‘ಪೇ ಸಿಎಂ’ ಮೂಲಕ ಜನತೆಗೆ ಸರ್ಕಾರದ ಭ್ರಷ್ಟಾಚಾರ ಗೊತ್ತಾಗಲಿ: ಯತೀಂದ್ರ

By Kannadaprabha NewsFirst Published Sep 23, 2022, 12:30 PM IST
Highlights

ಅನೇಕ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ತಂದೆಯನ್ನು ಜನರು ಆಹ್ವಾನಿಸುತ್ತಿದ್ದಾರೆ. ಇನ್ನೂ ಯಾವ ಕ್ಷೇತ್ರವೆಂದು ತೀರ್ಮಾನಿಸಿಲ್ಲ. ಬಹುಶಃ ಅಕ್ಟೋಬರ್‌, ನವೆಂಬರ್‌ಗೆ ಕ್ಷೇತ್ರ ನಿರ್ಧಾರ ಮಾಡಬಹುದು ಎಂದ ಯತೀಂದ್ರ ಸಿದ್ದರಾಮಯ್ಯ 

ದಾವಣಗೆರೆ(ಸೆ.23):  ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯದ ಅನೇಕ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಜನರು ಕರೆಯುತ್ತಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬ ಬಗ್ಗೆ ಅಕ್ಟೋಬರ್‌ ಅಥವಾ ನವೆಂಬರ್‌ ಹೊತ್ತಿಗೆ ತೀರ್ಮಾನ ಮಾಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಗುರುವಾರ ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಜನ್ಮದಿನಾಚರಣೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ತಂದೆಯನ್ನು ಜನರು ಆಹ್ವಾನಿಸುತ್ತಿದ್ದಾರೆ. ಇನ್ನೂ ಯಾವ ಕ್ಷೇತ್ರವೆಂದು ತೀರ್ಮಾನಿಸಿಲ್ಲ. ಬಹುಶಃ ಅಕ್ಟೋಬರ್‌, ನವೆಂಬರ್‌ಗೆ ಕ್ಷೇತ್ರ ನಿರ್ಧಾರ ಮಾಡಬಹುದು ಎಂದರು.

PayCM: ಬಿಜೆಪಿ ಭ್ರಷ್ಟಾಚಾರ ಬಿಟ್ಹಾಕಿ, ಕ್ರಿಯೇಟಿವಿಟಿಗೆ ಮಾತ್ರ ನೆಟ್ಟಿಗರು ಫುಲ್ ಫಿದಾ

ಬಿಜೆಪಿ ಸರ್ಕಾರದಲ್ಲಿ ಶೇ.40 ಕಮೀಷನ್‌ ಪಡೆಯುತ್ತಿರುವ ಬಗ್ಗೆ ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಆದರೂ, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪೇ ಸಿಎಂ ಅಭಿಯಾನವೂ ಇದೀಗ ಶುರುವಾಗಿದೆ. ಬಿಜೆಪಿ ಸರ್ಕಾರವು ಸಾಕಷ್ಟುಭ್ರಷ್ಟಾಚಾರದಲ್ಲಿ ಮುಳುಗಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪೇ ಸಿಎಂ ಅಭಿಯಾನದ ಮೂಲಕ ನಾಡಿನ ಎಲ್ಲಾ ಜನತೆಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಗೊತ್ತಾಗಲಿದೆ ಎಂದು ಹೇಳಿದರು.

ಭ್ರಷ್ಟಾಚಾರದ ಬಗ್ಗೆ ನಾವು ಬಿಜೆಪಿ ವಿರುದ್ಧ ಆರೋಪ ಮಾಡಿಲ್ಲ. ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ನೇರವಾಗಿ ಪತ್ರ ಬರೆದು ಆರೋಪಿಸಿದೆ. ಒಂದು ರಾಜಕೀಯ ಪಕ್ಷವಾಗಿ ಆಪ್‌ನವರೂ ಪೇ ಎಕ್ಸ್‌ ಸಿಎಂ ಅಭಿಯಾನ ಮಾಡುತ್ತಿದ್ದಾರೆ. ರಾಜಕೀಯ ಪಕ್ಷವೆಂದರೆ ಆರೋಪ ಮಾಡುತ್ತಿರುತ್ತಾರೆ. ಬಿಜೆಪಿ ವಿರುದ್ಧ ಗುತ್ತಿಗೆದಾರರ ಸಂಘ ಆರೋಪ ಮಾಡಿದೆಯೇ ಹೊರತು ನಾವಲ್ಲ. ಆಪ್‌ ಸಹ ರಾಜಕೀಯ ಪಕ್ಷವಾಗಿದ್ದರಿಂದ ಆರೋಪಿಸುತ್ತಿದೆಯಷ್ಟೇ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 

click me!