ಕಾಂಗ್ರೆಸ್ಸಿಗರಿಗೆ ಇನ್ಮು ಮುಂದೆ ಚೆಂಡು ಹೂವೇ ಪರ್ಮನೆಂಟ್, ಇನ್ನು ಮುಂದೆ ಅವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡೇ ಓಡಾಡಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.17): ಕಾಂಗ್ರೆಸ್ಸಿಗರಿಗೆ ಇನ್ಮು ಮುಂದೆ ಚೆಂಡು ಹೂವೇ ಪರಮನೆಂಟ್, ಇನ್ನು ಮುಂದೆ ಅವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡೇ ಓಡಾಡಬೇಕು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬಜೆಟ್ ಬಳಿಕ ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಜೆಟ್ ವಿರುದ್ಧ ಕಾಂಗ್ರೆಸ್ ಕಿವಿಗೆ ಹೂವಿಟ್ಟು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ.
ರಾಜ್ಯದಲ್ಲಿ ಕಮಲವೇ ಮತ್ತೆ ಅರಳುವುದು. ಜನ ಕಾಂಗ್ರೆಸ್ಸಿಗೆ ಚೆಂಡುಹೂವು ಹಿಡಿಸುವ ಬದಲು, ನಾವೇ ಇಟ್ಟುಕೊಳ್ಳೋಣ ಎಂದು ಕಿವಿಗೆ ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಬಿಜೆಪಿಯೇ ಗೆಲ್ಲುವುದು ಎಂದು ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದಿದ್ದಾರೆ.
ಬೊಮ್ಮಾಯಿ ಬಜೆಟ್ ಆಶಯ ಬಿಂಬಿಸುವ ಬಜೆಟ್: ಕಾಂಗ್ರೆಸ್ಸಿಗರು ಕಿವಿಗೆ ಚೆಂಡು ಹೂವುನ್ನ ಇಟ್ಟುಕೊಂಡು ರಾಜ್ಯದ ಜನತೆಯ ಹಿತವನ್ನು ಬಯಸಿದ್ದಾರೆ. ರಾಜ್ಯದ ಹಿತವೂ ಬಿಜೆಪಿಯ ಗೆಲುವಿನ ಜೊತೆಗಿದೆ. ಕಾಂಗ್ರೆಸ್ ರಾಜ್ಯದ ಹಿತ ಹಾಗೂ ಬಿಜೆಪಿಯ ಗೆಲುವನ್ನು ಬಯಸಿದ್ದಕ್ಕೆ ಕಾಂಗ್ರೆಸ್ಸಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಬಜೆಟ್ ಬಗ್ಗೆ ಮಾತನಾಡಿದ ಅವರು, ಬೊಮ್ಮಾಯಿ ಬಜೆಟ್ ಜನರಲ್ಲಿ ಹೊಸ ಆಶಯ ಬಿಂಬಿಸುವ ಬಜೆಟ್. ಇದೊಂದು ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿರುವ ಬಜೆಟ್ ಎಂದು ಬಣ್ಣಿಸಿದ್ದಾರೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಗೃಹಿಣಿ ಶಕ್ತಿ ಯೋಜನೆ, ಮೂಲ ಸೌಲಭ್ಯ, ನೀರಾವರಿಗೆ ಕೊಟ್ಟಿರುವ ವಿಶೇಷ ಯೋಜನೆ ಜನರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.
ಕುಮಾರಣ್ಣ ಸರ್ಕಾರ ರಚನೆಗೆ ಬೆಂಬಲ ಸೂಚಿಸಬೇಕು: ನಿಖಿಲ್ ಕುಮಾರಸ್ವಾಮಿ
ಚಿಕ್ಕಮಗಳೂರಿಗೂ ಜವಳಿ ಪಾರ್ಕ್, ಶೃಂಗೇರಿಗೆ 100 ಬೆಡ್ ಹಾಸಿಗೆಯುಳ್ಳ ಆಸ್ಪತ್ರೆ, ಕಾಫಿನಾಡಿಗೆ ನೂತನ ವಿಶ್ವವಿದ್ಯಾನಿಲಯ ವಿವಿಧ ಯೋಜನೆ ನೀಡಿದೆ. ಇದು ಅಭಿವೃದ್ಧಿ ಕರ್ನಾಟಕದ ಆಶಯದ ಬಜೆಟ್ ಎಂದು ವರ್ಣಿಸಿದ್ದಾರೆ. ಅದರೆ, ನಮಗೊಂದು ನೋವಿದೆ. ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ ಮಾಡಿ ಅಂತ ಕೇಳಿಕೊಂಡಿದ್ದೆ. ಅದರಲ್ಲಿರುವ ತಾಂತ್ರಿಕ ತೊಡಕಿನ ಬಗ್ಗೆ ನನಗೆ ಪೋನ್ ಮಾಡಿ ತಿಳಿಸಿದ್ದಾರೆ. ದತ್ತಪೀಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಇರುವ ತಾಂತ್ರಿಕ ತೊಡಕು ನಿವಾರಿಸಿ ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿಸುತ್ತೇವೆ ಎಂದರು.