ಲಿಂಗಾಯತರು ಬಿಜೆಪಿ ಬಿಟ್ಟು ಹೋಗಲ್ಲಾ ಅವರೇ ಪಕ್ಷಕ್ಕೆ ಭದ್ರಕೋಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನರಗುಂದ (ಏ.23) : ಲಿಂಗಾಯತರು ಬಿಜೆಪಿ ಬಿಟ್ಟು ಹೋಗಲ್ಲಾ ಅವರೇ ಪಕ್ಷಕ್ಕೆ ಭದ್ರಕೋಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನರಗುಂದ ವಿಧಾನಸಭಾ ಮತಕ್ಷೇತ್ರ(Naragunda assembly constituency)ದ ಲಕ್ಕುಂಡಿ ಮಂಡಲದ ಹುಯಿಲಗೋಳ, ಕಿರಟಗೇರಿ ಗ್ರಾಮಗಳಲ್ಲಿ ಶನಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಬಾರಿ ಬಿಜೆಪಿ ಬೆಂಬಲಿಸುವ ಲಿಂಗಾಯತರು ಈ ಬಾರಿ ಕೆಲವು ಲಿಂಗಾಯತ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಆದ್ದರಿಂದ ಈ ಬಾರಿ ಲಿಂಗಾಯತರು(Lingayata community) ಬಿಜೆಪಿ ಕೈ ಬಿಟ್ಟು ಕಾಂಗ್ರೆಸ್ ಬೆಂಬಲಿಸುವರೆಂದು ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುವುದನ್ನು ಕೈ ಬಿಡಬೇಕು. ಏಕೆಂದರೆ ರಾಜ್ಯದಲ್ಲಿ ಲಿಂಗಾಯತರು ಬಿಜೆಪಿ ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದರಿಂದ ಬಿಜೆಪಿ ಹೈಕಮಾಂಡ್ ಲಿಂಗಾಯತರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರನ್ನಾಗಿ ಮಾಡಿ ಈ ಸಮಾಜವನ್ನು ಬೆಳೆಸಿದೆ ಎಂದರು.
undefined
'ಹಡದ್ ತಾಯಿಗೆ ದ್ರೋಹ ಮಾಡೂದು ಹ್ಯಾಂಗ್ ಅಂದ್ರ ಅದಕ್ ಈ ಶೆಟ್ರ ಉದಾಹರಣೆ' -ಬಸನಗೌಡ ಪಾಟೀಲ ಯತ್ನಾಳ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವೀರಶೈವರು ಬೇರೆ ಲಿಂಗಾಯತರು ಬೇರೆ ಎಂದು ಈ ಧರ್ಮ ಒಡೆಯಲು ಹೊರಟವರಿಗೆ ಚುನಾವಣಿಯಲ್ಲಿ ನಾಡಿನ ಮತದಾರರು ತಕ್ಕ ಶಾಸ್ತಿ ಮಾಡಿ ಮನೆಗೆ ಕಳಿಸಿದ್ದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನೆ ಮಾಡಿದರು.
ನರಗುಂದ ವಿಧಾನಸಭಾ ಮತಕ್ಷೇತ್ರದಿಂದ ಮತದಾರರು ನನ್ನನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವ ವಿಶ್ವಾಸ ಇದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಬಿಜೆಪಿ ಮುಖಂಡರಾದ ವಸಂತ ಮೇಟಿ, ಶೇಖಣ್ಣ ಹಂಚಿನಾಳ, ಶಂಭು ಬಡಿಗೇರ, ಗದಗ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಶಿವಣ್ಣ ಮುಳಗುಂದ, ಈರಣ್ಣ ಕಳಕಣ್ಣವರ, ನವೀನ ಕುರ್ತಕೋಟಿ, ಕೃಷ್ಣ ದೇಶಪಾಂಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Gadag: ಬಂಡಾಯದ ನೆಲದಲ್ಲಿ ಸಿಸಿ ಪಾಟೀಲ ಶಕ್ತಿ ಪ್ರದರ್ಶನ, ನರಗುಂದ ಪಟ್ಟಣದ ಬೀದಿಗಳು ಕೇಸರಿಮಯ!
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.