ಬಿಜೆಪಿಗ ಮುನಿರಾಜು ಗೌಡ ನಿಷೇಧ ಅವಧಿ ಇಳಿಸಿದ ಆಯೋಗ

By Kannadaprabha NewsFirst Published Oct 23, 2019, 9:05 AM IST
Highlights

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮುನಿರಾಜು ಗೌಡ ನಿಷೇಧದ ಅವಧಿಯನ್ನು ಚುನಾವಣಾ ಆಯೋಗ ಇಳಿಸಿದ್ದು, ಇದರಿಂದ ರಿಲೀಫ್ ದೊರಕಿದಂತಾಗಿದೆ. 

ನವದೆಹಲಿ [ಅ.23]: 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಹೇರಿದ್ದ 3 ವರ್ಷಗಳ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.

2014ರ ಲೋಕಸಭಾ ಚುನಾವಣೆಯ ವೆಚ್ಚದ ವಿವರವನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಚುನಾವಣಾ ಆಯೋಗವು ಸಂಸತ್ತಿನ ಉಭಯ ಸದನ ಅಥವಾ ರಾಜ್ಯ ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ 3 ವರ್ಷಗಳ ಕಾಲ ಸ್ಪರ್ಧಿಸಲು ನಿಷೇಧ ಹೇರಿ 2019ರ ಜ.9ರಂದು ಆದೇಶ ಹೊರಡಿಸಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರ ವಿರುದ್ಧ ಮುನಿರಾಜು ಗೌಡ ಅವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅಲ್ಲದೆ ಈ ಕುರಿತು 2019ರ ಅ.9ರಂದು ಖುದ್ದು ಹಾಜರಾಗಿ, ವಿವರ ಸಲ್ಲಿಕೆ ಕುರಿತು ಮಾಹಿತಿ ನೀಡಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಚುನಾವಣಾ ಆಯೋಗವು 2019ರ ಅ.17ರಂದು ಆದೇಶವೊಂದನ್ನು ಹೊರಡಿಸಿದ್ದು, ಅದರಲ್ಲಿ ಆದೇಶ ಪ್ರಕಟಗೊಂಡ ದಿನಕ್ಕೆ ನಿಷೇಧದ ಅವಧಿ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಿಸಿದೆ. ಹೀಗಾಗಿ 3 ವರ್ಷದ ನಿಷೇಧದ ಅವಧಿ 9 ತಿಂಗಳು 9 ದಿನಕ್ಕೆ ಮುಕ್ತಾಯಗೊಂಡಂತೆ ಆಗಿದೆ.

click me!