ಬಿಜೆಪಿಯನ್ನು ಒಂದು ಕಾಲದಲ್ಲಿ ಕುಮಾರಸ್ವಾಮಿ ಅವರು ಕಮ್ಯೂನಲ್ ಗ್ರೂಪ್ ಅಂತ ಕರೆದಿದ್ದರು. ಈಗ ಅವರ ಜತೆಗೇ ಇದ್ದಾರೆ, ಜೆಡಿಎಸ್ ಅಂತ ಅವರ ಪಕ್ಷದ ಹೆಸರು ಇದೆ. ಈಗ ಆ ಸೆಕ್ಯುಲರ್ ಅನ್ನೋದನ್ನು ತೆಗೆದು ಬಿಡಲಿ ಎಂದ ವಿ.ಎಸ್.ಉಗ್ರಪ್ಪ
ಹೊಸಪೇಟೆ(ಜು.24): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈಗ ಹತಾಶರಾಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಟ್ವೀಟ್ ಮಾಡಿ ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ನೈಸ್ ತನಿಖೆ ಮಾಡಬಹುದಿತ್ತಲ್ಲ? ಯಾಕೆ ನೈಸ್ ರಸ್ತೆ ಬಗ್ಗೆ ಈಗ ಮಾತನಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
undefined
ಅರಗಿಸಿಕೊಳ್ಳಲಾಗದ ಮಗನ ಸೋಲು, ರಾಜಕೀಯ ನಿವೃತ್ತಿಯತ್ತ ಆನಂದ ಸಿಂಗ್!
ಬಿಜೆಪಿಯನ್ನು ಒಂದು ಕಾಲದಲ್ಲಿ ಕುಮಾರಸ್ವಾಮಿ ಅವರು ಕಮ್ಯೂನಲ್ ಗ್ರೂಪ್ ಅಂತ ಕರೆದಿದ್ದರು. ಈಗ ಅವರ ಜತೆಗೇ ಇದ್ದಾರೆ, ಜೆಡಿಎಸ್ ಅಂತ ಅವರ ಪಕ್ಷದ ಹೆಸರು ಇದೆ. ಈಗ ಆ ಸೆಕ್ಯುಲರ್ ಅನ್ನೋದನ್ನು ತೆಗೆದು ಬಿಡಲಿ ಎಂದರು.
ಬಿಜೆಪಿ ಹಾಗೂ ಜೆಡಿಎಸ್‌ನವರು ಇದೀಗ ಒಂದು ನಾಣ್ಯದ ಎರಡು ಮುಖಗಳಂತಾಗಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದಷ್ಟುಪ್ರತಿಪಕ್ಷಗಳು ಹೀನಾಯ ಸ್ಥಿತಿಗೆ ತಲುಪಿವೆ. ಕರ್ನಾಟಕದ ಕಾಂಗ್ರೆಸ್ ಗೆಲುವು ದೆಹಲಿಯವರೆಗೆ ತಲುಪಲಿದೆ. ಎಷ್ಟೇ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.