ಬಾದಾಮಿಯಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಸ್ಥಳೀಯರ ಒತ್ತಡ: ಜಮೀರ್ ಅಹಮದ್‌

By Sathish Kumar KH  |  First Published Nov 19, 2022, 3:30 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಬಾದಾಮಿಯ ಜನತೆ ಮತ್ತು ಕಾಂಗ್ರೆಸ್‌ ಮುಖಂಡರು ಒತ್ತಡ ಹೇರುತ್ತಿದ್ದು, ಈ ವಿಚಾರವನ್ನು ನಾನು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ಮಾಜಿ ಸಚಿವ ಜಮೀರ್ ಅಹಮದ್‌ ಹೇಳಿದ್ದಾರೆ.


ಬಾಗಲಕೋಟೆ (ನ.19): ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಆಗದಿರುವ ಅಭಿವೃದ್ಧಿ ಕಾರ್ಯಗಳು, ಕಳೆದ 5 ವರ್ಷಗಳಿಂದ ಮಾಡಲಾಗಿದೆ. ಹೀಗಾಗಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಬಾದಾಮಿಯ ಜನತೆ ಮತ್ತು ಕಾಂಗ್ರೆಸ್‌ ಮುಖಂಡರು ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹಮದ್‌ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ (Badami) ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿರುವ ಜಮೀರ್‍‌ ಅಹಮದ್‌ (Jameer Ahmed) ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಬಾದಾಮಿಯಿಂದಲೇ ಸ್ಫರ್ಧೆಗೆ ಒತ್ತಡ ಹೇರುವಂತೆ ಜನರು ನನಗೆ ಮನವಿ (Request) ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಬಾದಾಮಿ ದೂರವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಬಾದಾಮಿ ಕ್ಷೇತ್ರದ ಜನತೆಯೇ ಹೆಲಿಕಾಪ್ಟರ್ (Helicopter) ಕೊಡಿಸುತ್ತೇವೆ ಇಲ್ಲಿಯೇ ಬಂದು ಸ್ಪರ್ಧಿಸಿ ಎಂದು ಕರೆಯುತ್ತಿದ್ದಾರೆ. ಜನರ ಒತ್ತಾಯದ (Pressure) ಮುಂದೆ ಏನು ಮಾಡುವುದಕ್ಕೆ ಆಗುವುದಿಲ್ಲ. ಇಲ್ಲಿರುವ ಜನರ ಅಭಿಮತವನ್ನ ಸಿದ್ದರಾಮಯ್ಯನವರ ಮುಂದೆ ಹೇಳುತ್ತೇನೆ. ಬಾದಾಮಿಯಲ್ಲಿ 50 ವರ್ಷದಲ್ಲಿ ಮಾಡಲಾಗದ ಸಾಧನೆಯನ್ನು ಈಗ 5 ವರ್ಷದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ, ಬಾದಾಮಿ ಕ್ಷೇತ್ರದ ಜನರು ಪಕ್ಷಾತೀತ (Non-partisan) ವಾಗಿ ಸಿದ್ದರಾಮಯ್ಯ ಅವರು ನಮ್ಮ ಕ್ಷೇತ್ರಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದರು.

Tap to resize

Latest Videos

undefined

ಸಿದ್ದರಾಮಯ್ಯ ಬಾದಾಮಿ ‘ಕೈ’ ಬಿಟ್ರಾ?

ಚಿಮ್ಮನಕಟ್ಟಿ ಕುಟುಂಬದ ವಿರೋಧವಿಲ್ಲ: ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಕುಟುಂಬದ (Chimmanakatti Family) ವಿರೋಧ ಇಲ್ಲ. ಅವರೂ ಕೂಡ ಬಾದಾಮಿ ಕ್ಷೇತ್ರದಿಂದಲೇ ನಿಲ್ಲುವಂತೆ ನಮ್ಮ ಕುಟುಂಬದಿಂದ ಒತ್ತಾಯ ಮಾಡುತ್ತಿರುವುದಾಗಿ ಚಿಮ್ಮನಕಟ್ಟಿ ಅವರ ಪುತ್ರ ರಾಜು (ಭೀಮಸೇನ) ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗಾಗಿ ಚಿಮ್ಮನಕಟ್ಟಿ ಅವರು ಬಾದಾಮಿ ವಿಧಾನ ಕ್ಷೇತ್ರ (Assembly Constituency) ಬಿಟ್ಟು ಕೊಟ್ಟಿದ್ದು ನಿಜ. ಆದರೆ, ಅವರ ದುರಾದೃಷ್ಟ (Bad luck) ಎಂದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದಿದ್ದರೆ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುತ್ತಿತ್ತು. ಸಿದ್ದರಾಮಯ್ಯ ಅವರಿಗೆ ಯಾರು ಸಹಾಯ (Help) ಮಾಡಿದ್ದಾರೋ, ಅವರೆಲ್ಲರಿಗೂ ಪುನಃ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

Banaras: ಬನಾರಸ್‌ ಸಿನಿಮಾ ನೋಡಿದ ಶಾಸಕ ಜಮೀರ್ ಖಾನ್: ಮಗನ ಆಕ್ಟಿಂಗ್‌ಗೆ ಫಿದಾ

ಬಾದಾಮಿಯಲ್ಲೂ ಗುಂಪುಗಾರಿಕೆ ಇದೆ: ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ (JDS), ಬಿಜೆಪಿ (BJP) ಎಲ್ಲ ಪಕ್ಷಗಳಿಂದಲೂ ಸೇರಿ ಅಭಿವೃದ್ಧಿ ಕೆಲಸಗಳು (Devolopment work) ಆಗುತ್ತಿವೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರಾಗಿದ್ದಾರೆ. ಜನರು ಹೆಚ್ಚಾಗಿ ಒತ್ತಡ ಹೇರುತ್ತಿರುವುದರಿಂದ ನಾನು ಕೂಡ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ನಾಯಕರ ಗುಂಪುಗಾರಿಕೆ (Factionalism) ಇರುವುದು ನಿಜ. ಎಲ್ಲ ಪಕ್ಷಗಳಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ (Disagreement) ಇರುವುದು ಸಹಜ. ಆದರೆ, ಸಿದ್ದರಾಮಯ್ಯ ವಿಚಾರ ಬಂದಲ್ಲಿ ಯಾವ ಭಿನ್ನಾಭಿಪ್ರಾಯವೂ ಇರುವುದಿಲ್ಲ ಎಂದು ತಿಳಿಸಿದರು.

click me!