ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ರಾಜ್ಯ ಸರ್ಕಾರವನ್ನ ಬಿಟ್ಟುಬಿಡದೆ ಪತ್ರದ ಮೂಲಕ ಗವರ್ನರ್ ಕಾಡುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎಂಬಂತೆ ನಡೆಯುತ್ತಿರುವ ಪತ್ರ ಸಮರ ನಡೆಯುತ್ತಿದ್ದು, ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹಲೋತ್ ಪತ್ರ ಬರೆಯುತ್ತಿದ್ದಾರೆ.
ಬೆಂಗಳೂರು (ಸೆ.22): ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ರಾಜ್ಯ ಸರ್ಕಾರವನ್ನ ಬಿಟ್ಟುಬಿಡದೆ ಪತ್ರದ ಮೂಲಕ ಗವರ್ನರ್ ಕಾಡುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎಂಬಂತೆ ಪತ್ರ ಸಮರ ನಡೆಯುತ್ತಿದ್ದು, ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹಲೋತ್ ಪತ್ರ ಬರೆಯುತ್ತಿದ್ದಾರೆ. ಅಲ್ಲದೇ ರಾಜ್ಯಪಾಲರ ಪತ್ರಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಲೆಕೆಡಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ ಬಳಿಕ ರಾಜ್ಯಪಾಲರಿಂದ ಪತ್ರ ಸಮರ ಶುರುವಾಗಿದ್ದು, ಸರ್ಕಾರಕ್ಕೆ ರಾಜ್ಯಪಾಲರು ಬರೆದಿರುವ ಪತ್ರಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿಗೂ ರಾಜ್ಯಪಾಲರು ವಿವರಣೆಯನ್ನು ಕೇಳಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ, ಮೈಸೂರಿನ ಪಿಎಸ್ ನಟರಾಜ್ ದಲಿತ ಸಂಘರ್ಷ ಸಮಿತಿ ಕರ್ನಾಟಕ ರಾಷ್ಟ್ರ ಸಮಿತಿ ಸಲ್ಲಿಸಿರುವ ದೂರಿಗೂ ಕೂಡ ವಿವರಣೆಯನ್ನು ರಾಜ್ಯಪಾಲರು ಕೇಳಿದ್ದು, ಸಚಿವ ಎಂಬಿ ಪಾಟೀಲ್ ವಿರುದ್ಧದ ದೂರಿಗೆ 7 ದಿನದಲ್ಲೇ ಉತ್ತರಿಸಿ ಎಂದಿದ್ದಾರೆ ಗವರ್ನರ್.
undefined
ಸದನದ ಸದಸ್ಯತ್ವದಿಂದ ಮುನಿರತ್ನ ಅಮಾನತ್ತಿಗೆ ಸಭಾಧ್ಯಕ್ಷರಿಗೆ ಸಚಿವ ಎಚ್.ಕೆಪಾಟೀಲ ಆಗ್ರಹ!
ಜೊತೆಗೆ ಸರ್ಕಾರಿ ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ಪ್ರಕರಣಗಳ ಕೈ ಬಿಟ್ಟಿರುವ ಬಗ್ಗೆಯೂ ರಾಜ್ಯಪಾಲರು ಮಾಹಿತಿ ಕೇಳಿದ್ದು, ಗೌಪ್ಯ ಮಾಹಿತಿ ಸೋರಿಕೆಯ ಬಗ್ಗೆಯೂ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದಾರೆ. ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸರ್ಕಾರದ ತಿಕ್ಕಾಟದ ನಡುವೆ ಹೈರಾಣಾಗಿರುವ ಮುಖ್ಯ ಕಾರ್ಯದರ್ಶಿಗಳ ಮೂಲಕವೇ ನಡೆಯುತ್ತಿರುವ ಎಲ್ಲಾ ಪತ್ರ ವ್ಯವಹಾರ ನಡೆಯುತ್ತಿದ್ದು, ಉತ್ತರಿಸಬೇಕೋ ಬೇಡವೋ..? ವರದಿ ಸಲ್ಲಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಮುಖ್ಯ ಕಾರ್ಯದರ್ಶಿ ಇದ್ದಾರೆ.
