ಕಾಂಗ್ರೆಸ್‌ ವಿರುದ್ಧ ದೇವೇಗೌಡ ಗಂಭೀರ ಆರೋಪ, ಒಡೆಯರನ್ನು ಸೋಲಿಸಲು ಸಾಧ್ಯವಾ?

By Suvarna NewsFirst Published Apr 17, 2024, 5:03 PM IST
Highlights

ಡಿ ಕೆ ಶಿವಕುಮಾರ್ ವರ್ಸಸ್ ದಳಪತಿಗಳ ಟಾಕ್ ವಾರ್ ಮುಂದುವರಿದೆ. ಇಂದು ದೇವೇಗೌಡ ಡಿಕೆಶಿ ವಿರುದ್ಧ ಹರಿಹಾಯ್ದು ಗಂಭೀರ ಆರೋಪ ಮಾಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.17): ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವರ್ಸಸ್ ದಳಪತಿಗಳ ಟಾಕ್ ವಾರ್ ಮುಂದುವರಿದೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಮತಬೇಟೆ ನಡೆಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಡಿಕೆಶಿ, ಸಿಎಂ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಐಕ್ಯತೆಯಲ್ಲಿ ಕೆಲಸ ಮಾಡುತ್ತಿ ದ್ದೇವೆ. ನನ್ನ ಜೀವನದಲ್ಲಿ ಇಷ್ಟೋಂದು ಸಾಮಾರಸ್ಯದ ಹೋರಾಟದ ದಿನ ನೋಡಿ ರಲಿಲ್ಲ ಎಂದರು.ಮೈಸೂರು ಸಮಾವೇಶ ನನ್ನ ಅನುಭವದಲ್ಲಿ ಬೃಹತ್ ಸಭೆ. ಪ್ರಧಾನಿ ಕರುನಾಡಿಗೆ ಕೊಟ್ಟ ಭರವಸೆ, ರಾಜ್ಯ ಸರ್ಕಾರದ ಭರವಸೆಗೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯ ಆಳುವ ಕಾಂಗ್ರೆಸ್ 94 ಶಾಸಕರಿಗೆ ಮಂತ್ರಿ ಸ್ಥಾನ ದರ್ಜೆ ಕೊಟ್ಟಿ ದ್ದಾರೆ. ರಾಜ್ಯದ ಆರ್ಥಿಕ ಸಮಸ್ಯೆಯ ಬಿಕ್ಕಟ್ಟಿಗೆ ಕೇಂದ್ರದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ದೂರಿದರು.

