ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧಿಸಿದರೆ ಪಕ್ಷಕ್ಕೆ ಸೋಲು ಖಚಿತ ಎಂದು ಕಾಂಗ್ರೆಸ್ ಮುಖಂಡರಾದ ಜಿ.ಟಿ. ನಾಯ್ಕ ಅಭಿಮಾನಿ ಬಳಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ (ಮಾ.21): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧಿಸಿದರೆ ಪಕ್ಷಕ್ಕೆ ಸೋಲು ಖಚಿತ ಎಂದು ಕಾಂಗ್ರೆಸ್ ಮುಖಂಡರಾದ ಜಿ.ಟಿ. ನಾಯ್ಕ ಅಭಿಮಾನಿ ಬಳಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ ನಾಯ್ಕ, ಉತ್ತರಕನ್ನಡ ಲೋಕಸಭೆ ಕ್ಷೇತ್ರಕ್ಕೆ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸಂಭಾವ್ಯ ಅಭ್ಯರ್ಥಿ ಎಂದು ಕೇಳಿಬರುತ್ತಿದೆ. ಆದರೆ, ಅವರಿಗೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಜತೆಗೆ ಚುನಾವಣೆಯ ದಿನಾಂಕ ನಿಗದಿಯಾದ ಬಳಿಕವೂ ಜಿಲ್ಲೆಯ ಯಾವುದೇ ನಾಯಕರು ಹಾಗೂ ಬ್ಲಾಕ್ ಅಧ್ಯಕ್ಷರನ್ನು ಸಂಪರ್ಕಿಸಿಲ್ಲ. ಹೀಗಾಗಿ ಜಿಲ್ಲೆಯವರೇ ಆಗಿರುವ ಹಾಗೂ ಜನರ ಸಂಪರ್ಕದಲ್ಲಿರುವ ಜಿ.ಟಿ ನಾಯ್ಕ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
undefined
ಚುನಾವಣೆ ಪ್ರಚಾರ ಮಾಡುತ್ತೇನೆ, ಯಾವ ಪಕ್ಷ ಎಂದು ಹೇಳಲಾಗದು: ಶಾಸಕ ಹೆಬ್ಬಾರ
ಕ್ಷೇತ್ರದಲ್ಲಿ ಕಿತ್ತೂರು ಖಾನಾಪುರವನ್ನು ಹೊರತುಪಡಿಸಿದರೆ ಜಿಲ್ಲೆಯ ಮತದಾರರೇ ಹೆಚ್ಚು. ಮತದಾರರಿಗೆ ಅಭ್ಯರ್ಥಿಯ ಬಗ್ಗೆ ತಿಳಿಯದಿದ್ದರೆ ಸ್ಪರ್ಧೆ ಮಾಡುವುದು ಕಷ್ಟ. ಜತೆಗೆ ನಿಂಬಾಳ್ಕರ್ ಅವರು ಜಿಲ್ಲೆಯ ಯಾವುದೇ ಸಮಸ್ಯೆಗಳ ಬಗ್ಗೆ ಸ್ಪಂದಿಸಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸಮಯದಲ್ಲಿ, ಮಂಗನ ಕಾಯಿಲೆ ಹಾಗೂ ಪ್ರವಾಹದಂತಹ ಪರಿಸ್ಥಿತಿ ಇದ್ದಾಗಲೂ ಸಕ್ರಿಯರಾಗಿರಲಿಲ್ಲ. ಅದಾಗಿಯೂ ಅವರೇ ಹೇಳಿದಂತೆ ಅವರು ಆಕಾಂಕ್ಷಿಯಲ್ಲ. ಪಕ್ಷಕ್ಕೆ ಅನಿವಾರ್ಯವಾದಾಗ ಮಾತ್ರ ಸ್ಪರ್ಧೆ ಮನಾಡುತ್ತೇನೆ ಎಂದಿದ್ದಾರೆ.
ಸಂವಿಧಾನ ಉಳಿಸಲು ಕೋಮುವಾದಿ ಬಿಜೆಪಿಯನ್ನ ಸೋಲಿಸಿ: ಮುಖ್ಯಮಂತ್ರಿ ಚಂದ್ರು ಕರೆ
ಅಷ್ಟಾಗಿಯೂ ಪಕ್ಷವು ನಿಂಬಾಳ್ಕರ್ ಅವರಿಗೇ ಟಿಕೆಟ್ ನೀಡಿದರೆ ನಮ್ಮ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಎನ್‌ಎಸ್‌ಯುಐನ ಅಧ್ಯಕ್ಷ ವಿಶ್ವ ಗಜಾನನ ಗೌಡ, ಜಿ.ಟಿ ನಾಯ್ಕ ಅಭಿಮಾನಿ ಬಳಗದ ಶಬೀರ್ ಅಹಮದ್, ಅನಿಲ ಕೊಠಾರಿ, ಶ್ರೀಕಾಂತ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.