ಬಿಜೆಪಿಯಲ್ಲಿ ಇರೋರೆಲ್ಲ ನನ್ನ ಹಳೇ ಸ್ನೇಹಿತರು: ಅಶ್ವಥ್ ನಾರಾಯಣ ಭೇಟಿ ಬಳಿಕ ಎಚ್‌ಡಿಕೆ ಹೇಳಿಕೆ

By Ravi JanekalFirst Published Mar 26, 2024, 10:44 PM IST
Highlights

ಬಿಜೆಪಿ-ಜೆಡಿಎಸ್ ಮೈತ್ರಿ ಆದ ಬಳಿಕ ಎರಡೂ ಪಕ್ಷಗಳ ಮುಖಂಡರಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣವಾಗಬೇಕಿದೆ. ನಮ್ಮ ಗುರಿ ಲೋಕಸಭಾ ಚುನಾವಣೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರು (ಮಾ.26): ಬಿಜೆಪಿ-ಜೆಡಿಎಸ್ ಮೈತ್ರಿ ಆದ ಬಳಿಕ ಎರಡೂ ಪಕ್ಷಗಳ ಮುಖಂಡರಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣವಾಗಬೇಕಿದೆ. ನಮ್ಮ ಗುರಿ ಲೋಕಸಭಾ ಚುನಾವಣೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ನಿವಾಸಕ್ಕೆ ಸಿ ಎಸ್ ಪುಟ್ಟರಾಜು ಜೊತೆಗೆ ಆಗಮಿಸಿದರು. ಎಚ್‌ಡಿಕೆ ಆಗಮಿಸುತ್ತಿದ್ದಂತೆ ಅಶ್ವಥ್ ನಾರಾಯಣ ಅವರು ಮನೆಬಾಗಿಲಿಗೆ ಬಂದು ಸ್ವಾಗತಿಸಿದರು. ಉಭಯ ಕುಶಲೋಪರಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯಲ್ಲಿ ಇರೋರು ಎಲ್ಲಾ ನನ್ನ ಹಳೇ ಸ್ನೇಹಿತರು. ಸೌಹಾರ್ದತೆಯ ದೃಷ್ಟಿಯಿಂದ ಭೇಟಿ ಮಾಡಲಾಗಿದೆ. ಎಂದರು. ಇದೇ ವೇಳೆ ಹಾಲಿ ಸಂಸದೆ ಸುಮಲತಾ ಅವ್ರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆಗಲಿದೆ ಎಂದರು.

ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂಗಾಯ್ತು: ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆಗೆ ಚಲುವರಾಯಸ್ವಾಮಿ ವ್ಯಂಗ್ಯ

ನಾಳೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪ್ರಕಟ ಮಾಡುತ್ತೇವೆ. ಹೆಚ್ಚು ಕಮ್ಮಿ ನಿಮಗೆ(ಮಾಧ್ಯಮದವರಿಗೆ)ಮಾಹಿತಿ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಅದರ ಪ್ರಕಾರವೇ ಆಗಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ದಿನ ಸಮೀಪಿಸುತ್ತಿದೆ. ನಾಳೆ ಹಳೇ ಕರ್ನಾಟಕ ಭಾಗದಲ್ಲಿ ಮೈತ್ರಿ ಪಕ್ಷದ ಮೊದಲ ಸಭೆ ನಡೆಯಲಿದೆ.  ಜಿಟಿ ದೇವೇಗೌಡ್ರು ,ವಿಜಯೇಂದ್ರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಚಾಮರಾಜನಗರ ಮೈಸೂರು ಕೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ. ನಾಡಿದ್ದು‌ ಮಂಡ್ಯ ನಗರದಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ‌ ಮೈತ್ರಿ ಪಕ್ಷದ ಪ್ರಮುಖರ ಸಮನ್ವಯ ಸಭೆ ನಡೆಯಲಿದೆ ಎಂದರು.

click me!