ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದ ಸಿಎಂ ಸಿದ್ದರಾಮಯ್ಯ

By Ravi JanekalFirst Published Apr 28, 2024, 11:05 PM IST
Highlights

ಸಿಂಧನೂರಿಗೆ ಬಂದರೆ ನನ್ನ ಕ್ಷೇತ್ರಕ್ಕೆ ಬಂದಂತೆ ಫೀಲ್ ಆಗುತ್ತೆ. ನಾನು ಯಾವಾಗಲೂ ಬಂದಾಗೆಲ್ಲ ನಿಮ್ಮ ಊರಿನವರಂತೆ ಕಾಣುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಧನೂರು ಜನರನ್ನು ಹಾಡಿಹೊಗಳಿದರು.

ರಾಯಚೂರು (ಏ.28): ಸಿಂಧನೂರಿಗೆ ಬಂದರೆ ನನ್ನ ಕ್ಷೇತ್ರಕ್ಕೆ ಬಂದಂತೆ ಫೀಲ್ ಆಗುತ್ತೆ. ನಾನು ಯಾವಾಗಲೂ ಬಂದಾಗೆಲ್ಲ ನಿಮ್ಮ ಊರಿನವರಂತೆ ಕಾಣುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಧನೂರು ಜನರನ್ನು ಹಾಡಿಹೊಗಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, 1991ರಲ್ಲಿ ನಾನು ‌ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಸುಮಾರು 18-19 ಸಾವಿರ ಮತಗಳ ಲೀಡ್ ಕೊಟ್ಟಿದ್ರು. ಆಗಿನಿಂದಲೂ ನಿಮ್ಮ ‌ಋಣ ನನ್ನ ‌ಮೇಲೆ ಇದೆ. ಅಂದು ಕೂಡ ರಾಜಶೇಖರ್ ಹಿಟ್ನಾಳ್ ನನ್ನ ಪರವಾಗಿ ಕೆಲಸ ಮಾಡಿದ್ರು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ. ಈ ಸಮಾವೇಶಕ್ಕೆ ಬಂದಿದ್ದು ಸಂತೋಷವಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿಗೆ ಧನ್ಯವಾದ ತಿಳಿಸಿದರು.

ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು, ಆದರೆ ಇವನು... ಪ್ರಧಾನಿ ಮೋದಿ ವಿರುದ್ಧ ಪ್ರಕಾಶ ರಾಜ್ ಏಕವಚನದಲ್ಲಿ ವಾಗ್ದಾಳಿ!

ಮೇ- 7 ರಂದು ಮತದಾನ ಇದೆ. ನೀವು ಯಾರಿಗೆ ಮತದಾನ ಮಾಡಬೇಕು ಎಂದು ತೀರ್ಮಾನ ಮಾಡಬೇಕು. ಬಿಜೆಪಿ-ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಎದುರಿಸುತ್ತಿದ್ದಾರೆ. ಆದರೆ ನಾವು ಒಂಟಿಯಾಗಿ ಸ್ಪರ್ಧೆಗೆ ಇಳಿದಿದ್ದೇವೆ. ಬಿಜೆಪಿ ಯಾವುದೇ ಕಾರಣ ಇಲ್ಲದೆ ಸಂಗಣ್ಣ ಕರಡಿಗೆ ಟಿಕೆಟ್ ತಪ್ಪಿಸಿದ್ರು. ಬಿಜೆಪಿಯಲ್ಲಾದ ಅನ್ಯಾಯದಿಂದ ಅವರು ನಮ್ಮ ಪಕ್ಷಕ್ಕೆ ಬಂದಿದ್ದು ನಮಗೆ ಶಕ್ತಿ ಬಂದಿದೆ. ಕಳೆದ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ ಸ್ವಲ್ಪ ಮತಗಳಿಂದ ಸೋತಿದ್ರು. ಆದರೆ ಇಂದಿನ ಈ ಉತ್ಸಾಹ ನೋಡುತ್ತಿದ್ರೆ ಈ ಬಾರಿ ಹಿಟ್ನಾಳ್ಗೆ ನಿಮ್ಮ ಆಶೀರ್ವಾದ ಸಿಗುತ್ತದೆ ಅನಿಸಿದೆ. ಕಳೆದ 10 ವರ್ಷದಿಂದ ದೇಶದ ಪ್ರಧಾನಿ ಆಗಿದ್ದಾರೆ.

