ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಫೆ.18): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಅವರು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಹಳ ಬೇಗ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿವೆ. ಆದರೆ ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು,ಕೆಪಿಸಿಸಿ ಕಾರ್ಯಾಧ್ಯಕ್ಷರು ಆ ಕುರಿತು ಮಾಹಿತಿ ನೀಡುತ್ತಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಸಲೀಮ್ ಅಹ್ಮದ್ ಅವರನ್ನು ನೀವೇ ಕೇಳಿ. ಟಿಕೆಟನ್ನು ಅವರು ಎಲ್ಲರೂ ಸೇರಿಕೊಂಡು ಫೈನಲ್ ಮಾಡುತ್ತಾರೆ ಎಂದರು. ನಾನು ಇಲ್ಲಿ ಕೇವಲ ಅವರಿಗೆ ಅಸಿಸ್ಟ್ ಮಾಡಲು ಮಾತ್ರ ಇದ್ದೇನೆ. ಆದರೆ ಟಿಕೆಟ್ ಫೈನಲ್ ಮಾಡುವುದು ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ಲೀಡರ್, ಕಾರ್ಯಾಧ್ಯಕ್ಷರು ಎಂದು ಸುರ್ಜೆವಾಲಾ ಹೇಳಿದರು.
undefined
ಮಾರ್ಚ್ ಮೊದಲ ವಾರ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕೊನೆಯ ಹಂತದಲ್ಲಿ ಸ್ಕ್ರೀನಿಂಗ್ ಕಮೀಟಿ ಆಗುತ್ತಿದ್ದು, ಮಾರ್ಚ್ ಮೊದಲ ವಾರದಲ್ಲಿ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೇಳಿದರು. ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಮಾರ್ಚ್ ಮೊದಲನೇ ವಾರದಲ್ಲಿ ಚುನಾವಣೆ ಘೋಷಣೆ ಆಗಲಿದ್ದು, ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ನಾವು 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ ಎಂದರು. ಮೊದಲ ಹಂತದ ಸ್ಕ್ರೀನಿಂಗ್ ಕಮೀಟಿ ಆಗಿದೆ. ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಒಂದು ಕಮೀಟಿ ಆಗುತ್ತೆ. ಅಲ್ಲಿಂದ ಅಂತಿಮ ತೀರ್ಮಾನ ಆಗುತ್ತದೆ ಎಂದು ಸಲೀಂ ಅಹ್ಮದ್ ಹೇಳಿದರು.
ರಾಜ್ಯ ಬಿಜೆಪಿ ಸರ್ಕಾರ ಲೂಟಿಗೆ ಮುಂದಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ
ಕೇವಲ ಪತ್ರದಲ್ಲಿ ಮಾತ್ರ ಈ ಬಜೆಟ್: ಸಿಎಂ ಬೊಮ್ಮಾಯಿ ಮಂಡನೆ ಮಾಡಿರುವ ಈ ರಾಜ್ಯ ಬಜೆಟ್ ಕೇವಲ ಪತ್ರದಲ್ಲಿ ಮಾತ್ರ ಇರುತ್ತೆ. ನಾವು ಬಂದ ಮೇಲೆ ಯೋಜನೆ ಜಾರಿಗೊಳಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ಬೊಮ್ಮಾಯಿ ಅವರ ರಾಜ್ಯ ಬಜೆಟ್ ಮಂಡನೆ ವಿಚಾರ ಪ್ರಸ್ತಾಪಿಸಿ, ಈ ಸರ್ಕಾರ , ಈ ಬಜೆಟ್ ೬೦ ದಿನಕ್ಕೆ ಮಾತ್ರ ಸೀಮಿತ ಎಂದರು. ನಮ್ಮ ಸರ್ಕಾರ ಮತ್ತ ಅಧಿಕಾರಕ್ಕೆ ಬರುತ್ತೆ. ನಮ್ಮದೇಯಾದ ಬೇರೆ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತೇವೆ. ಈಗಾಗಲೇ ಟೆಂಡರ್‌ನಲ್ಲಿ ಅವ್ಯವ್ಯಹಾರ ಸಹ ಆಗಿದೆ. 40 ಪರ್ಸೆಂಟ್ ಕಮಿಷನ್ ಸಹ ಹೊಡೆದಿದ್ದಾರೆ. ಜನರೆಲ್ಲಾ ಇಂದಿನ ಬಿಜೆಪಿ ಸರ್ಕಾರದ ಬಗ್ಗೆ ಭ್ರಮನಿರಸನ ಆಗಿದ್ದಾರೆ. ಈ ಸರ್ಕಾರದ ಆಯುಷ್ಯ ಮುಗಿದಿದೆ. 4 ವರ್ಷ ಆಡಳಿತ ಮಾಡೋ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದರು.