ಸರ್ಕಾರದ ವಿರುದ್ಧ ಪತ್ರ ಸಮರದಲ್ಲೇನಿದೆ?
ಪ್ರಕರಣ 1
- ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ದೂರು
- ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ 11077 ಕೋಟಿ ಗ್ಯಾರಂಟಿಗೆ ಬಳಸಿಕೊಂಡ ಬಗ್ಗೆ ದೂರು
ಸರ್ಕಾರದ ಕ್ರಮ
- ಕರ್ನಾಟಕ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪಂಗಡಗಳ ಉಪ ಯೋಜನೆ ಅಧಿನಿಯಮ, 2013ರ ಸೆಕ್ಷನ್ 7(ಸಿ)ರನ್ವಯ ಬಳಸಲು ಅವಕಾಶ ಎಂದು ಉತ್ತರ
ಪ್ರಕರಣ 2
- ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಲ್ಲಿಸಿರುವ ದೂರು
- ಬೆಂಗಳೂರಿನ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಎಸ್.ಸಿ. ಕೋಟಾದಡಿ ಕೆ.ಐ.ಎ.ಡಿ.ಬಿ. ಮೂಲಕ ಜಮೀನು ಹಂಚಿಕೆ
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬದ ಟ್ರಸ್ಟ್ ಗೆ ನೀಡಿದ್ದಾರೆಂಬ ದೂರು
ಸರ್ಕಾರದ ಕ್ರಮ
- ಸ್ವೀಕೃತ ದಾಖಲೆಗಳನ್ನು ವಾಣಿಜ್ಯ ಮತ್ತು ಬೃಹತ್ ಕೈಗಾರಿಕೆ ಇಲಾಖೆಗೆ ಕಳುಹಿಸಲಾಗಿದ್ದು ವರದಿ ನಿರೀಕ್ಷಿಸಲಾಗಿದೆ
ಪ್ರಕರಣ 3
- ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಲ್ಲಿಸಿರುವ ದೂರು
- 25,000 ಕೋಟಿಗಳ ಮೊತ್ತದಷ್ಟು ಅನುದಾನವನ್ನು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗೆ ಬಳಸಿದೆ
- ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಆಗಿದೆ
- ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಸ್ಕಾಲರ್‌ಶಿಪ್ ರದ್ದುಪಡಿಸಲಾಗಿದೆ ಎಂದು ದೂರು
ಸರ್ಕಾರದ ಕ್ರಮ
- ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯಪಾಲರ ಪತ್ರ ರವಾನೆ ಮಾಡಲಾಗಿದ್ದು ವರದಿ ನಿರೀಕ್ಷಿಸಲಾಗಿದೆ
ಪ್ರಕರಣ 4
- ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರು
- ಕೆಐಎಡಿಬಿ ಕೈಗಾರಿಕೆ ಪ್ರದೇಶಗಳಲ್ಲಿ ಮೀಸಲಿಟ್ಟ ಸಿ.ಎ ನಿವೇಶನಗಳನ್ನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು
- ಸಚಿವ ಎಂ.ಬಿ. ಪಾಟೀಲ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್ ಅನುಮತಿ ಕೇಳಿ ಸಲ್ಲಿಸಿರುವ ದೂರು
ಸರ್ಕಾರದ ಕ್ರಮ
- ವಾಣಿಜ್ಯ ಮತ್ತು ಕೈಗಾರಿಕ ಇಲಾಖೆಗೆ ರಾಜ್ಯಪಾಲರ ಪತ್ರ ರವಾನೆ ಮಾಡಿದ್ದು ರಂದು ವರದಿ ನಿರೀಕ್ಷಿಸಲಾಗಿದೆ.