2024ರಲ್ಲಿ ಮೋದಿ ಬೆತ್ತಲಾಗಿದ್ದಾರೆ: ಸಿಎಂ ವಾಗ್ದಾಳಿ

3ನೇ ಬಾರಿ ಪ್ರಧಾನಿ ಆಗಲು ಮೋದಿ ಜನರ ಆರ್ಶೀವಾದ ಕೇಳುತ್ತಿದ್ದಾರೆ. ಆದರೆ ಮೋದಿಗೆ ಜನರ ಮತ ಕೇಳುವ ಯಾವ ನೈತಿಕತೆ ಇಲ್ಲ ಆಕ್ಸಿಸ್ ಮೈ ಇಂಡಿಯಾ ಸರ್ವೇ ಪ್ರಕಾರ 200-210ಸೀಟುಗಳಿಂದ ಗೆಲ್ಲುತ್ತೇವೆ ಎಂದು ಗೊತ್ತಾಗಿದೆ. ಅದಕ್ಕಾಗಿ ಇಡೀ ದೇಶದಲ್ಲಿ 100ಕ್ಕೂ ಹೆಚ್ಚು ಸಂಸದರ ಟಿಕೆಟ್ ಕಟ್ ಮಾಡಿದ್ದಾರೆ ಕರ್ನಾಟಕದಲ್ಲಿ 12 ಸೀಟುಗಳ ಬದಲಾಗಿಸಿದ್ದಾರೆ. ನರೇಂದ್ರ ಮೋದಿ ದೇಶದ ಅಭಿವೃದ್ಧಿ ಕೆಲಸ ಮಾಡಿದ್ದು ಕಡಿಮೆ. 10 ವರ್ಷ ಸಾಧನೆ ಏನು ಎಂಬುದನ್ನು ನರೇಂದ್ರ ‌ಮೋದಿ ಜನರ ಮುಂದೆ ಹೇಳಿಲ್ಲ. ನಿರುದ್ಯೋಗ, ಬೆಲೆಏರಿಕೆ, ಹಣದುಬ್ಬರ, ರೈತರ ಸಮಸ್ಯೆ ಗಳ ಬಗ್ಗೆ ಚರ್ಚೆ ‌ಮಾಡಿಲ್ಲ, ಮಾಡೊಲ್ಲ. ಆದರೆ ಅಭಿವೃದ್ಧಿ ಮಾಡಿದ್ದೇನೆ, ನಾನು ಅಭಿವೃದ್ಧಿ ಮಾಡಿದ್ದೇನೆ ಅಂತಾ ಹೇಳ್ಕೊಳ್ತಿದ್ದಾರೆ. ಏನ್ ಅಭಿವೃದ್ಧಿ ‌ಮಾಡಿದ್ದಾರೆ ಹಾಗಾದ್ರೆ? ಕಪ್ಪು ಹಣ ತರುವ ಬಗ್ಗೆ 2014ರಲ್ಲಿ ಹೇಳಿದ್ರು, 10 ವರ್ಷ ಆಯ್ತು 15 ಲಕ್ಷ ಬಂತಾ? ಇದು ನರೇಂದ್ರ ‌ಮೋದಿಯವರು ಹೇಳಿದ ಮೊದಲ ಸುಳ್ಳು.ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿ ನಿರುದ್ಯೋಗ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದ್ರು. ಇವತ್ತಿನವರೆಗೆ ಮೋದಿ 2 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಆಗಲಿಲ್ಲ. ಇದು ನರೇಂದ್ರ ‌ಮೋದಿಯವರ ಎರಡನೇ ಸುಳ್ಳು. ರೈತರ ಆದಾಯ ದುಪ್ಪಟ್ಟು ‌ಮಾಡುತ್ತೇವೆ ಎಂದಿದ್ರು. ರೈತರ ಆದಾಯ ಎರಡು ಪಟ್ಟು ಆಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ ಎಂದಿದ್ರು. ಗ್ಯಾಸ್, ಅಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್ ದರ ಇಳಿಕೆ ಮಾಡಿದ್ರಾ? ರೂಪಾಯಿ ಮೌಲ್ಯ ಹೆಚ್ಚು ಮಾಡುತ್ತೇವೆ ಎಂದು ಹೇಳಿ ಡಾಲರ್ ಬೆಲೆ ಹೆಚ್ಚು ಮಾಡಿದ್ರಿ. ನರೇಂದ್ರ ಮೋದಿ ‌10 ವರ್ಷದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. 2024ರಲ್ಲಿ ನರೇಂದ್ರ ಮೋದಿ ಬೆತ್ತಲೆಯಾಗಿದ್ದಾರೆ. ಮೋದಿ ಸುಳ್ಳು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಳಿದ ವರ್ಗಗಳಿಗೆ ಕೊಡುವ ಮೀಸಲಾತಿ ಕಿತ್ತೊಗೆದು ಮುಸ್ಲಿಮರಿಗೆ ಕೊಡುತ್ತಿದ್ದಾರೆ ಎಂದು ‌ಮೋದಿ ಹಸಿ ಸುಳ್ಳು ಹೇಳಿದ್ದಾರೆ. ನಾವು ಯಾವತ್ತೂ ‌ಮೀಸಲಾತಿ ಆದೇಶ ಬದಲಾವಣೆ ‌ಮಾಡಿಲ್ಲ, ಮಾಡುವುದೂ ಇಲ್ಲ. ಚೆನ್ನಪ್ಪ ರೆಡ್ಡಿ ವರದಿಯಂತೆ 4 ರಷ್ಟು ಮೀಸಲಾತಿ ‌ಕೊಡುತ್ತಿದ್ದೇವೆ. ಸುಮಾರು 30 ವರ್ಷಗಳಿಂದ ‌ಮುಸ್ಲಿಂರಿಗೆ ಮೀಸಲಾತಿ ‌ಇದೆ. ಹಿಂದೂಳಿದ ವರ್ಗಗಳಿಗೆ ಮುಸ್ಲಿಂರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು 40 ವರ್ಷ ರಾಜಕೀಯದಲ್ಲಿ ಇದ್ದೇನೆ. ಇಷ್ಟು ಸುಳ್ಳು ಹೇಳುವ ಪ್ರಧಾನಿ ನಾನು ಎಲ್ಲಿಯೂ ನೋಡಿಲ್ಲ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದಕ್ಕೆ ಆಗೊಲ್ಲ ಎಂದರು.

