'ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು, ಆದರೆ ಇವನು... ಪ್ರಧಾನಿ ಮೋದಿ ವಿರುದ್ಧ ಪ್ರಕಾಶ ರಾಜ್ ಏಕವಚನದಲ್ಲಿ ವಾಗ್ದಾಳಿ!

By Ravi Janekal  |  First Published Apr 28, 2024, 10:26 PM IST

ಅವನಿಗೆ ರೈತರ ಬಗ್ಗೆ ಗೊತ್ತಿಲ್ಲ, ಹಳ್ಳಿಗಳ ಬಗ್ಗೆ ಗೊತ್ತಿಲ್ಲ. ಹಳ್ಳಿಗಳನ್ನು ದತ್ತು ತಗೊಂಡು ಮಾಡೆಲ್ ಮಾಡ್ತಿವಿ ಅಂದ್ರು. ನಿಮ್ಮ ಜನ್ಮಕ್ಕೆ, ಕರ್ಮಕ್ಕೆ ಒಂದಾದರೂ ಹಳ್ಳಿ ಡೆವೆಲಪ್ ಮಾಡಿದ್ದೀರಾ? ಎಂದು ನಟ ಪ್ರಕಾಶ ರಾಜ್ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.


ರಾಯಚೂರು(ಏ.28): ನೇಹಾ ಹತ್ಯೆ ಪ್ರಕರಣ ಘಟನೆ ಬಗ್ಗೆ ಮಹಾಪ್ರಭು(ನರೇಂದ್ರ ಮೋದಿ) ಹೇಳ್ತಾನೆ, ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂತಾ. ಆದರೆ ಇದನ್ನು ನೀವು ಪರಿಗಣಿಸಿಕೊಂಡು ಕೋಮುವಾದಕ್ಕೆ ಬಳಸಿಕೊಳ್ಳುತ್ತಿದ್ದೀರಿ ಥೂ.. ನಿಮ್ಮ ಜನ್ಮಕ್ಕೆ ಎಂದು ನಟ ಪ್ರಕಾಶ್ ರಾಜ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 

ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರು ನಗರಕ್ಕೆ ಆಗಮಿಸಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ ರಾಜ್, ಅವನಿಗೆ ರೈತರ ಬಗ್ಗೆ ಗೊತ್ತಿಲ್ಲ, ಹಳ್ಳಿಗಳ ಬಗ್ಗೆ ಗೊತ್ತಿಲ್ಲ. ಹಳ್ಳಿಗಳನ್ನು ದತ್ತು ತಗೊಂಡು ಮಾಡೆಲ್ ಮಾಡ್ತಿವಿ ಅಂದ್ರು. ನಿಮ್ಮ ಜನ್ಮಕ್ಕೆ, ಕರ್ಮಕ್ಕೆ ಒಂದಾದರೂ ಹಳ್ಳಿ ಡೆವೆಲಪ್ ಮಾಡಿದ್ದೀರಾ? ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು. ಆದರೆ ಇವನು ಜನರ ಜೀವನದ ಜೊತೆ ನಟನೆ ಮಾಡ್ತಾನೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

Latest Videos

undefined

ಪ್ರಧಾನಿಗಳು ದೊಣ್ಣೆ ನಾಯಕನ ರೀತಿ ಆಡ್ತಿದ್ದಾರೆ, ಮೋದಿ ವಿರುದ್ಧ ಮತ್ತೆ ಪ್ರಕಾಶ್ ರಾಜ್ ವಾಗ್ದಾಳಿ!

ನೀನು ಕೊಟ್ಟ ಮಾತನ್ನು ನಾವು ನೆನಪು ಮಾಡಿದ್ರೆ ಅದು ದೇಶ ದ್ರೋಹನಾ? 10 ಲಕ್ಷ ಎಕರೆ ಚೀನಾ ಒತ್ತುವರಿ ಮಾಡಿದೆ. ಇವನನ್ನು ನಾವು ಉಳಿಸಿಕೊಳ್ಳಬೇಕಾ? ಇವನೇ ಓದಿಲ್ಲ, ಅ ಆ ಇ‌ ಈ ಬರಲ್ಲ. ರೈತರ ಮಹತ್ವ ಹೇಗೆ ಗೊತ್ತಾಬೇಕು ಇವನಿಗೆ? ಹೂವಿನ ಹತ್ತರ ಹೋದ್ರೆ ಪರಿಮಳ ಸುವಾಸನೆ ಬರುತ್ತೆ, ಇವನತ್ರ ಹೋದ್ರೆ ಗಬ್ಬು ನಾಥ ಬರುತ್ತೆ. ದೇಶದ ಇವತ್ತಿನ ಸ್ಥಿತಿಗೆ ಈ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಸರ್ಕಾರಗಳು ಕಾರಣ ಎಂದು ಆರೋಪಿಸಿದರು.

