ಡಿಕೆಶಿ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಸಿದ್ದರಾಮಣ್ಣ ನೀವು ಸ್ವಲ್ಪ ಹುಷಾರಾಗಿರಿ ಎಂದ ರಾಜೂಗೌಡ!

By Ravi Janekal  |  First Published May 3, 2024, 10:17 AM IST

ಡಿಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬೇಡಿ ಸಿದ್ದರಾಮಯ್ಯ ನೀವು ಹುಷಾರಾಗಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜುಗೌಡ ವಾಗ್ದಾಳಿ ನಡೆಸಿದರು.


ಯಾದಗಿರಿ (ಮೇ.3): ಡಿಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬೇಡಿ ಸಿದ್ದರಾಮಯ್ಯ ನೀವು ಹುಷಾರಾಗಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಬಿಜೆಪಿ ಅಭ್ಯರ್ಥಿ ರಾಜುಗೌಡ ವಾಗ್ದಾಳಿ ನಡೆಸಿದರು.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂಗೇ ಮಾಡಿನೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ತಯಾರಿಸಿಕೊಂಡು ಮನೆಗೆ ಕಳುಹಿಸಿದ್ರು.  ಡಿಕೆಶಿ ಬಂದಿರೋದು ಸಿದ್ದರಾಮಣ್ಣನಿಗೆ ಒಳ್ಳೇದು ಮಾಡೋಕೆ ಅಲ್ಲ, ಸಿದ್ದರಾಮಯ್ಯ ನಿನ್ನ ಸೀಟ್‌ ಮೇಲೆ ಡಿಕೆ ಶಿವಕುಮಾರ ಕಣ್ಣಿದೆ. ಅದಕ್ಕಾಗಿ ಅವ್ರು ಏನು ಬೇಕಾದ್ರೂ ಮಾಡ್ತಾರೆ. ನಾಳೆ ಎಂಪಿ ಎಲೆಕ್ಷನ್ ಮುಗಿದ ಮೇಲೆ ನಿಮ್ಮದೇ ಸಿಡಿ ಬಿಡಬಹುದು, ಇಲ್ಲಂದ್ರೆ ಯತೀಂದ್ರ ಅವರದ್ದು ಯಾವುದಾದ್ರೂ ಸಿಡಿ ಬಿಡಬಹುದು ಹುಷಾರಾಗಿರಿ ಎಂದ ರಾಜುಗೌಡ ಎಚ್ಚರಿಕೆ ನೀಡಿದರು.

Tap to resize

Latest Videos

ಮಧ್ಯಾಹ್ನ 12.30ರೊಳಗೆ ಎನ್‌ಡಿಎ 400ರ ಗಡಿ ದಾಟಲಿದೆ: ಶಾ ವಿಶ್ವಾಸ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಸಿಡಿ ಬಿಡುಗಡೆ ಮಾಡಿರುವುದರ ಹಿಂದೆ ಡಿಕೆ ಶಿವಕುಮಾರ ಕೈವಾಡ ಇದೆ ಎಂದು ಎಚ್‌ಡಿ ಕುಮಾರಸ್ವಾಮಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಡಿಕೆ ಶಿವಕುಮಾರರೇ ಪ್ಲಾನ್ ಮಾಡಿ ಇಂತಹ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೀಗ ರಾಜೂಗೌಡ ಸಹಿತ ಡಿಕೆ ಶಿವಕುಮಾರ ಸಿಡಿ ಮಾಡುವುದರಲ್ಲಿ ಎಕ್ಸ್‌ಪರ್ಟ್ ಇದ್ದಾರೆಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

click me!