ಸಿಬಿಐಗಿಂತ ವಿಶೇಷ ಸಾಮರ್ಥ್ಯ ರಾಜ್ಯ ಪೊಲೀಸರಿಗಿದೆ: ಎಚ್‌ಕೆ ಪಾಟೀಲ್

ಕಿತ್ತೂರು ರಾಣಿ ಮತ್ತು ಶಿವಾಜಿಗೆ ಕಾಂಗ್ರೆಸ್ ‌ನವರು ಅವಮಾನ ಮಾಡಿದ್ರು ಮೋದಿ ಹೇಳಿಕೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಕಿತ್ತೂರು ಚೆನ್ನಮ್ಮ ಜಯಂತಿ ಮಾಡಿದ್ದು ಈ ಸಿದ್ದರಾಮಯ್ಯ, ಬಸವಣ್ಣನವರ ಸಾಂಸ್ಕೃತಿಕ ನಾಯಕವೆಂದು ಘೋಷಣೆ ‌ಮಾಡಿದ್ದು ನಮ್ಮ ‌ಸರ್ಕಾರ, ಸಾಂಸ್ಕೃತಿಕ ನಾಯಕವೆಂದು ಘೋಷಣೆ ಎಲ್ಲಾ ಸರ್ಕಾರಿ ‌ಕಚೇರಿಯಲ್ಲಿ ಫೋಟೋ ‌ಇಟ್ಟಿದ್ದು ಕಾಂಗ್ರೆಸ್ ಸರ್ಕಾರ, ನರೇಂದ್ರ ಮೋದಿಯವರೇ ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಬಸವಾದಿ ಶರಣರು ಹೇಳಿದಂತೆ ಸಮಸಮಾಜ ನಿರ್ಮಾಣ ಮಾಡಿದ್ರಾ ಮೋದಿಯವರೇ ಎಂದು ಪ್ರಶ್ನಿಸಿದರು.

click me!