94 ಶಾಸಕರಿಗೆ ಮಂತ್ರಿ ಸ್ಥಾನ ದರ್ಜೆ : 
136 ಸ್ಥಾನದಲ್ಲಿ 94 ಶಾಸಕರಿಗೆ ಮಂತ್ರಿ ದರ್ಜೆ ಸ್ಥಾನ ನೀಡಿ ವಿವಿಧ ಜವಬ್ದಾರಿ ನೀಡಿದ್ದಾರೆ. ಸಿದ್ದರಾಮಯ್ಯ ಹಣಕಾಸಿನ ಸಚಿವರಾಗಿದ್ದರು. ನಾನು ಸಿ.ಎಂ. ಎಷ್ಟೇ ಒತ್ತಡ ಬಂದ್ರು ನಮಗೆ ಸಿಕ್ಕಿದ್ದು 113 ಸ್ಥಾನ 94 ಶಾಸಕರಿಗೆ ಹುದ್ದೆ ಕಲ್ಪಿಸುವ ಅಗತ್ಯವಿತ್ತಾ ಹಿಂದೆ ಯಾರು ಮಾಡಿಲ್ಲ ಎಂದರು. ಮೋದಿ ಬಗ್ಗೆ ಹಗುರವಾಗಿ ಮಾತಾನಾಡುತ್ತಾರೆ. ಸಿ.ಎಂ. ಒಬ್ಬ ಪಿ.ಎಂ.ಬಗ್ಗೆ ಬಳಸುವ ಮಾತು ಎಂತದ್ದು, ನಾನು ಸಿ.ಎಂ. ಪಿ.ಎಂ.ಆಗಿ ಕೆಲಸ ಮಾಡಿದ್ದೇನೆ ಪದ ಬಳಕೆ ಹಾಗೇ ಮಾಡಿಲ್ಲ. ದೇವೇಗೌಡರು ಕೊನೆ ಘಟ್ಟದಲ್ಲಿ ಇದ್ದಾರೆ. ಕಾರಣ ಯಾರು, ಅದು ಇರಲಿ. ಸೋನಿಯಾ ಗಾಂಧಿ ಠಾಕ್ರೆ ಜತೆ ಹೋದ್ರಲ್ಲ ಸಿದ್ದು ಸಮರ್ಥನೆ ಮಾಡಿಕೊಳ್ತಾರ? ಕಾಂಗ್ರೆಸ್ ದುಸ್ಥಿತಿಗೆ ಬರಲು ಕಾರಣ ಯಾರು? ಯುಪಿಯಲ್ಲಿ ಸೋನಿಯಾ, ರಾಹುಲ್ ನಿಲ್ಲಲು ಆಗ್ಲಿಲ್ಲ. ಇಂಧಿರಾ ಗಾಂಧಿ 16, ರಾಜೀವ್  ಗಾಂಧಿ 17ವರ್ಷ ಆಡಳಿತ ನಡೆಸಿದ್ದಾರೆ. ಇಂದು ಸೋನಿಯಾ ರಾಜಸ್ತಾನಕ್ಕೆ ಹೋಗಿ ರಾಜ್ಯ ಸಭೆ ಮೆಂಬರ್, ರಾಹುಲ್ ಗಾಂಧಿ ಕೇರಳ ಹೋಗಿ ಸಂಸದ. ಕಾಂಗ್ರೆಸ್ ಈ ಸ್ಥಿತಿಗೆ ಬರಲು ಕಾರಣ ಯಾರು ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಒಡೆಯರನ್ನು ಸೋಲಿಸಲು ಸಾಧ್ಯವಾ? : 
ಸಾಲಮನ್ನಾ ಮಾಡಲು ಮನಮೋಹನ್ ಸಿಂಗ್ ನಬಾರ್ಡ್ ಒಪ್ಪಲಿಲ್ಲ. ತೆರಿಗೆ ಸಂಗ್ರಹಿಸಿ ಸಾಲ ವಾಪಾಸ್ ನೀಡ್ತೀವಿ ಅಂದ್ರು ಒಪ್ಪಲಿಲ್ಲ. ಇಂದು ಆಳುವ ಮಹಾನುಭಾವರು ಬಿಡಿ, ಕಾರ್ಪೋರೇಷನ್ ಎಲ್ಲಾ ಅವರ ಕೈನಲ್ಲೇ  ಇದೆ ಎಂದು ಪರೋಕ್ಷವಾಗಿ ಡಿ.ಕೆ.ಶಿ ವಿರುದ್ದ ವಾಗ್ದಾಳಿ ನಡೆಸಿದರು.ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರು ಬಹಳ ನಿಪುಣರು. ಬಹಳ ಅನುಭವವಿದೆ. ಈ ರಾಜ್ಯ ಹೇಗೆ ದುರ್ಬಳಕೆ ಆಯ್ತು 10ತಿಂಗಳಲ್ಲಿ ಅವರು ನಡೆಸಿದ ಅವ್ಯವಹಾರ, ಅಕ್ರಮ ಎಷ್ಟು, ಜನ ಅವರ ಗ್ಯಾರೆಂಟಿಗಳ ಬಗ್ಗೆ ನಂಬುದ್ರು ಇಂದು ರಾಜ್ಯದ ಅಭಿವೃದ್ಧಿ ಏನಾಗಿದೆ.

ಗ್ಯಾರೆಂಟಿ ಜನರಿಗೆ ತಲುಪಿದ್ಯೋ ಇಲ್ವೋ ಅಂತ ಚೆಕ್ ಮಾಡಕ್ಕೆ ಮತ್ತೋರ್ವ ಚೇರಮನ್ ಗ್ಯಾರೆಂಟಿ ಮೇಲೆ ಮತ್ತೊಂದು ಗ್ಯಾರೆಂಟಿ ಇದು ಎಂತಹ ಅದ್ಬುತವಾದ ಆಡಳಿತ ಎಂದು ಲೇವಡಿ ಮಾಡಿದರು.ಜನ 136 ಸ್ಥಾನ ನೀಡಿದ್ದಾರೆ. ಸಿದ್ದರಾಮಯ್ಯ ಹಣಕಾಸು ಸಚಿವ ಆಗಿದ್ದಾಗ 113 ಸ್ಥಾನ. ನಾನು ಒಬ್ಬರಿಗೂ ಒಂದು ಸ್ಥಾನ  ನೀಡಲಿಲ್ಲ. ಯಾರ ಮೆಚ್ಚಿಸಲು ಮಾಡಿದ್ದೀರಾ ಓಡಾಡಲು ಕಾರು,  ಪೆಟ್ರೋಲ್ ಕೊಟ್ಟೀದ್ದೀರಾ, ಕ್ಷೇತ್ರ ಜನರಿಗೆ ಹಣ ನೀಡಿದ್ದೀರಾ  ಎಂದ ಅವರು ಮೈಸೂರಿನಲ್ಲಿ ಒಡೆಯರನ್ನು ಸೋಲಿಸಲು ಸಾಧ್ಯವಾ? ಒಡೆಯರ್ ಅಜ್ಜ ಮಾಡಿದ ಕೆಲಸವನ್ನ ಜನ ಮರೆತಿಲ್ಲ ಮೈಸೂರಿನ ಜನತೆ ಆನಂದವಾಗಿ ಇದ್ದಾರೆ. ಗೆಲ್ಲಿಸುತ್ತಾರೆ ಎಂದರು.

