕೆ ಸರ್ಕಾರದಿಂದ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಅವರು ಸಮರ್ಥವಾಗಿ ತನಿಖೆ ಮಾಡ್ತಿದ್ದಾರೆ ಎಂದರು.

Tap to resize

Latest Videos

undefined

ಕತ್ತು ಕೊಯ್ದು ಎಸ್ಕೇಪ್​​ ಆದ ಪ್ರೇಮಿ: ಮಲಗಿದ್ದಲ್ಲೇ ಹೆಣವಾದಳು ಅಮ್ಮ ಇಲ್ಲದ ತಬ್ಬಲಿ ಮಗಳು

ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಸರ್ಕಾರದವರೇ ಸಹಕಾರ ಕೊಡ್ತಿಲ್ಲ. ಅಪರಾಧಿಗೆ ಡಿಪ್ಲಾಮೋಟಿಕ್ ಪಾಸ್ ಪೋರ್ಟ್ ಕೊಟ್ಟಿದೆ ಹೀಗಾಗಿ ಅಪರಾಥಿ ನಾಪತ್ತೆಯಾಗಿ ಇಪ್ಪತ್ತು ದಿನ ಕಳೆದರೂ ಬಂಧಿಸಲು ಆಗುತ್ತಿಲ್ಲ. ಈ ಪ್ರಪಂಚದಲ್ಲಿ ಎಲ್ಲಿ ಇದ್ದಾರೆ ಎಂದು ಕಂಡು ಹಿಡಿದು 10 ನಿಮಿಷದಲ್ಲಿ ಕರ್ಕೊಂಡ್ ಬರಬಹುದು. ಆದರೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಎನ್‌ಡಿಎ ಮೈತ್ರಿ ಮಾಡಿಕೊಂಡು ಅಪರಾಧಿಗೆ ಕೇಂದ್ರ ಸರ್ಕಾರವೇ ಭದ್ರತೆ ಕೊಡ್ತಿದೆ. ಕೇಂದ್ರ ಸರಕಾರ ಮನಸು ಮಾಡಿದ್ರೆ ಒಂದು ನಿಮಿಷದಲ್ಲಿ ಹಿಡಿದು ತರಬಹುದು. ಸಾವಿರಾರು ಹೆಣ್ಣುಮಕ್ಕಳು ದುಃಖತಪ್ತರಾಗಿದ್ದಾರೆ. ಆದರೆ ಕೇಂದ್ರದ ಅಧೀನದಲ್ಲಿ ಬರುವ ತನಿಖಾ ಸಂಸ್ಥೆಗಳಿಂದ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿಸಲಿ. ಈ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಹರಿಹಾಯ್ದರು.

ಅಂಜಲಿ ಹತ್ಯೆ ಆರೋಪಿ ಬಂಧನ ಆಗಿದೆ, ಮುಲಾಜು ಇಲ್ಲದೆ ಕಾನೂನು ಕ್ರಮ: ಪರಮೇಶ್ವರ

ಮುಂದೆ ಲೋಕಸಭಾ ಚುನಾವಣೆ ಮುಗಿದ ಬಳಿಕ 25 ರಿಂದ 30 ಜನ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರ್ತಾರೆ. ಮುಂದೆ ಕಾಂಗ್ರೆಸ್ ಈಗ ಇರೋದಕ್ಕಿಂತ ಹೆಚ್ಚು ಪವರ್‌ಫುಲ್ ಆಗಲಿದೆ ಎಂದರು.

click me!