ಈ ಭ್ರಷ್ಟಾಚಾರ ಸರ್ಕಾರಕ್ಕೆ ಏನಾದರೂ ಬುದ್ಧಿ ಕಲಿಸಲೇಬೇಕು. ಚೆಕ್‌ಪೋಸ್ಟ್ ಇಡಬೇಕು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ನಂತರ ಬಹಳ ಮೆರೆಯುತ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮೈಸೂರು (ಮೇ.16): ಈ ಭ್ರಷ್ಟಾಚಾರ ಸರ್ಕಾರಕ್ಕೆ ಏನಾದರೂ ಬುದ್ಧಿ ಕಲಿಸಲೇಬೇಕು. ಚೆಕ್‌ಪೋಸ್ಟ್ ಇಡಬೇಕು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ನಂತರ ಬಹಳ ಮೆರೆಯುತ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮನೆಹಾಳ ಕಾಂಗ್ರೆಸ್ ಒಂದು ವರ್ಷವಾದರೂ ಒಳ್ಳೆಯ ಕೆಲಸ ಮಾಡಲಿಲ್ಲ.ಮೊನ್ನೆ ನೇಹಾ(Neha hiremath)ಳ ಹತ್ಯೆ ಆಯಿತು, ಮಣ್ಣು ಇನ್ನೂ ಆರಿಲ್ಲ. ಇದೀಗ ಮತ್ತೆ ಅಂಜಲಿ(Anjali murder at hubballi) ಎನ್ನುವ ಹೆಣ್ಣು ಮಕ್ಕಳ ಹತ್ಯೆಯಾಗಿದೆ. ಈ ರೀತಿ ಹೆಣ್ಣು ಮಕ್ಕಳು ಆಗುತ್ತಿರೋದು ಸರ್ಕಾರ ಸಂಪೂರ್ಣ ಹದಗೆಟ್ಟಿರೋದಕ್ಕೆ ಸಾಕ್ಷಿ. ರಾಜ್ಯದಲ್ಲಿ ಪೋಲಿಸ್ ಇಲಾಖೆ ಬದುಕಿದಿಯಾ? ಸರ್ಕಾರ ಬದುಕಿದೆಯಾ ಸತ್ತಿದೆಯಾ? ಎಂದು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕಾಲುಗುಣ ಅಂತಹದ್ದು, ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಬರಗಾಲದ ಬಂದಿದೆ. ಸರ್ಕಾರ ಬರಗಾಲ ಸರಿಯಾಗಿ ನಿಭಾಯಿಸುತ್ತಿಲ್ಲ. ಕೇಂದ್ರ ಸರ್ಕಾರ 3545 ಕೋಟಿ ಪರಿಹಾರ ನೀಡಿದೆ.
'ಗೆಲ್ಲುತ್ತೀ..' ಪಂಜುರ್ಲಿ ದೈವ ಹೇಳಿದೆ, ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ: ರಘುಪತಿ ಭಟ್
ಕೇಂದ್ರ ಸರ್ಕಾರ ಹಣಕ್ಕೊಟ್ಟರೂ ಸಿದ್ದರಾಮಯ್ಯ (CM Siddaramaiah)ಏಕೆ ಇನ್ನೂ ಬಿಡುಗಡೆ ಮಾಡುತ್ತಿಲ್ಲ ಅಂದರೆ ಸಿದ್ದರಾಮಯ್ಯ ಸರ್ಕಾರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಎಂಟು ತಿಂಗಳಿಂದ ರೈತರ ಹಾಲಿಗೆ ಹಣವನ್ನು ಕೊಟ್ಟಿಲ್ಲ, ಆಂಬುಲೆನ್ಸ್ ಚಾಲಕರಿಗೆ ಹಣಕೊಟ್ಟಿಲ್ಲ, ಗೆಸ್ಟ್ ಲಚ್ಚರರ್ ಗೆ ವೇತನ ಕೊಟ್ಟಿಲ್ಲ.. ಹೀಗೆ ಆದರೆ ಪಕ್ಕದ ಕೇರಳ ರಾಜ್ಯ ಆದ ರೀತಿ ಕರ್ನಾಟಕ ಪಾಪರ್ ಆಗುತ್ತೆ. ಪಾಕಿಸ್ತಾನದಲ್ಲಿ ಹಾಲಿನ ಬೆಲೆ, ಅಕ್ಕಿ ಬೆಲೆ, ಟೀ ಬೆಲೆ , ಗೋದಿ ಹಿಟ್ಟು ಬೆಲೆ ನೋಡಿದರೆ ಆ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರ ಬರಲಿದೆ ಅನಸ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ಕಾರಣ : ವೈ.ಎ.ನಾರಾಯಣಸ್ವಾಮಿ
ಓಟ್ ಮಾಡುವವರು ಪ್ರಾಮಾಣಿಕವಾಗಿ ಮಾಡಬೇಕು. ನಮಗೆ ಇನ್ನಷ್ಟು ಶಕ್ತಿ ಬರಲಿದೆ. ಈ ಮತದಾನ ಕೈ ಮುಗಿಯುವುದಲ್ಲ. ಕಾಂಟಾಕ್ಟ್ ಮಾಡಿ ಮನ ಒಲಿಸುವ ಕೆಲಸವನ್ನು ಮಾಡಬೇಕು. ನಿಂಗರಾಜೇಗೌಡ ರವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಕೆ.ವಿವೇಕಾನಂದ ಗೆಲ್ಲಲಿದ್ದಾರೆ. ಈ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿ ಪರ್ಮನೆಂಟ್ ಆಗಿರಲಿ ಎಂದು ಹಾರೈಸುತ್ತೇನೆ ಎಂದರು.