'ನಾನು ಪೋತಪ್ಪ ನಾಯಕನೇ ಕಣೋ'; ತಿಪ್ಪಾರೆಡ್ಡಿ ಹೇಳಿಕೆಗೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ತಿರುಗೇಟು!

By Ravi Janekal  |  First Published Mar 31, 2024, 7:31 PM IST

ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದವನು. ಸೀಮೆ ಎಣ್ಣೆ, ಸಕ್ಕರೆ, ಅಕ್ಕಿ ಮಾರಾಟ ಮಾಡಿಕೊಂಡು ಬೆಳೆದವನು. ಆದರೆ ನಿನ್ನ ವಿರುದ್ಧ ಗುತ್ತಿಗೆದಾರರು ಪರ್ಸೆಂಟೇಜ್ ಆರೋಪ ಮಾಡಿದರು, ಶೌಚಾಲಯದ ಹಣದಲ್ಲೂ ಪರ್ಸೆಂಟೇಜ್ ಪಡೆದಿರೋ ಭ್ರಷ್ಟ ನೀನು ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಶಾಸಕ ಎಂ ಚಂದ್ರಪ್ಪ ವಾಗ್ದಾಳಿ ನಡೆಸಿದರು.


ಚಿತ್ರದುರ್ಗ (ಮಾ.31): ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದವನು. ಸೀಮೆ ಎಣ್ಣೆ, ಸಕ್ಕರೆ, ಅಕ್ಕಿ ಮಾರಾಟ ಮಾಡಿಕೊಂಡು ಬೆಳೆದವನು. ಆದರೆ ನಿನ್ನ ವಿರುದ್ಧ ಗುತ್ತಿಗೆದಾರರು ಪರ್ಸೆಂಟೇಜ್ ಆರೋಪ ಮಾಡಿದರು, ಶೌಚಾಲಯದ ಹಣದಲ್ಲೂ ಪರ್ಸೆಂಟೇಜ್ ಪಡೆದಿರೋ ಭ್ರಷ್ಟ ನೀನು ಎಂದು ಚಿತ್ರದುರ್ಗದ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ವಿರುದ್ಧ ಬಿಜೆಪಿ ಶಾಸಕ ಎಂ.ಚಂದ್ರಪ್ಪ ತೀವ್ರ ವಾಗ್ದಾಳಿ ನಡೆಸಿದರು.

ನಿನ್ನೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ಜಿ.ಹೆಚ್ ತಿಪ್ಪಾರೆಡ್ಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. "ಇವನಿಗೆ ಹೆದರಿ ವರಿಷ್ಠರ ಬಳಿ ಮಾಹಿತಿ ಹಂಚಿಕೊಳ್ಳದೆ ಇರಲು ಇವನೇನು ಫೋತಪ್ಪ ನಾಯಕನೇ? ಇವನ ಮಗನಿಗೆ ಟಿಕೆಟ್ ತಪ್ಪಿಸಲು ಅವನೇನು ದೊಡ್ಡ ನಾಯಕನೇ ಎಂದಿದ್ದ ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿಕೆ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ,'ನಾನು ಪೋತಪ್ಪ ನಾಯಕನೇ ಕಣೋ' ಎಂದು ತಿರುಗೇಟು ನೀಡಿದರು.

Tap to resize

Latest Videos

undefined

ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ; ಆದ್ರೂ ಜನ ಮೋದಿ ಮೋದಿ ಅಂತಾ ಕೂಗ್ತಾರೆ: ಎಚ್‌ಸಿ ಮಹದೇವಪ್ಪ ಕಿಡಿ

ನಿನ್ನ ಪರ್ಸೆಂಟೇಜ್ ಕಳಪೆ ಕಾಮಗಾರಿ ಕಾರಣದಿಂದ ದುರ್ಗದ ಡಿವೈಡರ್ ತೆರವುಗೊಳಿಸಿದ್ದಾರೆ. ಪಾರ್ಕ್‌ಗಳ ಜಾಗವನ್ನೂ ಸಹ ಬಿಡದೇ ನೀನು ನುಂಗಿ ಹಾಕಿರುವ ಆರೋಪಗಳಿವೆ. ಅದರೆ ನನ್ನ ವಿರುದ್ಧ ನಿನ್ನ ಮೇಲಿದ್ದಂಥ ಆರೋಪಗಳು ಇಲ್ಲ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಪರ್ಸೆಂಟೇಜ್ ಲೂಟಿ ಮಾಡಿರೋದು ನೀನು ಎಂದು ವಾಗ್ದಾಳಿ ನಡೆಸಿದರು.

ಆ ಪೋತಪ್ಪನಿಗೆ ಹೆದರೋ ಜಾಯಮಾನ ನನ್ನದಲ್ಲ: ಶಾಸಕ ಎಂ.ಚಂದ್ರಪ್ಪ ವಿರುದ್ಧ ಮಾಜಿ ಶಾಸಕ ತಿಪ್ಪಾರೆಡ್ಡಿ ವಾಗ್ದಾಳಿ

ಕೆಲ್ಸಕ್ಕೆ ಬಾರದೆ ಇರುವವ, ಕ್ಯಾಸಿನೊದವನ ಮುಂದೆ ನೀನು ಸೋತೆ. ಅವನಿಗೆ ಗೆಲ್ಲಿಸಬೇಕೆಂದು ಚಿತ್ರದುರ್ಗದ ಜನ ಮತ ಹಾಕಿಲ್ಲ. ನಿನಗೆ ಸೋಲಿನ ರುಚಿ ತೋರಿಸಬೇಕೆಂದು ಜನ ಅವನ ಗೆಲ್ಲಿಸಿದ್ದಾರೆ ಎಂದು ಚಿತ್ರದುರ್ಗ ಕೈ ಶಾಸಕ ಕೆ ಸಿ ವಿರೇಂದ್ರ ಹೆಸರು ಪ್ರಸ್ತಾಪಿಸದೆ ಟಾಂಗ್ ನೀಡಿದರು. ತಿಪ್ಪಾರೆಡ್ಡಿಗೆ ಟೀಕಿಸುವ ಭರದಲ್ಲಿ ಕೈ ಶಾಸಕ ಕೆ ಸಿ ವಿರೇಂದ್ರ ಬಗ್ಗೆಯೂ ವಾಗ್ದಾಳಿ ನಡೆಸಿದರು.

click me!