ವಸಂತ ಬಂಗೇರಾ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಲಿ: ಸಿದ್ದರಾಮಯ್ಯ

By Sathish Kumar KH  |  First Published Dec 17, 2022, 4:46 PM IST

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ವ್ಯಕ್ತಿತ್ವ ಚಿತ್ರಣ ಪುಸ್ತಕ ಬಿಡುಗಡೆ.
ನಿಜ ಜೀವನ ಮತ್ತು ಪುಸ್ತಕದಲ್ಲಿ ಉಲ್ಲೇಖಿತ ಚಿತ್ರಣ ಎರಡಕ್ಕೂ ನೂರರಷ್ಟು ಸಾಮ್ಯತೆಯಿದೆ.
ಐದು ಬಾರಿ ಶಾಸಕರಾಗಿದ್ದರೂ ಮಂತ್ರಿ ಮಾಡಲು ಸಾಧ್ಯವಾಗಲಿಲ್ಲ.


ಮಂಗಳೂರು (ಡಿ.17): ನಾನು ಕಂಡ ವಸಂತ ಬಂಗೇರಾ ಮತ್ತು ಪುಸ್ತಕದಲ್ಲಿರುವ ಬಂಗೇರಾರಿಗೆ ವ್ಯತ್ಯಾಸ ಇಲ್ಲ. ಪುಸ್ತಕದ ಲೇಖಕರು ಸತ್ಯವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾನು ಮತ್ತು ವಸಂತ ಬಂಗೇರಾ ಒಟ್ಟಿಗೆ ವಿಧಾನ ಸಭೆ ಪ್ರವೇಶ ಮಾಡಿದ್ದರೂ, ಅವರು ಬಿಜೆಪಿಯಿಂದ ಗೆದ್ದರು, ನಾನು ಸ್ವತಂತ್ರವಾಗಿ ಗೆದ್ದು ಬಂದೆ. ಈ ಬಾರಿಯೂ ಅವರ ಆರೋಗ್ಯ ಸರಿಯಿದ್ದರೆ ಚುನಾವಣೆ ನಿಲ್ಲುವಂತೆ ಸಲಹೆ ನೀಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ವ್ಯಕ್ತಿತ್ವ ಚಿತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವಸಂತ ಬಂಗೇರಾ ಅವರು ನೈಜ ಜೀವನ ಹಾಗೂ ಪುಸ್ತಕದಲ್ಲಿ ಉಲ್ಲೇಖ ಮಾಡಿರುವ ಚಿತ್ರಣವು ಎರಡೂ ನೂರರಷ್ಟು ಸಾಮ್ಯತೆಯಿದೆ. ನಾನು ಮತ್ತು ವಸಂತ ಬಂಗೇರಾ ಇಬ್ಬರೂ ಒಂದೇ ಅವಧಿಯಲ್ಲಿ ರಾಜಕೀಯ ಪ್ರವೇಶ ಮಾಡಿದ್ದೆವು. ನಾನು ಸ್ವತಂತ್ರವಾಗಿ ಗೆದ್ದರೆ, ಅವರು ಬಿಜೆಪಿಯಿಂದ ಗೆದ್ದಿದ್ದರು. ಆವತ್ತು ಬಿಜೆಪಿಯಲ್ಲಿ 18 ಜನ ಗೆದ್ದು ಬಂದಿದ್ದರು. ಅದರಲ್ಲಿ ಯಡಿಯೂರಪ್ಪನೂ ಆವತ್ತೇ ಗೆದ್ದು ಬಂದಿದ್ದು, ವಿ.ಎಸ್.ಆಚಾರ್ಯ ಬಿಜೆಪಿ ನಾಯಕ ಆಗಿದ್ದರು ಎಂದು ನನೆಪು ಮಾಡಿಕೊಂಡರು.

Tap to resize

Latest Videos

ಸಿದ್ದರಾಮಯ್ಯ ಟಿಕೆಟ್‌ ಘೋಷಣೆ ಮಾಡೋದು ಸರಿಯಲ್ಲ: ಸತೀಶ್‌

ಬಹಳಷ್ಟು ರಾಜಕಾರಣಿಗಳು ಬಾಹ್ಯ ನೋಟಕ್ಕೆ ಮಾತ್ರ ಸಾಫ್ಟ್‌:  ರಾಜಕಾರಣದಲ್ಲಿ ಬಾಹ್ಯವಾಗಿ ಕೆಲವರು ಮನುಷ್ಯರ ಥರ ಇರುತ್ತಾರೆ. ಆದರೆ, ಒಳಗೆ ಮೃಗವಾಗಿ ವರ್ತಿಸುತ್ತಿರುತ್ತಾರೆ. ಬಹಳ ಜನ ರಾಜಕಾರಣಿಗಳು ಅಂಥವರು ಇದ್ದಾರೆ. ನಿಮ್ಮ ಜಿಲ್ಲೆಯಲ್ಲೂ ಇದಾರೆ. ಆದರೆ ನಾನು ಹೆಸರು‌ ಹೇಳಲ್ಲ. ಅಂಥವರ ಮಧ್ಯೆ ಮನುಷ್ಯತ್ವ ಇದ್ದ ರಾಜಕಾರಣಿ ವಸಂತ ಬಂಗೇರಾ ಅವರಾಗಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಜೊತೆ ಬಹಳ ಸಲುಗೆ ಇತ್ತು. ಐದು ವರ್ಷಗಳಲ್ಲಿ ಒಮ್ಮೆಯೂ ಸ್ವಂತ ‌ಕೆಲಸಕ್ಕೆ ಬಂದಿಲ್ಲ. ಅವರು ಮಂತ್ರಿ ಮಾಡಿ ಅಂತಾನೂ ಕೇಳಿಲ್ಲ, ಆದರೆ ನಾವು ಮಾಡಿಲ್ಲ. ಇನ್ನು ಜಿಲ್ಲೆಯಲ್ಲಿ ರಮಾನಾಥ್ ರೈ, ಸೊರಕೆ ಇದ್ದ ಕಾರಣ ಮಂತ್ರಿ ‌ಮಾಡಲು ಆಗಿಲ್ಲ. ನಾವು ಇಂಥ ನಿಷ್ಠುರ ವ್ಯಕ್ತಿಯನ್ನ ಮಂತ್ರಿ ‌ಮಾಡಬೇಕಿತ್ತು ಎಂದು ತಿಳಿಸಿದರು.

