ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಚುನಾವಣೆ ಪೂರ್ವ ಸಿದ್ಧತಾ ಸಭೆ ನಡೆಯಿತು.
ಶಿರಾಳಕೊಪ್ಪ (ಮೇ 16): ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಚುನಾವಣೆ ಪೂರ್ವ ಸಿದ್ಧತಾ ಸಭೆ ನಡೆಯಿತು. ಪಟ್ಟಣದ ಹೊರವಲಯದಲ್ಲಿ ಪದವೀಧರರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ರಾಘವೇಂದ್ರ, ಇದೊಂದು ಮಹತ್ವದ ಚುನಾವಣೆ ಆಗಿದ್ದು, ಈ ಭಾಗದಲ್ಲಿ ನೋಂದಣಿ ಆದಂತಹ ಪದವೀಧರರು ಹಾಗೂ ಶಿಕ್ಷಕರನ್ನು ಸಂಪರ್ಕಿಸಿ ಪ್ರತಿ ೨೫ ಮತದಾರರಿಗೆ ಒಬ್ಬರು ಪ್ರಮುಖರನ್ನು ಗುರುತಿಸಿ ಜವಾಬ್ದಾರಿ ಕೊಟ್ಟು ಚುನಾವಣೆ ವ್ಯವಸ್ಥಿತವಾಗಿ ನಡೆಸಬೇಕಿದೆ ಎಂದರು.
ಈ ಬಾರಿ ಪದವೀಧರರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿ ರಘುಪತಿ ಭಟ್ ಸ್ಪಧಿರ್ಸುತ್ತಿದು, ಅವರನ್ನು ಮಾಜಿ ಸಚಿವ ಈಶ್ವರಪ್ಪ ಸೇರಿ ಹಲವರು ಬೆಂಬಲಿಸುತ್ತಿದ್ದಾರೆ. ಆದರೆ ನಾವು ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೆಸರಾಂತ ತಜ್ಞ ವೈದ್ಯ ಡಾ. ನಂಜಯ ಸಜಿರ್ ಅವರನ್ನು ಘೋಷಣೆ ಮಾಡಿದ್ದು ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಈ ಹಿಂದೆ ಆಯನೂರ ಮಂಜುನಾಥರನ್ನು ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸೇರಿ ಎಲ್ಲಡೆ ಪಕ್ಷದ ಟಿಕೆಟ್ ಕೊಟ್ಟು ಗೆಲ್ಲಿಸಲಾಗಿತ್ತು,
undefined
ಆದರೆ ಬಿಜೆಪಿಯಿಂದ ಎಲ್ಲ ಸವಲತ್ತು ಪಡೆದ ಅವರು ಇಂದು ನಮ್ಮ ಎದುರಾಳಿ ಆಗಿ ಸ್ಪಧಿರ್ಸಿದ್ದಾರೆ. ಯಾರೇ ನಿಂತರೂ ನಮ್ಮ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಿದೆ. ಈ ಚುನಾವಣೆಯಲ್ಲಿ ಘಟ್ಟದ ಮೇಲಿನವರು ಕೆಳಗಿನವರು ಎಂಬ ಒಡಕನ್ನು ಹುಟ್ಟು ಹಾಕಲಾಗುತ್ತಿದೆ. ಆದರೆ ಈ ಹಿಂದೆ ಘಟ್ಟದ ಕೆಳಗಿನವರಿಗೆ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ಕೊಟ್ಟು ಒಂದು ಸ್ಥಾನ ಕಳೆದುಕೊಂಡಿದ್ದೇವೆ. ಘಟ್ಟದ ಮೇಲಿನ ಮತದಾರರು ಶೇ.೬೦ರಷ್ಟಿದ್ದು, ಕಾರ್ಯಕರ್ತರ ಒಮ್ಮತದಂತೆ ಅಭ್ಯರ್ಥಿ ಆಯ್ಕೆ ಮಾಡಲಾಗಿದ್ದು, ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ತರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯಿಂದ ಕುಡಿಯುವ ನೀರಿಗೆ ತೊಂದರೆ!
ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಈಗಾಗಲೇ ಕಾಂಗ್ರೆಸ್ ಪಕ್ಷ ಮತ್ತು ಬಂಡಾಯ ಅಭ್ಯರ್ಥಿಗಳು ವ್ಯವಸ್ಥಿತವಾಗಿ ಪ್ರಚಾರ ಮಾಡುವಲ್ಲಿ ಮುಂದಾಗಿದ್ದು, ಪ್ರತಿಯೊಬ್ಬ ಮತದಾರರನ್ನು ಸಂಪಕಿರ್ಸಿ ಕರಪತ್ರ ತಲುಪಿಸಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷ ಹಿಂದೆ ಬಿದ್ದಿದ್ದು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಡಾ.ಮುರಘರಾಜ್, ನಿವೃತ್ತ ಶಿಕ್ಷಕ ದಿವಾಕರ್, ಬಿಜೆಪಿ ನಗರ ಅಧ್ಯಕ್ಷ ಚೆನ್ನವೀರಶೆಟ್ಟಿ, ಪಪಂ ಮಾಜಿ ಅಧ್ಯಕ್ಷ ಲೋಕೇಶ್, ಎಚ್.ಎಂ.ಚಂದ್ರಶೇಖರ, ತಡಗಣಿ ಮಂಜಣ್ಣ ಸೇರಿ ಹಲವರಿದ್ದರು.