9 ವರ್ಷದ ಹುಡುಗಿಯನ್ನ ತೆಗೆದುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕಾ?
ಡಿಕೆಶಿ ವಿರುದ್ದ ಆಸ್ತಿ ಬಾಂಬ್ ಆರೋಪ ಮಾಡಿದ ಹೆಚ್‌ಡಿಡಿ. 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿದ್ರಲ್ಲಾ ಅದಕ್ಕೆ ಡಿ.ಕೆ.ಶಿವಕುಮಾರ್ ಅವರ ಕೈಯನ್ನ ಬಲಪಡಿಸಬೇಕಾ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿರುವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ಕೈಯನ್ನ ಏಕೆ ಬಲಪಡಿಸಬೇಕು...? ಏಕೆ... 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡರಲ್ಲಾ ಅದಕ್ಕಾ ಎಂದು ಪ್ರಶ್ನಿಸಿದ್ದಾರೆ.

ರಾಮನಗರದ ಬಿಡದಿ ಬಳಿ ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು.  ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ ಅವರು ಒಂದು ಐಟಿಯನ್ನ ಸ್ಥಾಪನೆ ಮಾಡಿದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಮಾಡುತ್ತಾರೆ. ಆಮೇಲೆ ಅವರ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಡಿ ಇಡುತ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಧಮ್ಕಿ ಹಾಕುತ್ತಾರೆ. ಆ ತಾಯಿ ಎಲ್ಲಾ ಬರೆದುಕೊಡು, ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಆಕೆ ಗಂಡನ ಕಾಲು ಹಿಡಿಯುತ್ತಾಳೆ. 

ಡಿಕೆಶಿ ವಿರುದ್ದದ ದಾಖಲೆ ನನ್ನ ಬಳಿ ಇದೆ : 
ನನ್ನ ಬಳಿ ದಾಖಲೆ ಇದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲಿಗೆ ಹೋದಾಗ, ಆ ಮಗುವನ್ನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಆ ಮಗುವನ್ನ ಒಳಗೆ ತೆಗೆದುಕೊಂಡು ಹೋಗುತ್ತಾರೆ.ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತ ಲಾಯರ್ ತಂದು ಕೊಟ್ಟರು. ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲೀಸ್ಟ್ ನಲ್ಲಿ ಇಲ್ಲ... ಈ ಕರ್ನಾಟಕದ ಸಹವಾಸ ಸಾಕು ಅಂತಾರೆ. ನನಗೆ ಅವರ ಹೆಸರು ಮರೆತು ಹೋಗಿದೆ. ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಮೇಲೆ, ಹೇ... ಇದನ್ನ ಹೊರಗೆ ಹೇಳುದ್ರೆ ಏನಾಗುತ್ತೆ ಗೊತ್ತಾ ಅಂತ ಕಬ್ಬನ್ ಪಾರ್ಕ್ ನಲ್ಲಿ ಅವರಿಗೆ ಹೆದರಿಸುತ್ತಾರೆ. ಅವರಿಗೆ ಚೆಕ್ ಕೊಟ್ಟಿದ್ದರು. 16 ಮತ್ತು 4 ಲಕ್ಷಕ್ಕೆ. ಆದರೆ, ಎರಡೂ ಲ್ಯಾಪ್ಸ್ ಆಗುತ್ತದೆ.ಅವರು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಗೆಲ್ಲುತ್ತಾರೆ. ಡಿಕೆಶಿ ಅವರಿಗೆ ಮುಖ ಭಂಗ ಆಗುತ್ತೆ. ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋದ್ರು ಮುಖಭಂಗ ಆಯ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ. ಅವರು, ಸೋನಿಯಾ, ರಾಹುಲ್ ಅವರಿಗೆ ಬಹಳ ಸಮೀಪ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪದ ವಾಗ್ದಾಳಿ ನಡೆಸಿದ್ದಾರೆ

click me!