ನಾವು ಕಾಯಕ ಕಲ್ಯಾಣ ಮಾಡ್ತಿವಿ, ಆದ್ರೆ ಬಿಜೆಪಿಯವ್ರು ಕಾವಿ ಕಲ್ಯಾಣ ಮಾಡ್ತಿದ್ದಾರೆ. ಮಹಾಪ್ರಭುಗಳು ಇಲ್ಲೇ ಪ್ರಚಾರಕ್ಕೆ ಬಂದಿದ್ದಾರೆ ತಾಯಿ-ತಂದೆ ಮಗನಿಗೆ ಇರುವ ಸಂಬಂಧ ನನಗೆ ರೈತರಿಗೆ ಇದೆ. ಕಾಲ ಕಾಲದಿಂದ ರೈತರಿಗೆ ಕೊಡೋದು ಭಿಕ್ಷೆ ಅಂದುಕೊಂಡಿದ್ದಾರೆ. ಆದ್ರೆ ರೈತರು ಘನತೆಯಿಂದ ಕೇಳ್ತಿದ್ದಾರೆ. ರೈತನ ಮಗ‌ ಈಗ ರೈತನಾಗಲ್ಲ ಅಂತಿದಾನೆ. ಇಷ್ಟು ದೊಡ್ಡ ಭಾರತದಲ್ಲಿ ದಿನನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನನಗೆ ಯಾರೂ ಇಲ್ಲ ಎಂಬ ಭಾವನೆ ರೈತರಿಗೆ ಬಂದು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ. ಇದೆಲ್ಲ ಮಹಾಪ್ರಭುಗಳಿಗೆ ಅರ್ಥಾಗುತ್ತಾ?  ಮಹಾಪ್ರಭುವಿನ ಸರ್ಕಾರದಲ್ಲಿ ಏನೂ ಮಾಡೊಲ್ಲ. ಅವನಲ್ಲಿ ಪರಿಹಾರ ಇಲ್ಲ ಎಂದ ಪ್ರಕಾಶ ರಾಜ್.

ಇನ್ನು ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ ಪ್ರಕಾಶ ರಾಜ್, ಇದನ್ನ ನಾನು ಮಹಾಪ್ರಭುಗಳಿಗೆ ಕೇಳಬೇಕು ಅಂದುಕೊಂಡೆ. ನಿನ್ನ‌ ಜೊತೆ ಮೈತ್ರಿ ಮಾಡಿಕೊಂಡ ಅಣ್ಣಾ ಇದಾನಲ್ಲ. ಆ ಅಣ್ಣ ಹೆಣ್ಣುಮಕ್ಕಳಿಗೆ ಉಚಿತ ಬಸ್ ಕೊಟ್ರೆ ದಾರಿ ತಪ್ಪಿದ್ದಾರೆ ಎಂದಿದ್ದ. ಆದರೆ ಆ ನಿನ್ನ ದಾರಿ ತಪ್ಪಿದ ಮಗ ಈಗ ಎಲ್ಲವ್ನೆ ವಸಿ ಹೇಳಪ್ಪ ಎಂದು ಎಚ್ಡಿ ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದರು.

 

'ಮಹಾಪ್ರಭುಗಳು ಫಕೀರರು, ನಾನು ಜಂಗಮ..' ಪ್ರಧಾನಿ ಮೋದಿ ಹೆಸರೇಳದೇ ನಟ ಪ್ರಕಾಶ್ ರಾಜ್ ವಾಗ್ದಾಳಿ

ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ಇಷ್ಟೆಲ್ಲ ಮಾಡಿದ್ರಲ್ಲ? ಆದರೆ ದಾರಿ ತಪ್ಪಿದ ಮಗನಿಂದ ಹಾಳಾದ ಹೆಣ್ಣುಮಕ್ಕಳು ಹಿಂದೂ ಮಹಿಳೆಯರು ಅಲ್ವ? ದಾರಿ ತಪ್ಪಿದ ಮಗನಿಂದ ಹಾಳಾದ 2000 ಕ್ಕೂ ಹೆಚ್ಚು ಮಹಿಳೆಯರಿಗೋಸ್ಕರ ನಿಮಗೆ ಆಕ್ರೋಶ ಬರಲ್ವಾ? ನನ್ನ ಮಕ್ಕಳಾ ನಿಮ್ಮ ರಾಜಕಾರಣ ನಮಗೆ ಅರ್ಥಾಗೊಲ್ಲ ಅಂದುಕೊಂಡಿದ್ದೀರಾ? ಆದರೆ ನಾವು ದೊಡ್ಡ ಮನಸ್ಸಿನವರು. ಕ್ಷಮಿಸುತ್ತೀವಿ ಆದ್ರೆ ಮರೆಯೋದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

click me!