ಸಿದ್ದರಾಮಯ್ಯ ಟಿಕೆಟ್‌ ಘೋಷಣೆ ಮಾಡೋದು ಸರಿಯಲ್ಲ: ಸತೀಶ್‌

By Santosh Naik  |  First Published Dec 17, 2022, 7:41 AM IST

ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಸಿದ್ಧರಾಮಯ್ಯ ಘೋಷಣೆ ಮಾಡುವುದು ಸರಿಯಲ್ಲ.ಇದರಿಂದ ಅರ್ಜಿ ಸಲ್ಲಿಸಿದವರಿಗೆ ತೊಂದರೆ ಆಗಲಿದೆ ಎಂದು ಕೆಪಿಸಿಸಿ ಕಾರಾರ‍ಯಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಇದರ ನಡುವೆ ಸ್ಪಷ್ಟನೆ ನೀಡಿರುವ ಸಿದ್ಧರಾಮಯ್ಯ ಟಿಕೆಟ್‌ ಘೋಷಿಸಿಲ್ಲ, ಆಶೀರ್ವಾದ ಮಾಡಿ ಎಂದಿದ್ದೇನೆ ಎಂದು ತಿಳಿಸಿದ್ದಾರೆ.
 


ಕೊಪ್ಪಳ (ಡಿ. 17): ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟನಿರ್ದೇಶನದ ಹೊರತಾಗಿಯೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಹೋದಲ್ಲೆಲ್ಲ ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಸಾಕಷ್ಟುಮಂದಿ ಅರ್ಜಿ ಹಾಕಿದ್ದಾರೆ. ಅವರಿಗೆಲ್ಲ ತಮಗೂ ಟಿಕೆಟ್‌ ಸಿಗಲಿದೆ ಎಂಬ ಆಸೆ ಇರುತ್ತದೆ. ದಿಢೀರ್‌ ಆಗಿ ಅಭ್ಯರ್ಥಿಗಳ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ಸಮಸ್ಯೆಯಾಗುತ್ತದೆ. ಟಿಕೆಟ್‌ಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಇತ್ಯರ್ಥ ಆಗುವ ಮೊದಲೇ ಇಂಥವರಿಗೇ ಮತ ಹಾಕಿ ಅನ್ನುವುದು ಸರಿಯಲ್ಲ ಎಂದರು.

ಟಿಕೆಟ್‌ ಘೋಷಿಸಿಲ್ಲ, ಆಶೀರ್ವಾದ ಮಾಡಿ ಎಂದಿದ್ದೇನೆ: ಸಿದ್ದು
ಈ ನಡುವೆ ಸ್ಪಷ್ಟನೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನಾನು ಕಾಂಗ್ರೆಸ್‌ದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಎಲ್ಲೂ ಘೋಷಿಸಿಲ್ಲ. ಸ್ಪರ್ಧಿಸಲು ಬಯಸಿರುವ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದಷ್ಟೇ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ, ನನ್ನ ಮಧ್ಯೆ ಜಗಳ ಶುದ್ಧ ಸುಳ್ಳು: ಡಿ.ಕೆ.ಶಿವಕುಮಾರ್‌

Tap to resize

Latest Videos

undefined

ಟಿಕೆಟ್‌ ಆಕಾಂಕ್ಷಿತರು ಕೆಪಿಸಿಸಿಗೆ ಸಲ್ಲಿಸಿರುವ ಅರ್ಜಿ ವಿಲೇವಾರಿಯಾಗುವ ಮೊದಲೇ ಅಭ್ಯರ್ಥಿಗಳ ಹೆಸರು ಘೋಷಿಸುತ್ತಿರುವ ಕ್ರಮಕ್ಕೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಈ ಸ್ಪಷ್ಟನೆ ನೀಡಿದ್ದಾರೆ. ನಾನು ಎಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಐವರಿಗೆ ಆಶೀರ್ವಾದ ಮಾಡಿ ಎಂದಿದ್ದೇನೆ. ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಕಾರಾರ‍ಯಧ್ಯಕ್ಷರಾಗಿ ಆ ರೀತಿ ಹೇಳಿರಬಹುದು ಅಷ್ಟೆಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯಗೆ ಸೋಲು ಕಟ್ಟಿಟ್ಟಬುತ್ತಿ : ಆರ್ ಅಶೋಕ್

click me!