ಚುನಾವಣೆ ನಿಲ್ಲಲು ಸಲಹೆ: ಇನ್ನು ರಾಜ್ಯ ರಾಜಕಾರಣಕ್ಕೆ ಜನ ಸೇವೆ ಮಾಡಲು ಬಂದಿದ್ದು, ಮಜಾ ಮಾಡಲು ಅಥವಾ ದುಡ್ಡು ಹೊಡೆಯಲು‌ ಅಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಕ್ಷೇತ್ರಕ್ಕೂ ಎರಡು ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಟ್ಟಿದ್ದೆ, ಅದರಲ್ಲಿ ಇವರದ್ದೂ ಒಂದು. ಬಂಗೇರಾ ಐದು ಬಾರಿ ಶಾಸಕರಾಗಿದ್ದು, ಮಂತ್ರಿ ಮಾಡಲು ಅರ್ಹವಾಗಿರೋ ವ್ಯಕ್ತಿ ಆಗಿದ್ದಾರೆ. ಈ ಬಾರಿ ಚುನಾವಣೆಗೆ ನಿಲ್ಲಲ್ಲ ಅಂತ ನನ್ನ ಬಳಿ ಹೇಳಿದ್ದಾರೆ. ಆದರೆ, ಆರೋಗ್ಯ ಸರಿ ಇದ್ದರೆ ಈ ಬಾರಿಯೂ ನಿಲ್ಲಲು ಹೇಳಿದ್ದೇನೆ ಎಂದು ವಿವರಿಸಿದರು.

ಸಿದ್ದರಾಮಯ್ಯ, ನನ್ನ ಮಧ್ಯೆ ಜಗಳ ಶುದ್ಧ ಸುಳ್ಳು: ಡಿ.ಕೆ.ಶಿವಕುಮಾರ್‌

ಅನಂತ ಕುಮಾರ ಹೆಗ್ಡೆ ವಿರುದ್ಧ ವಾಗ್ದಾಳಿ: ವಸಂತ ಬಂಗೇರಾ ಅವರು  ಇವರು ಎಲ್ಲಾ ಧರ್ಮವನ್ನ ಒಪ್ಪಿಕೊಂಡ ಒಬ್ಬ ರಾಜಕಾರಣಿ ಆಗಿದ್ದಾರೆ. ಆದರೆ, ಕಳೆದ ಬಾರಿ ಬಂಗೇರಾರನ್ನ ಸೋಲಿಸಿ ಬಿಟ್ಟರು. ನಮಗೆ ನಮ್ಮ ಧರ್ಮದ ‌ಮೇಲೆ ನಿಷ್ಠೆ ಇರಬೇಕು, ಬೇರೆ ಧರ್ಮದ ಮೇಲೆ ಗೌರವವೂ ಇರಬೇಕು. ಹಿಂದೂ ಧರ್ಮದ ಮೇಲೆ ‌ನಿಷ್ಠೆ ಇರಬೇಕು. ಆದರೆ, ಇಸ್ಲಾಂ, ಕ್ರಿಶ್ಚಿಯನ್‌ ಸೇರಿ ಎಲ್ಲ ಧರ್ಮಗಳನ್ನೂ ಗೌರವಿಸಬೇಕು. ಸಂವಿಧಾನದ ಬಗ್ಗೆ ಗೌರವ ಇಲ್ಲದೇ ಇದ್ದರೆ ಅಂಥವರು ರಾಜಕಾರಣಿ ಆಗಬಾರದು. ಎಂಎಲ್ಎ, ಎಂಪಿ ಏನೂ ಆಗಲು ಅಂಥವರು ಅರ್ಹರಲ್ಲ. ಸಂವಿಧಾನ ಬದಲಾವಣೆ ‌ಮಾಡ್ತೀನಿ ಅನ್ನೋರು Asದೇಶಭಕ್ತರು ಅಂತ ಹೇಳಲು ಅರ್ಹರಲ್ಲ ಎಂದು ಪರೋಕ್ಷವಾಗಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ವಗ್ದಾಳಿ ನಡೆಸಿದರು. ನಮ್ಮ ನಿಲುವಿನಲ್ಲಿ ನಮಗೆ ಸ್ಪಷ್ಟತೆ ಇರಬೇಕು, ಅಂಥ ಸ್ಪಷ್ಟ ವ್ಯಕ್ತಿ ಬಂಗೇರಾ ಅವರಾಗಿದ್ದಾರೆ ಎಂದರು.

click me!