ಪ್ರಕರಣ 5
- ಮೈಸೂರಿನ ಪಿ.ಎಸ್. ನಟರಾಜ್ ಎಂಬುವವರು ನೀಡಿರುವ ದೂರು
- ಸಿಎಂ ಸಿದ್ದರಾಮಯ್ಯ ಮೌಖಿಕ ಸೂಚನೆ ಮೇರೆಗೆ ಮೂಡ ಕಾಮಗಾರಿ ಮಾಡ್ತಿದೆ ಎಂದು ದೂರು
- ವರುಣ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಮಗಾರಿಗಳನ್ನ ನಡೆಸಲಾಗ್ತಿದೆ ಎಂದು ದೂರು
- ಸಿಬಿಐ ತನಿಖೆಗೆ ವಹಿಸಿ ಎಂದು ದೂರು ನೀಡಿರುವ ಪಿಎಸ್ ನಟರಾಜ್
ಸರ್ಕಾರದ ಕ್ರಮ
- ರಾಜ್ಯಪಾಲರ ಪತ್ರವನ್ನ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದ್ದು ವರದಿ ನಿರೀಕ್ಷಿಸಲಾಗಿದೆ
ಪ್ರಕರಣ 6
- ಇದು ರಾಜ್ಯಪಾಲರೇ ಮುಖ್ಯಕಾರ್ಯದರ್ಶಿಗೆ ಬರೆದ ಪತ್ರ
- ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ, ಶಿಕಲಾ ಜೊಲ್ಲೆ ಇವರ ವಿರುದ್ಧ ಲೋಕಾಯುಕ್ತ ಪೊಲೀಸರು ಅಭಿಯೋಜನಾ ಮಂಜೂರಾತಿಯನ್ನು ಕೋರಿದ ಬಗ್ಗೆ ರಾಜ್ಯಪಾಲರ ಪತ್ರ
- ಅಭಿಯೋಜನಾ ಮಂಜೂರಾತಿ ಪ್ರಕರಣಗಳು ಗೌಪ್ಯವಾಗಿದ್ದು, ಅದನ್ನು ಸಚಿವ ಸಂಪುಟದಲ್ಲಿ ಹೇಗೆ ಚರ್ಚಿಸಲಾಯಿತು
- ಈ ಬಗ್ಗೆ ಮಾಹಿತಿ ಹೇಗೆ ದೊರಕಿತು ಎಂಬ ಬಗ್ಗೆ ದಾಖಲೆಗಳ ಸಮೇತ ಮಾಹಿತಿ ಒದಗಿಸಲು ಪತ್ರ ಬರೆದಿರುವ ಗವರ್ನರ್
ಸರ್ಕಾರದ ಕ್ರಮ
- ಈ ಬಗ್ಗೆ ಇನ್ನೂ ಕ್ರಮಕೈಗೊಳ್ಳದ ರಾಜ್ಯ ಸರ್ಕಾರ
- ಆದರೆ ಡಿಜಿ-ಐಜಿಪಿ ಅವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಅದರ ಮಾಹಿತಿ ಲಭ್ಯವಾಗಿಲ್ಲ
ಪ್ರಕರಣ 7
- ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಶಿಫಾರಸ್ಸಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿ ಪತ್ರ
- ಸಚಿವ ಸಂಪುಟಕ್ಕೆ ಸಲ್ಲಿಕೆ ಆಗಿರುವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ಶಿಫಾರಸ್ಸನ್ನು ಒಪ್ಪಿರುವುದು, ತಿರಸ್ಕರಿಸಿರುವುದು ಇದೆ
- ಆ ಎಲ್ಲಾ ಪ್ರಕರಣಗಳ ವಿವರಗಳನ್ನು ನೀಡಲು ಮುಖ್ಯ ಕಾರ್ಯದರ್ಶಿ ಪತ್ರ ಬರೆದಿರುವ ರಾಜ್ಯಪಾಲರು
ಭಕ್ತರ, ಜನರ ಭಾವನೆಗಳ ಜೊತೆ ಆಟ ಸರಿಯಲ್ಲ: ಸಚಿವ ಎಂ.ಬಿ.ಪಾಟೀಲ್
ಸರ್ಕಾರದ ಕ್ರಮ
- ರಾಜ್ಯಪಾಲರ ಪತ್ರಕ್ಕೆ ಮಾಹಿತಿ ನೀಡಲು ಮುಂದಾಗಿರುವ ಸರ್ಕಾರ
- ರಾಜ್ಯಪಾಲರು ಲಗತ್ತಿಸಿ ಕಳುಹಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಸಿದ್ಧಪಡಿಸುತ್ತಿರುವ ಮುಖ್ಯ ಕಾರ್ಯದರ್ಶಿ