ಬಜೆಟ್ ಫಲಿತಾಂಶ ಝೀರೋ: ಬಿಜೆಪಿಯವರು ಬಜೆಟ್ ಮಾಡ್ತಾನೆ ಇದ್ದಾರೆ ಆದರೆ ಈ ಹಿಂದೆ ನೀಡಿದ ಘೋಷಣೆಗಳೇ ಫುಲ್ ಫಿಲ್ ಆಗಿಲ್ಲ. ಇದು ಹಾಗೇನೆ ಬಜೆಟ್ ಗಾತ್ರ 3 ಲಕ್ಷ ಕೋಟಿ ರೂಪಾಯಿ ಇರಬಹುದು. ಆದರೆ ಅಂತಿಮವಾಗಿ ಅದರ ಫಲಿತಾಂಶ ಝೀರೋ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ಮಾಧ್ಯಮಗಳ ಜೊತೆ ಬಜೆಟ್ ಕುರಿತಾಗಿ ಮಾತನಾಡಿದ ಅವರು, ಈಗೆಲ್ಲಾ ನೋಡಿದ್ದೀವಿ ಅಭಿವೃದ್ಧಿ ಶೂನ್ಯ ಇದೆ. ನೀರಾವರಿ ಯೋಜನೆ, ರಸ್ತೆಗಳಿರಬಹುದು ಸಾಕಷ್ಟು ಸಮಸ್ಯೆಗಳನ್ನು ಸರ್ಕಾರ ಎದುರಿಸುತ್ತಿದೆ. ಹಾಗಾಗಿ ಇದೊಂದು ಕಣ್ಣೊರೆಸುವ ತಂತ್ರ. ಇದೊಂದು ಕಿವಿಯಲ್ಲಿ ಹೂ ಇಡುವಂತಹ ಬಜೆಟ್. ಈ ಬಜೆಟ್ ಕೂಡಾ ಮೂಗಿಗೆ ತುಪ್ಪ ಹಚ್ಚುವ ಬಜೆಟ್. ಹಿಂದಿನ ಎರಡು ಬಜೆಟ್ ಅನುಷ್ಠಾನ ಆಗಿಲ್ಲ, ಇದೂ ಆಗಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ಸಿಎಂ ಬೊಮ್ಮಾಯಿ ಕೊಡುಗೆ ಏನಿಲ್ಲ: ಉತ್ತರ ಕರ್ನಾಟಕದವರು, ಸಿಎಂ ಇದ್ದರೂ ಉತ್ತರ ಕರ್ನಾಟಕಕ್ಕೆ ಏನೂ ಸಿಗಲಿಲ್ಲ ಎಂಬ ವಿಚಾರ ಪ್ರಸ್ತಾಪಿಸಿದ ಜಾರಕಿಹೊಳಿ ಅವರು ಇಲ್ಲ ಕೊಡಲಿಕ್ಕೆ ಸಾಧ್ಯ ಇಲ್ಲ. ಅವರು ಸ್ವಾತಂತ್ರ್ಯವಾಗಿರುವ ಸಿಎಂ ಅಲ್ಲ. ಯಾವುದೋ ಒಂದು ಸಂಘ ಸಂಸ್ಥೆ ಅವರನ್ನು ನಿಯಂತ್ರಣ ಮಾಡುತ್ತಿದೆ. ಆ ಪ್ರಕಾರ ಬಜೆಟ್ ಮಾಡಿದ್ದಾರಷ್ಟೆ ಎಂದರು.
ಮದ್ದೂರು ಗೆಲ್ಲಲು ಕಾಂಗ್ರೆಸ್ ಭರ್ಜರಿ ಪ್ಲಾನ್: ಡಿಕೆಶಿ ನೇತೃತ್ವದಲ್ಲಿ ಮಹತ್ವದ ಚರ್ಚೆ
ಆಣೆ ಪ್ರಮಾಣ ಒಳ್ಳೆಯ ಬೆಳವಣಿಗೆ: ಇನ್ನು ಮುಧೋಳದಲ್ಲಿ ಅಭ್ಯರ್ಥಿಗಳಿಂದ ಆಣೆ ಪ್ರಮಾಣ ಮಾಡಿಸಿದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಅವಶ್ಯಕತೆ ಇರಬಹುದು ಮಾಡಿರಬೇಕು. ಅದೊಂದು ಒಳ್ಳೆಯ ಬೆಳವಣಿಗೆ ಎಂದರು. ಕಾಂಗ್ರೆಸ್ ಒಳ ಹೊಡೆತದಿಂದ ಮುಧೋಳದಲ್ಲಿ ಬಿಜೆಪಿ ಗೆಲುವು ಕಾಣುತ್ತಿತ್ತು. ಈ ಸಾರಿ ಅದಕ್ಕೆ ಅವಕಾಶ ಇಲ್ಲ. ಮುಧೋಳದಲ್ಲಿ ಈ ಸಾರಿ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಸತೀಶ್ ಜಾರಕಿಹೊಳಿ ಹೇಳಿದರು.