3-6ನೇ ಕ್ಲಾಸ್ ಸಿಬಿಎಸ್‌ಇ ಪಠ್ಯಕ್ರಮ ಬದಲಿಕೆಗೆ ಸಮ್ಮತಿ: ಹೊಸತು ಬರುವ ಶೈಕ್ಷಣಿಕ ವರ್ಷವೇ ಜಾರಿಗೆ ಆದೇಶ
ಇದೇ ಏ.1ರಿಂದ ಆರಂಭ ಆಗಲಿರುವ 2024 -25ನೇ ಸಾಲಿನ 3ರಿಂದ 6ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಬದಲಾಗಲಿದೆ. ಶೀಘ್ರದಲ್ಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯು (ಎನ್‌ಇಆರ್‌ಟಿ) ಈ ಪಠ್ಯ ಬಿಡುಗಡೆ ಮಾಡಲಿದೆ ಎಂದು ಸಿಬಿಎಸ್‌ಇ ಅಧಿಕಾರಿಗಳು ಹೇಳಿದ್ದಾರೆ.
ನವದೆಹಲಿ (ಮಾ.24): ಇದೇ ಏ.1ರಿಂದ ಆರಂಭ ಆಗಲಿರುವ 2024 -25ನೇ ಸಾಲಿನ 3ರಿಂದ 6ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಬದಲಾಗಲಿದೆ. ಶೀಘ್ರದಲ್ಲೇ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯು (ಎನ್‌ಸಿಇಆರ್‌ಟಿ) ಈ ಪಠ್ಯ ಬಿಡುಗಡೆ ಮಾಡಲಿದೆ ಎಂದು ಸಿಬಿಎಸ್‌ಇ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ 4ತರಗತಿಗಳನ್ನು ಹೊರತುಪಡಿಸಿದರೆ ಮಿಕ್ಕಯಾವ ತರಗತಿಗಳಿಗೂ ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬದಲಾದ ಪಠ್ಯಕ್ಕೆ ಹೊಂದಿಕೊಳ್ಳಲು 3ರಿಂದ 6ನೇ ಕ್ಲಾಸಿನವರೆಗೆ ಬ್ರಿಜ್ ಕೋರ್ಸು ಹಮ್ಮಿಕೊಳ್ಳಲಾಗುವುದು. ಪಠ್ಯ ಪುಸ್ತಕಗಳ ರವಾನೆ ಇನ್ನು ಆರಂಭವಾಗಲಿದೆ. ಹೀಗಾಗಿ ಶಿಕ್ಷಕರು ಹೊಸ ಪಠ್ಯವನ್ನೇ ಬೋಧಿಸಬೇಕು. ಕಳೆದ ವರ್ಷದ ಪಠ್ಯ ಬೋಧಿಸಕೂಡದು ಎಂದೂ ಅವರು ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅನುಷ್ಠಾನದ ಭಾಗವಾಗಿ 18 ವರ್ಷಗಳ ನಂತರ ಕಳೆದ ವರ್ಷ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಅಡಿಯಲ್ಲಿ ಶಿಕ್ಷಣ ಸಚಿವಾಲಯವು ಪಠ್ಯಕ್ರಮದ ಬದಲಾವಣೆಗೆ ಸೂಚಿಸಿತ್ತು.
ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ: ಕೇಜ್ರಿವಾಲ್ ಬಗ್ಗೆಅಣ್ಣಾ ಹಜಾರೆ ವ್ಯಂಗ್ಯ
ಪುಸ್ತಕ ನೋಡಿ ಪರೀಕ್ಷೆ ಬರೆವ ಪ್ರಯೋಗ ಶುರು: ವಿದ್ಯಾರ್ಥಿಗಳು ಪಠ್ಯಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಒಪನ್ ಬುಕ್- ಎಕ್ಸಾಂ (ತೆರೆದ ಪುಸ್ತಕ) ಅನ್ನು ಈ ವರ್ಷ ಸಿಬಿಎಸ್‌ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲು ನಿರ್ಧರಿಸಲಾಗಿದೆ. ದೇಶವ್ಯಾಪಿ, ಆಯ್ದ ಶಾಲೆಗಳಲ್ಲಿ ಮಾತ್ರವೇ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನ ಅನ್ವಯ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ಆದರೆ ಇದನ್ನು ಬೋರ್ಡ್ ಎಕ್ಸಾಂ ಅಂದರೆ ಅಂತಿಮ ಪರೀಕ್ಷೆ ವೇಳೆ ಬಳಕೆ ಮಾಡುವುದಿಲ್ಲ. ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯಾವ ವಿಷಯ?: 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಮತ್ತು 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ಆಯೋಜಿಸಲಾಗುವುದು.
ಕಾರಣ ನೀಡದೆ 4 ಮಸೂದೆಗಳಿಗೆ ಅಂಕಿತ ಬಾಕಿ: ರಾಷ್ಟ್ರಪತಿ ಮುರ್ಮು ವಿರುದ್ಧವೇ ಕೇರಳ ಸರ್ಕಾರ ಸುಪ್ರೀಂಗೆ ಅರ್ಜಿ!
ಓಪನ್ ಎಕ್ಸಾಂ ಏಕೆ?: ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಮಯ, ವಿದ್ಯಾರ್ಥಿಗಳ ಯೋಚನಾ ಶಕ್ತಿ, ವಿಶ್ಲೇಷಣಾ ಶಕ್ತಿ, ಗಂಭೀರ ಮತ್ತು ರಚನಾತ್ಮಕ ಆಲೋಚನೆ, ಸಮಸ್ಯೆ ಬಗೆಹರಿಸುವ ಸಾಮರ್ಥ್ಯ, ಈ ಮಾದರಿಯ ಲಾಭಗಳೇನು, ನಷ್ಟಗಳೇನು? ಇದರ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಅಭಿಪ್ರಾಯ ಏನು ಎಂಬುದರ ಅಧ್ಯಯನ ನಡೆಸಲು ಇಂಥ ಪರೀಕ್ಷೆ ಆಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.