
ಬೆಂಗಳೂರು (ಮಾ.27): ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಸಚಿವ ಕೆ.ಹೆಚ್.ಮುನಿಯಪ್ಪ ಅವರ ಅಳಿಯ ಕೆ.ಜಿ. ಚಿಕ್ಕಪೆದ್ದಣ್ಣ ಅವರಿಗೆ ನೀಡುತ್ತಿರುವ ಬೆನ್ನಲ್ಲಿಯೇ ಮಾಜಿ ರಮೇಶ್ ಕುಮಾರ್ ಬಣದ ನಾಯಕರಾದ ಉನ್ನತ ಶಿಕ್ಷಣ ಡಾ.ಎಂ.ಸಿ.ಸುಧಾಕರ್ ಸೇರಿದಂತೆ 5 ಶಾಸಕರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ.
ವಿಧಾನಸಭಾ ಕಾರ್ಯದರ್ಶಿ ಕಚೇರಿಗೆ ಭೇಟಿಕೊಟ್ಟ ಸಚಿವರು ಹಾಗೂ ಶಾಸಕರು ಅಲ್ಲಿ ರಾಜೀನಾಮೆ ಸಲ್ಲಿಕೆಯ ಮಾದರಿಗಳನ್ನು ಸ್ವೀಕರಿಸಿ ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ತೆರಳಿ ಅಲ್ಲಿಂದ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮನೆಗೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಹೋಗಲು ವಿಮಾನವನ್ನೂ ಸಹ ಬುಕ್ ಮಾಡಿದ್ದಾರೆ. ಈಗ ಮೂವರು ಶಾಸಕರು ವಿಧಾನ ಸಭೆಯ ಕಾರ್ಯದರ್ಶಿ ಕೊಠಡಿಯಲ್ಲಿ ಸಂಪೂರ್ಣ ರಾಜೀನಾಮೆ ಸಲ್ಲಿಕೆಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.
ಲೋಕಸಭೆ ಚುನಾವಣೆ 2024: ಪುತ್ರನ ಪರ ಮತಯಾಚನೆಗೆ ಆಟೋ ಏರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ರಾಜಿನಾಮೆ ಸಲ್ಲಿಕೆ ಬೆದರಿಕೆ ಒಡ್ಡುತ್ತಿರುವ ನಾಯಕರು:
ಸಂಧಾನ ವಿಫಲವಾಗಿ ಕೈ ಬಿಟ್ಟಿರುವ ಸ್ಥಳೀಯ ನಾಯಕರು:
ಲೋಕಸಭೆ ಚುನಾವಣೆ ದಿನಗಣನೆ ಬೆನ್ನಲ್ಲೇ ಕೋಲಾರ ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಕೈ ಮೀರಿದೆ. ಈಗಾಗಲೇ ಇದರಿಂದ ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪಕ್ಷದಲ್ಲಿನ ಬಣ ರಾಜಕೀಯದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಕೆ.ಹೆಚ್. ಮುನಿಯಪ್ಪ ಸೋತಿದ್ದರು. ಇದರ ಬಳಿಕವೂ ಎರಡು ಬಣಗಳ ನಡುವಿನ ವೈಷಮ್ಯ ಮುಂದುವರಿದಿದ್ದು ಈಗ, 2024ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರೆದಿದೆ. ಇದರಿಂದ ಪಕ್ಷದ ಹಿತಕ್ಕಿಂದಲೂ ತಮ್ಮ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಇದರಿಂದದಾಗಿ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಬಣ ರಾಜಕೀಯ ಹೈಕಮಾಂಡ್ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಇಬ್ಬರು ನಾಯಕರ ನಡುವಿನ ಸಂಧಾನವೂ ವಿಫಲವಾಗಿದ್ದು, ರಾಜ್ಯದ ಕೈ ನಾಯರು ಸುಮ್ಮನಾಗಿದ್ದರು.
ಗ್ಯಾರಂಟಿ ನೀಡಿದ್ದ ಶಾಸಕ ರಿಜ್ವಾನ್ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ
ಹೊಸ ಅಭ್ಯರ್ಥಿ ಹುಡುಕಾಟ: ಕೋಲಾರದ ಶಾಸಕರು ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದ ಸಚಿವ ಎಂ.ಸಿ. ಸುಧಾಕರ್ ಮತ್ತು ನಾಲ್ವರು ಶಾಸಕರಿಗೆ ಮಂಡ್ಯದ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಕರೆ ಮಾಡಿ ರಾಜೀನಾಮೆ ಕೊಡದಂತೆ ಸೂಚನೆ ನೀಡಿದ್ದಾರೆ. ಈಗಾಗಲೇ, ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ಸಂಧಾನ ಸಭೆಯನ್ನು ನಡಟೆಸಲಾಗಿದ್ದರೂ, ಯಾರೊಬ್ಬರೂ ಮಾತನ್ನು ಕೇಳದೇ ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದರು. ಆದರೆ, ಈಗ ಅಸಮಾಧಾನಿಕ ಕೋಲಾರ ನಾಯಕರೊಂದಿಗೆ ತಾವು ಹೊಸ ಅಭ್ಯರ್ಥಿ ಹುಡುಕಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಕೋಲಾರ ನಾಯಕರು ರಾಜೀನಾಮೆ ಸಲ್ಲಿಕೆಯನ್ನು ತಡೆ ಹಿಡಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.